ETV Bharat / state

ಈ ಬಾರಿಯೂ ಮಾರ್ಚ್​ನಲ್ಲಿ ನಡೆಯಲ್ಲ ಎಸ್​ಎಸ್​​ಎಲ್​​ಸಿ, ಪಿಯುಸಿ ಪರೀಕ್ಷೆ - PUC test

no-puc-test-in-march
ಮಾರ್ಚ್​ನಲ್ಲಿ ಇಲ್ಲ ಎಸ್​​ಎಸ್​​ಎಲ್​ಸಿ, ಪಿಯುಸಿ ಪರೀಕ್ಷೆ
author img

By

Published : Dec 22, 2020, 6:44 PM IST

Updated : Dec 22, 2020, 6:55 PM IST

18:40 December 22

ಮಾರ್ಚ್​ನಲ್ಲಿ ಇಲ್ಲ ಎಸ್​​ಎಸ್​​ಎಲ್​ಸಿ, ಪಿಯುಸಿ ಪರೀಕ್ಷೆ

ಬೆಂಗಳೂರು: ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಜನವರಿಯಿಂದ ಶಾಲಾ ಆರಂಭ ಪ್ರಕ್ರಿಯೆ ಸುರಕ್ಷಿತವಾಗಿ, ಸುಲಲಿತವಾಗಿ ನಿರ್ವಹಣೆಯಾಗಲಿದೆ. ಹಾಗೂ ಲಭ್ಯವಾಗುವ ಸೀಮಿತ ಅವಧಿಯ ಹಿನ್ನೆಲೆ  ಮಾರ್ಚ್ 2021 ರಲ್ಲಿ‌ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುವುದಿಲ್ಲವೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಖಚಿತಪಡಿಸಿದ್ದಾರೆ. 

ಈ ಸಂಬಂಧ ಮಾಹಿತಿ ನೀಡಿರುವ ಅವರು, ಮಕ್ಕಳಿಗೆ ಹೊರೆಯಾಗದ ರೀತಿ ಪಠ್ಯಕ್ರಮವನ್ನು ಅಂತಿಮ ಗೊಳಿಸಲಾಗುತ್ತದೆ. ಕನಿಷ್ಠ ಕಲಿಕೆಗೆ ಒತ್ತು ನೀಡಲಾಗುತ್ತದೆಯಲ್ಲದೇ, ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಹಿರಿಯ ತರಗತಿಗಳ ವಿದ್ಯಾರ್ಥಿಗಳ ಕಲಿಕೆಯ ಅವಶ್ಯಕತೆಗಳನ್ನು ಸಹ ಗಮನದಲ್ಲಿಟ್ಟುಕೊಂಡು ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ‌ ಎಂದು ಹೇಳಿದ್ದಾರೆ. 

ವಿಶೇಷವಾಗಿ ಗ್ರಾಮೀಣ ಭಾಗಗಳ ಮಕ್ಕಳ ಹಿತದೃಷ್ಟಿಯಿಂದ ಆರಂಭಿಸಲಾದ  ವಿದ್ಯಾಗಮ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳು ಸಹ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿರುವ ಸಚಿವರು, ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಕ್ತ ನಿಲುವನ್ನು ಹೊಂದಿದೆ ಎಂದಿದ್ದಾರೆ.

Last Updated : Dec 22, 2020, 6:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.