ETV Bharat / state

ಅರ್ಧಕ್ಕೆ ನಿಂತ ಸ್ಮಶಾನ ಅಭಿವೃದ್ಧಿ ಕಾರ್ಯ- ರಾಜಧಾನಿಯಲ್ಲೇ ಅಂತ್ಯಕ್ರಿಯೆಗಿಲ್ಲ ಸೂಕ್ತ ಜಾಗ!

ಸ್ಮಶಾನ ಕೊರತೆಯು ಪ್ರಮುಖ ಸಮಸ್ಯೆಗಳಲ್ಲೊಂದಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿನ ಸ್ಮಶಾನದ ಕೊರತೆ ಬಗ್ಗೆ ನಾಗರಿಕರು ಬಿಬಿಎಂಪಿಗೆ ದೂರು ನೀಡುತ್ತಲೇ‌ ಬಂದಿದ್ದಾರೆ. ಇದೀಗ ಸ್ಮಶಾನ ನಿರ್ಮಾಣ ಕಾರ್ಯ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವ ಹಂತದಲ್ಲೇ ಇದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.

no proper place for funeral in bangalore
ಅರ್ಧಕ್ಕೆ ನಿಂತಿದೆ ಸ್ಮಶಾನ ಅಭಿವೃದ್ಧಿ ಕಾರ್ಯ- ರಾಜ್ಯ ರಾಜಧಾನಿಯಲ್ಲೇ ಅಂತ್ಯಕ್ರಿಯೆಗಿಲ್ಲ ಸೂಕ್ತ ಜಾಗ!
author img

By

Published : Feb 24, 2021, 2:44 PM IST

ಬೆಂಗಳೂರು: ಮೃತಪಟ್ಟವರ ಅಂತ್ಯಕ್ರಿಯೆ ವ್ಯವಸ್ಥಿತವಾಗಿ, ಗೌರವಯುತವಾಗಿ ನಡೆಯುವುದಕ್ಕೆ ಸೂಕ್ತ ಅವಕಾಶ ಸಮಾಜದಲ್ಲಿ ಇರಬೇಕು. ವಿಪರ್ಯಾಸವೆಂದರೆ ಹಲವೆಡೆ ಶವಸಂಸ್ಕಾರ ನಡೆಸಲು ನಿಗದಿತ ಸ್ಥಳಗಳೇ ಇಲ್ಲ. ಸ್ಮಶಾನ ಕೊರತೆಯು ಪ್ರಮುಖ ಸಮಸ್ಯೆಗಳಲ್ಲೊಂದಾಗಿದ್ದು, ಸ್ಥಳೀಯ ಆಡಳಿತಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ಹಲವು ವರ್ಷಗಳಿಂದ ನಗರದಲ್ಲಿನ ಸ್ಮಶಾನದ ಕೊರತೆ ಬಗ್ಗೆ ನಾಗರಿಕರು ಬಿಬಿಎಂಪಿಗೆ ದೂರು ನೀಡುತ್ತಲೇ‌ ಬಂದಿದ್ದಾರೆ. ಆದರೆ ಪಾಲಿಕೆ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ. ಕೋವಿಡ್ ಸಮಯದಲ್ಲಂತೂ ಸಮಸ್ಯೆ ಹೇಳತೀರದಾಗಿತ್ತು. ಈವರೆಗೆ 4,454 ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಸ್ಮಶಾನದ ಜಾಗಕ್ಕೆ ಬೇಡಿಕೆ ಹೆಚ್ಚಾಗಿದೆ.

ಈ ಬಗ್ಗೆ ಪಾಲಿಕೆಯು ಸರ್ಕಾರದ ಗಮನಕ್ಕೆ ತಂದಿದ್ದು, ಸರ್ಕಾರ ನಗರದ ಹೊರವಲಯದಲ್ಲಿ ಜಾಗ ಗುರುತಿಸುವಂತೆ ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಈಗಾಗಲೇ ಇದ್ದ ಬೆಂಗಳೂರಿನ ಬಹುತೇಕ ರುದ್ರಭೂಮಿಗಳು ಭರ್ತಿಯಾಗಿವೆ. ಜನರಿಗೆ ಅನಾನುಕೂಲವಾಗುತ್ತಿರುವ ಬಗ್ಗೆ ಬಿಬಿಎಂಪಿಗೆ ಪದೇ-ಪದೆ ದೂರಿನ ಪತ್ರಗಳು ಬಂದ ಕಾರಣ, ಹೊಸ ಸ್ಮಶಾನ ಹಾಗೂ ವಿದ್ಯುತ್ ಚಿತಾಗಾರಗಳನ್ನು ನಗರದ ಹೊರವಲಯ ರಿಂಗ್ ರಸ್ತೆಗಳ ಪಕ್ಕದಲ್ಲಿ ನಿರ್ಮಿಸಲು 25 ಎಕರೆ ಜಾಗ ಮಂಜೂರು ಮಾಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಅದರಂತೆ ನಾಲ್ಕು ಕಡೆಗಳಲ್ಲಿ ಜಾಗ ಮಂಜೂರು ಮಾಡಿರುವ ಸರ್ಕಾರ ಎರಡು ವರ್ಷದೊಳಗೆ ಉದ್ದೇಶಿತ ಕೆಲಸಕ್ಕೆ ಜಾಗವನ್ನು ಉಪಯೋಗಿಸಿಕೊಳ್ಳುವಂತೆ ಪತ್ರ ಬರೆದಿತ್ತು. ಕೆ.ಆರ್. ಪುರ ಹೋಬಳಿ, ದೇವಸಂದ್ರ ಗ್ರಾಮದಲ್ಲಿ ಮೂವತ್ತು ಗುಂಟೆ ಜಾಗ, ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಕುದುರೆಗೆರೆ ಗ್ರಾಮದಲ್ಲಿ ಎರಡು ಎಕರೆ, ಯಲಹಂಕದ ಬಾಗಲೂರು ಗ್ರಾಮದಲ್ಲಿ ಒಂದು ಎಕರೆ, ಶಿವನಪುರದಲ್ಲಿ ಎರಡು ಎಕರೆ, ಉಲ್ಲೇಗೌಡನ ಹಳ್ಳಿಯಲ್ಲಿ ಎರಡು ಎಕರೆ ಜಾಗಗಳನ್ನು ಸ್ಮಶಾನಕ್ಕೆ ಮೀಸಲಾಗಿ ನೀಡಲಾಗಿದೆ. ಕೋವಿಡ್ ಬಳಿಕ 9 ಕಡೆಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ ಸ್ಮಶಾನ ನಿರ್ಮಾಣಕ್ಕೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವ ಹಂತದಲ್ಲೇ ಇದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸ್ಮಶಾನದ ಜಾಗಕ್ಕೆ ಬೇಲಿ ಹಾಕುವ ಕೆಲಸವೂ ನಡೆದಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯುಕ್ತ ಮಂಜುನಾಥ ಪ್ರಸಾದ್, ಸ್ಮಶಾನಕ್ಕೆ‌ ಜಾಗ ಒದಗಿಸುವ ಕಾರ್ಯ ನಡೆಯುತ್ತಿದೆ. ಸರ್ಕಾರವೂ ಒಪ್ಪಿಗೆ ಸೂಚಿಸಿದೆ. ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ‌.

ಓದಿ: ಕೋವಿಡ್​ - ಲಾಕ್​​ಡೌನ್​​ನಿಂದ ಹೆಚ್ಚಾಯಿತೇ ಅಪರಾಧ ಪ್ರಕರಣಗಳು?

ನಗರದಲ್ಲಿ ಒಟ್ಟು 200ರಷ್ಟು ಹಿಂದೂ ರುದ್ರಭೂಮಿಗಳು, 12 ವಿದ್ಯುತ್ ಚಿತಾಗಾರಗಳಿವೆ. ವಿಲ್ಸನ್ ಗಾರ್ಡನ್, ಹರಿಶ್ಚಂದ್ರ ಘಾಟ್, ಶ್ರೀರಾಂಪುರ ಸ್ಮಶಾನಗಳಲ್ಲಿ ಈಗಾಗಲೇ ಶವಗಳನ್ನು ಹೂತು ಹಾಗೂ ಸುಟ್ಟು ಜಾಗಗಳು ಭರ್ತಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಿದ್ಯುತ್ ಚಿತಾಗಾರಗಲ್ಲಿ ಶವಗಳನ್ನು ಸುಡಲಾಗುತ್ತಿದೆ. ಇನ್ನು ಒಂದೇ ಕುಟುಂಬಸ್ಥರಿದ್ದರೆ ಅದೇ ಜಾಗದಲ್ಲಿ ಹೂಳಲಾಗುತ್ತದೆ ಎಂದು ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕ ರಾಜಾ ಎಂಬುವರು ಈಟಿವಿ ಭಾರತ್ ಗೆ ತಿಳಿಸಿದರು.

ಇದೀಗ ಹೊರವಲಯದಲ್ಲಿ ನೀಡಲಾದ ಸ್ಮಶಾನ ಜಾಗಗಳಲ್ಲಿ ಬೇಲಿ ಹಾಕಿ, ಮೂಲ ಸೌಕರ್ಯ ನೀಡಲು 2019-20 ರ ಸಾಲಿನಲ್ಲೇ 40 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆ ಅನುದಾನಗಳು ಬೇರೆ ವಿಭಾಗಕ್ಕೆ ಖರ್ಚು ಮಾಡಿರುವ ಸಾಧ್ಯತೆ ಇದ್ದು, ಸ್ಮಶಾನ ನಿರ್ಮಾಣ ಕಾರ್ಯ ಇನ್ನೂ ಮರೀಚಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.