ETV Bharat / state

ಇಂದಿನಿಂದ ರಾಜ್ಯದಲ್ಲಿ ನೋ ಲಾಕ್​ಡೌನ್: ಸಿಎಂ ಘೋಷಣೆ..!

ಇನ್ಮುಂದೆ ಕರ್ನಾಟಕದ ಯಾವುದೇ ಭಾಗದಲ್ಲಿ ಲಾಕ್ ಡೌನ್ ಇರುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

author img

By

Published : Jul 22, 2020, 5:44 AM IST

No lockdown in Karnataka, No lockdown in Karnataka news, No lockdown in Bangalore, No lockdown in Bangalore news, ಕರ್ನಾಟಕ ನೋ ಲಾಕ್​ಡೌನ್​, ಕರ್ನಾಟಕದಲ್ಲಿ ಲಾಕ್​ಡೌನ್ ಇಲ್ಲ, ಕರ್ನಾಟಕದಲ್ಲಿ ಲಾಕ್​ಡೌನ್ ಇಲ್ಲ ಸುದ್ದಿ, ಬೆಂಗಳೂರು ಲಾಕ್​ಡೌನ್​ ಇಲ್ಲ, ಬೆಂಗಳೂರು ನೋ ಲಾಕ್​ಡೌನ್, ಬೆಂಗಳೂರು ಲಾಕ್​ಡೌನ್ ಇಲ್ಲ ಸುದ್ದಿ,
ಇಂದಿನಿಂದ ರಾಜ್ಯದಲ್ಲಿ ನೋ ಲಾಕ್ ಡೌನ್

ಬೆಂಗಳೂರು: ಕೊರೊನಾ ತಡೆಯಲು ಲಾಕ್ ಡೌನ್ ಮಾತ್ರ ಪರಿಹಾರವಲ್ಲ. ಇನ್ಮುಂದೆ ಬೆಂಗಳೂರು ಸೇರಿದಂತೆ ಕರ್ನಾಟಕದ ಯಾವುದೇ ಭಾಗದಲ್ಲಿ ಲಾಕ್ ಡೌನ್ ಇರುವುದಿಲ್ಲ. ನಾಡಿನ ಜನರು ನಿರಂತರವಾಗಿ ಅವರ ಕೆಲಸ ಕಾರ್ಯದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಯೂಟ್ಯೂಬ್ ಹಾಗು ಫೇಸ್ ಬುಕ್ ಲೈವ್ ಮೂಲಕ ಭಾಷಣ ಮಾಡಿದ ಸಿಎಂ, ಇನ್ಮುಂದೆ ಲಾಕ್ ಡೌನ್ ಹೇರಿಕೆ ಮಾಡುವುದಿಲ್ಲ. ಆದರೆ ಕಂಟೈನ್ಮೆಂಟ್ ಜೋನ್​ಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಒಂದು ಮನೆಯಿಂದ ಮತ್ತೊಂದು ಮನೆಗೆ ಹಾಗೂ ರಸ್ತೆಯಿಂದ ಮತ್ತೊಂದು ರಸ್ತೆಗೆ ಓಡಾಟ ಮಾಡಲು ಅವಕಾಶ ಕಲ್ಪಿಸುವುದಿಲ್ಲ. ಅಲ್ಲಿ ಮಾತ್ರ ಬಿಗಿಯಾದ ಕ್ರಮ ತೆಗೆದುಕೊಳ್ಳುತ್ತಾರೆ. ಅದಕ್ಕೆ ಸಹಕರಿಸಿ ಎಂದು ಸಿಎಂ ಮನವಿ ಮಾಡಿದ್ದಾರೆ.

ಎಲ್ಲಾ ಸಚಿವರು, ಶಾಸಕರು, ವೈದ್ಯರು, ನರ್ಸುಗಳು, ಆಶಾ ಕಾರ್ಯಕರ್ತರು ಪ್ರಾಣದ ಹಂಗು ತೊರೆದು ಕೊರೊನಾ ತಡೆಯಲು ತಮ್ಮ ಜೀವನವನ್ನು ಮುಡುಪಾಗಿಟ್ಟ ಕೆಲಸ ಮಾಡುತ್ತಿದ್ದಾರೆ. ನಿಮಗೋಸ್ಕರ ಜೀವನವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ನಾವು ಬದುಕಬೇಕೆಂದರೆ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಅನ್ನು ಧರಿಸುವುದನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ನೀಡಿದರು.

ಇಂದಿನಿಂದ ಬೆಂಗಳೂರು ಅನ್​ಲಾಕ್​!

ಇಂದಿನಿಂದ ಬೆಂಗಳೂರಿನಲ್ಲಿ ಲಾಕ್ ಡೌನ್ ಇರುವುದಿಲ್ಲ. ಜನರು ತಮ್ಮ ಕರ್ತವ್ಯದಲ್ಲಿ ತೊಡಗಬೇಕಿದೆ. ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿ ಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆದ್ದರಿಂದ ನಾವು ಕೊರೊನಾ ಸನ್ನಿವೇಶ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು, ಎಚ್ಚರಿಕೆವಹಿಸಬೇಕು, ಜನರಿಗೆ ರಕ್ಷಣೆ ಕೊಡುವ ಕೆಲಸ ಮಾಡಬೇಕು. ಅದೇ ರೀತಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಬೇಕಿದೆ ಎಂದು ಸಿಎಂ ಸ್ಪಷ್ಟವಾಗಿ ಲಾಕ್ ಡೌನ್ ಮುಂದುವರಿಕೆ ಇಲ್ಲ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.