ETV Bharat / state

ರಾಜ್ಯದ ನ್ಯಾಯಾಲಯಗಳಿಗೆ ರಜೆ ಇಲ್ಲ: ಹೈಕೋರ್ಟ್​ ಸ್ಪಷ್ಟನೆ - ಹೈಕೋರ್ಟ್ ರಿಜಿಸ್ಟಾರ್​​ ಜನರಲ್ ಅಧಿಸೂಚನೆ

ಈ ಗೊಂದಲ ನಿವಾರಿಸುವ ಸಲುವಾಗಿ ಹೈಕೋರ್ಟ್ ಜೂನ್ 2ರ ತಡ ರಾತ್ರಿ ಮತ್ತು 3ರ ಬೆಳಗ್ಗೆ ಎರಡು ನೋಟಿಫಿಕೇಶನ್ ಹೊರಡಿಸಿದ್ದು, ರಾಜ್ಯದ ಕೋರ್ಟ್​ಗಳಿಗೆ ರಜೆ ಇಲ್ಲ. ಎಸ್​ಒಪಿ ( ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಿದೆ.

HC clarified
ಹೈಕೋರ್ಟ್
author img

By

Published : Jun 3, 2020, 3:17 PM IST

ಬೆಂಗಳೂರು: ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ರಜೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಜೂನ್ 2ರಂದು ಹೈಕೋರ್ಟ್ ಹೊರಡಿಸಿದ್ದ ನೋಟಿಫಿಕೇಶನ್ ಗೊಂದಲ ಸೃಷ್ಟಿಸಿದ ಹಿನ್ನೆಲೆ ಈ ಸ್ಪಷ್ಟನೆ ನೀಡಿದೆ.

No leave for state courts: HC clarified
ನೋಟಿಫಿಕೇಶನ್
ನಿನ್ನೆ ಬೆಳಿಗ್ಗೆ ಹೈಕೋರ್ಟ್ ರಿಜಿಸ್ಟ್ರಾರ್​ ಜನರಲ್ ಅಧಿಸೂಚನೆ ಹೊರಡಿಸಿ ಕೊರೊನಾ ಹಿನ್ನೆಲೆ ಜುಲೈ 6ರವರೆಗೆ ಈ ಹಿಂದೆ ನೀಡಲಾಗಿದ್ದ ರಜೆಯನ್ನು ವಿಸ್ತರಿಸಲಾಗಿದೆ. ಲಿಮಿಟೇಶನ್ ಆಕ್ಟ್ ಸೆಕ್ಷನ್ 4ಕ್ಕೆ ಅನ್ವಯವಾಗುವಂತೆ ಕೋರ್ಟ್​ಗಳಿಗೆ ಈ ಆದೇಶ ವಿಸ್ತರಿಸಲಾಗಿದೆ ಎಂದು ನೋಟಿಫಿಕೇಶನ್ ಹೊರಡಿಸಿದ್ದರು. ಇದು ವಕೀಲರು ಸೇರಿದಂತೆ ಮಾಧ್ಯಮದವರಿಗೂ ಗೊಂದಲ ಸೃಷ್ಟಿಸಿತ್ತು. ಈ ಗೊಂದಲ ನಿವಾರಿಸುವ ಸಲುವಾಗಿ ಹೈಕೋರ್ಟ್ ಜೂನ್ 2ರ ತಡ ರಾತ್ರಿ ಮತ್ತು 3ರ ಬೆಳಗ್ಗೆ ಎರಡು ನೋಟಿಫಿಕೇಶನ್ ಹೊರಡಿಸಿದ್ದು, ರಾಜ್ಯದ ಕೋರ್ಟ್​ಗಳಿಗೆ ರಜೆ ಇಲ್ಲ. ಎಸ್​ಒಪಿ ( ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೈಕೋರ್ಟ್​ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ಕಾರ್ಯನಿರ್ವಹಿಸಲಿವೆ. ಕಾಲಮಿತಿ ಅಧಿನಿಯಮ 1963 ಕಲಂ 4ರ ಪ್ರಕಾರ ಪ್ರಕರಣಗಳ ಕಾಲಮಿತಿಗೆ ಅಷ್ಟೇ ಈ ರಜೆ ಅನ್ವಯಿಸಲಿದೆ ಎಂದು ಸ್ಪಷ್ಟಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.