ETV Bharat / state

ಚಿಣ್ಣರಿಗೆ ಇನ್ಮುಂದೆ 'ನೋ' ಹೋಮ್ ವರ್ಕ್..ಇದೇ ಶೈಕ್ಷಣಿಕ ವರ್ಷದಿಂದಲೇ ಹೊಸ ರೂಲ್ಸ್ ಜಾರಿ? - ಹೊಸ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ

ಸರ್ಕಾರಿ ಶಾಲೆಗಳಿಗೆ ಈ ವರ್ಷದಿಂದಲೇ ನಲಿ - ಕಲಿ ರೀತಿ ಮಾತ್ರ ಪುಟ್ಟ ಮಕ್ಕಳಿಗೆ ಶಿಕ್ಷಣ ಇರಲಿದೆ. 1, 2ನೇ ತರಗತಿ ಮಕ್ಕಳಿಗೆ ಇನ್ಮುಂದೆ ಮನೆ ಕೆಲಸ ಇರುವುದಿಲ್ಲ. ಸರ್ಕಾರಿ ಶಾಲೆ ರೀತಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.‌

no homework for students in karnataka
ಚಿಣ್ಣರಿಗೆ ಇನ್ಮುಂದೆ 'ನೋ' ಹೋಮ್ ವರ್ಕ್
author img

By

Published : May 21, 2022, 3:57 PM IST

ಬೆಂಗಳೂರು: ರಾಜ್ಯಾದ್ಯಂತ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಮೇ 16 ರಿಂದ ಶುರುವಾಗಿದೆ. ಈ ನಡುವೆ ಸದ್ಯದಲ್ಲಿಯೇ ಮಕ್ಕಳಿಗೆ ನೀಡುವ ಹೋಮ್ ವರ್ಕ್​​ಗೆ ಬ್ರೇಕ್ ಬೀಳುವ ನಿರೀಕ್ಷೆ ಇದ್ದು, ಇನ್ಮುಂದೆ ಶಿಕ್ಷಕರು ಎರಡನೇ ತರಗತಿವರೆಗೆ ಮಕ್ಕಳಿಗೆ ಹೋಮ್ ವರ್ಕ್ ಕೊಡುವಂತಿಲ್ಲ.

ಸರ್ಕಾರಿ ಶಾಲೆಗಳಿಗೆ ಈ ವರ್ಷದಿಂದಲೇ ನಲಿ - ಕಲಿ ರೀತಿ ಮಾತ್ರ ಪುಟ್ಟ ಮಕ್ಕಳಿಗೆ ಶಿಕ್ಷಣ ಇರಲಿದೆ. 1, 2ನೇ ತರಗತಿ ಮಕ್ಕಳಿಗೆ ಇನ್ಮುಂದೆ ಮನೆ ಕೆಲಸ ಇರುವುದಿಲ್ಲ. ಸರ್ಕಾರಿ ಶಾಲೆ ರೀತಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.‌

ಹೋಮ್ ವರ್ಕ್​ ವಿಚಾರವಾಗಿ ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆ ರಾಜ್ಯದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಎನ್​ಇಪಿ ಶಿಕ್ಷಣ ಕ್ರಮದ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ. ಆದರೆ, ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುತ್ತಾರೆ. ಇದರಿಂದ ಮಕ್ಕಳಿಗೆ ಮನೆಯಲ್ಲಿಯೂ ಒತ್ತಡ ಹೇರಲಾಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಹೀಗಾಗಿ ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಬೇಡವಾಗಿದ್ದು, ಆಟವಾಡುತ್ತಾ, ಸಮಾಜದೊಂದಿಗೆ ಬೆರೆತು ತಿಳಿದುಕೊಳ್ಳುವ ವಯಸ್ಸು ಇಂತಹ ವಯಸ್ಸಿನಲ್ಲಿ ಕನಿಷ್ಠ 2ನೇ ತರಗತಿವರೆಗೆ ಹೋಂವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಒಲವು ತೋರಿದೆ.

ಶಿಕ್ಷಣ ಸಚಿವ ಹೇಳಿದ್ದೇನು?: ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, 2ನೇ ತರಗತಿವರೆಗೆ ಮಕ್ಕಳಿಗೆ ಹೋಂ ವರ್ಕ್ ನೀಡುವಂತಿಲ್ಲ ಎಂದು ಎನ್ಇಪಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. 1-2ನೇ ತರಗತಿ ಮಕ್ಕಳಿಗೆ ಆಟ, ಡ್ರಾಮಾ, ಪದ್ಯ ಹೇಳಿಸುತ್ತಾ ಹೀಗೆ ಚಟುವಟಿಕೆ ಮೂಲಕ ಪಾಠ ಮಾಡುವುದು. ಅಕ್ಷರ ಜ್ಞಾನ ಹಾಗೂ ಸಂಖ್ಯಾ ಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತೆ ಎಂದಿದ್ದಾರೆ.

ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ಪದ್ಧತಿ ಜಾರಿಯಲ್ಲಿದೆ. ಇನ್​ಇಪಿ ಜಾರಿ ಮುನ್ನವೇ ಖಾಸಗಿ ಶಾಲೆಯಲ್ಲೂ ಹೋಂ ವರ್ಕ್ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆದಿದೆ. ಮಕ್ಕಳಿಗೆ ಒತ್ತಡ ಹೇರುವುದನ್ನು ತಡೆಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಇತ್ತ, ಪುಟ್ಟ ಮಕ್ಕಳಿಗೆ ಹೋಂ ವರ್ಕ್ ನೀಡುವುದು ದೊಡ್ಡ ಹೊರೆ. ಎರಡನೇ ತರಗತಿವರೆಗೆ ಹೋಂ ವರ್ಕ್ ನೀಡದೇ ಇರುವುದು ಒಳ್ಳೆಯದು ಎಂದು ಪೋಷಕಿ ಸುಧಾಗೌಡ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ ಸದ್ಯಕ್ಕೆ ಗಗನ ಕುಸುಮ.. ಆ ಬಗ್ಗೆ ಚರ್ಚೆಯೇ ಆಗಿಲ್ಲ : ಸಿಎಂ ಬೊಮ್ಮಾಯಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.