ಬೆಂಗಳೂರು : ಇದುವರೆಗೂ ಪರೀಕ್ಷಾ ಕೇಂದ್ರಗಳಲ್ಲಿ ಯಾರೂ ಹಿಜಾಬ್ ಹಾಕಿಲ್ಲ. ಮೊದಲ ದಿನ ಮಾತ್ರ ತೊಂದರೆ ಆಯ್ತು. ವಿದ್ಯಾರ್ಥಿನಿಯರ ಬಗ್ಗೆ ಸಂತೋಷ ಇದೆ. ಸರ್ಕಾರದ ನೋಟಿಸ್ ಪಾಲಿಸಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದುವರೆಗೂ ಕ್ಲಾಸ್ ರೂಮಲ್ಲಿ ಯಾರೂ ಹಿಜಾಬ್ ಹಾಕಿ ಬರುತ್ತಿಲ್ಲ. ಪರೀಕ್ಷೆಯಲ್ಲಿ ಇತರೆ ಧರ್ಮೀಯರು 97.8%ರಷ್ಟು ಹಾಜರಾಗಿದ್ದಾರೆ.
ಮುಸ್ಲಿಂ ಧರ್ಮೀಯರ ಪೈಕಿ 98.2%ರಷ್ಟು ಮಕ್ಕಳು ಹಾಜರಿದ್ದಾರೆ. ಊಹಾಪೋಹಕ್ಕೆ ಯಾವುದೇ ಬೆಲೆ ಇಲ್ಲ. ಹಾಜರಾತಿ ಎರಡೂ ಕಡೆ ಒಂದೇ ಸಂಖ್ಯೆಯಲ್ಲಿದೆ. ಒಟ್ಟು ಸಂಖ್ಯೆ ಜಾಸ್ತಿ ಇದೆ. ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾರೆ. ಆ ಧರ್ಮದ ಅಕ್ಕ-ತಂಗಿಯರೇ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದರು.
ಕಳೆದ ವರ್ಷ ಸುಮ್ಮನೆ ಪಾಸ್ ಮಾಡ್ತಾರೆ ಅಂದಿದ್ದಕ್ಕೆ 8ಲಕ್ಷ ಜನ ಬಂದಿದ್ದರು. ಈ ವರ್ಷ ಕೂಡ 8ಲಕ್ಷ ಜನ ಬಂದಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗೈರು ಆಗಿದ್ದಾರೆ. ಈ ಬಾರಿ ನಡೆಸಿದ ಪೂರ್ವ ಸಿದ್ಧತಾ ಮತ್ತು ಮಧ್ಯ ವಾರ್ಷಿಕ ಪರೀಕ್ಷೆಗಳು ಸಹಾಯ ಆಗಿದೆ. ಇಂಗ್ಲಿಷ್ ಪರೀಕ್ಷೆಗೆ ಜಾಸ್ತಿ ಜನ ಗೈರಾಗಿದ್ದರು ಎಂದರು.
ಸಕಾಲ ಬಂದ ಬಳಿಕ ಬದಲಾವಣೆ ಆಗಿದೆ : ಸಕಾಲ ಬಂದ ನಂತರ ಸಾಕಷ್ಟು ಬದಲಾವಣೆ ಆಗಿದೆ. ಅಮೆರಿಕಾದ ಸರ್ಕಾರದ ವ್ಯವಸ್ಥೆ, ಭಾರತದಲ್ಲೂ ಆಗಬೇಕು. ಅಲ್ಲಿ ಕೆಲಸ ಮಾಡಿದರೆ ಮಾತ್ರ ಉಳಿಯುತ್ತಾರೆ, ಇಲ್ಲದಿದ್ದರೆ ನೋಟಿಸ್ ಕೊಡುತ್ತಾರೆ ಎಂದು ತಿಳಿಸಿದರು. ಹಾಗೆ ಇಲ್ಲಿಯೂ ಕೆಲಸ ಮಾಡಬೇಕು.
ಹೊಸ ವೆಬ್‌ಸೈಟ್‌ನಲ್ಲಿ ಸಾಕಷ್ಟು ಸುಧಾರಣೆ ಇದೆ. ಸಕಾಲದಲ್ಲಿ ತತ್ಕಾಲ್ ಸೇವೆ ತರುವಂತೆ ಮನವಿ ಬಂದಿದೆ. ಖಂಡಿತ ಅದನ್ನೂ ಮುಂದಿನ ದಿನಗಳಲ್ಲಿ ತರುವ ಕೆಲಸ ಆಗಲಿದೆ. ಮಕ್ಕಳಿಗೆ ಆದಾಯ ದೃಢೀಕರಣ ಪತ್ರ ಬೇಗ ಸಿಗಬೇಕು. ಆದರೆ, ಆಗುತ್ತಿಲ್ಲ. ಇದಕ್ಕೆ ಇದಕ್ಕೆ ತತ್ಕಾಲ್ ಸಹಕಾರವಾಗಲಿದೆ.
ಇದನ್ನೂ ಓದಿ: ರಾಷ್ಟ್ರದ್ರೋಹಿಗಳಿಗೆ ಸಿದ್ದರಾಮಯ್ಯ-ಡಿಕೆಶಿ-ಹೆಚ್‌ಡಿಕೆ ಬೆಂಬಲ.. ಇದು ಸಂವಿಧಾನ, ಸಮಾಜಕ್ಕೆ ದ್ರೋಹ ಬಗೆದಂತೆ: ಈಶ್ವರಪ್ಪ