ETV Bharat / state

ಶಾಲಾ-ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಚಟುವಟಿಕೆಗಳು ನಡೆಯದಂತೆ ಕ್ರಮ: ಪ್ರೊ. ವೇಣುಗೋಪಾಲ್ - University of Bangalore

ಎನ್ಎಸ್ಎಸ್ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ, "ಮಾದಕ ದುರುಪಯೋಗ ಅರಿವು ಹಾಗೂ ತಡೆಗಟ್ಟುವಿಕೆ" ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ವೇಣುಗೋಪಾಲ್ ಉದ್ಘಾಟಿಸಿದ್ರು. ಶಾಲಾ-ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಚಟುವಟಿಕೆಗಳು ನಡೆಯದ ಹಾಗೆ ಕ್ರಮವಹಿಸಬೇಕು ಎಂದು ಅವರು ಇದೆ ವೇಳೆ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎನ್​ಎಸ್​ಎಸ್​ ದಿನಾಚರಣೆ

author img

By

Published : Sep 24, 2020, 7:38 PM IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸೌಂದರ್ಯ ಕಾಲೇಜು ವತಿಯಿಂದ ಎನ್ಎಸ್ಎಸ್ ದಿನಾಚರಣೆಯ ಅಂಗವಾಗಿ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

"ಮಾದಕ ದುರುಪಯೋಗ ಅರಿವು ಹಾಗೂ ತಡೆಗಟ್ಟುವಿಕೆ" ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ವೇಣುಗೋಪಾಲ್ ನೆರವೇರಿಸಿದರು.‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಎನ್​​ಎಸ್ಎಸ್ ಅಧಿಕಾರಿ ಡಾಕ್ಟರ್ ಗಣನಾಥ ಶೆಟ್ಟಿ ಎಕ್ಕಾರ್ ಹಾಗೂ ಸೌಂದರ್ಯ ಕಾಲೇಜಿನ ಮಂಡಳಿ ಅಧ್ಯಕ್ಷ ಸೌಂದರ್ಯ ಮಂಜಪ್ಪ ಭಾಗಿಯಾಗಿದ್ದರು.

ಇದೇ ವೇಳೆ ಮಾತಾನಾಡಿದ ಪ್ರೊ. ವೇಣುಗೋಪಾಲ್ ಎನ್ಎಸ್ಎಸ್ ದಿನಾಚರಣೆಯಂದು ಬಹಳ ಉಪಯುಕ್ತವಾದ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮವಾದ ಮಾದಕ ವಸ್ತುಗಳ ದುರುಪಯೋಗದ ಅರಿವು ಹಾಗೂ ತಡೆಗಟ್ಟುವಿಕೆಯ ಕಾರ್ಯಗಾರವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಮಾದಕ ವಸ್ತುಗಳ ತಯಾರಿಕೆ, ಹಂಚಿಕೆ, ಬಳಕೆ ಇತ್ಯಾದಿ ಕೆಲಸಗಳಲ್ಲಿ ತೊಡಗುವುದು ನರ್ಕೋಟಿಕ್ ಡ್ರಗ್ಸ್ (ಎನ್​​.ಡಿ.ಪಿ.ಎಸ್)ಕಾಯ್ದೆಗೆ ವಿರುದ್ಧವಾದುದು. ಈ ಕಾಯ್ದೆಯ ಅನುಷ್ಠಾನ ಯಥಾವತ್ತಾಗಿ ಆಗಬೇಕು ಎಂದು ತಿಳಿಸಿದರು. ಶಾಲಾ-ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಚಟುವಟಿಕೆಗಳು ನಡೆಯದ ಹಾಗೆ ಕ್ರಮವಹಿಸಬೇಕು ಎಂದು ತಿಳಿಸಿದರು. ಬಹುಮುಖ್ಯವಾಗಿ ನಮ್ಮ 'ವಿಶ್ವವಿದ್ಯಾಲಯವನ್ನು ಮಾದಕ ರಹಿತ ಆವರಣ' ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎನ್​ಎಸ್​ಎಸ್​ ದಿನಾಚರಣೆ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎನ್​ಎಸ್​ಎಸ್​ ದಿನಾಚರಣೆ

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ,ಕಾನೂನು ಹಾಗೂ ಉತ್ತಮ ಆಡಳಿತ ಕೇಂದ್ರದ ಪ್ರೊ. ಪುನೀತ್ ರವರು ಮಾತನಾಡುತ್ತಾ, ಮಾದಕ ದ್ರವ್ಯ ಹಾಗೂ ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆ1985 ರ ಪ್ರಕಾರ ಮಾದಕ ವಸ್ತುಗಳನ್ನು ಮಾರುವುದು, ಮಾದಕ ವಸ್ತುಗಳನ್ನು ತಯಾರಿಸುವುದು, ಹಂಚುವುದು , ಸೇವಿಸುವುದು ಈ ಕಾಯ್ದೆಯಲ್ಲಿ ಅಧಿಕಾರಿಗಳ ಅಧಿಕಾರ ಮತ್ತು ಕಾರ್ಯಗಳು ಹಾಗೂ ಬಹುಮುಖ್ಯವಾಗಿ ಕಾಯ್ದೆಯಲ್ಲಿ ಬರುವ ಶಿಕ್ಷೆ ಪ್ರಮಾಣವಾದ ಅಜೀವ ಕಾರವಾಸದಿಂದ ಮರಣದಂಡನೆಯವರೆಗೂ ಬರುವಂತಹ ಹಲವಾರು ಉಪಬಂಧಗಳನ್ನು ವಿವರಿಸಿದರು. ಸಂವಿಧಾನದ ಪ್ರಕಾರ ರಾಜ್ಯವು ಮಾದಕ ವಸ್ತುಗಳನ್ನು ತಡೆಗಟ್ಟುವ ಸಂಬಂಧ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕು ಎಂದು ತಿಳಿಸಿದರು.

ವೈದ್ಯರಾದ, ಡಾ. ಅಂಜನಪ್ಪ ಮಾತನಾಡುತ್ತಾ, ಇಂದಿನ ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದಲ್ಲಿ ಆಗುವ ವ್ಯತಿರಿಕ್ತ ಪರಿಣಾಮವನ್ನು ತಿಳಿದುಕೊಂಡರೆ, ಸೇವನೆ ಮಾಡುವುದನ್ನು ಬಿಡಬೇಕಾಗುತ್ತದೆ. ಮಾದಕ ವಸ್ತುಗಳ ಸೇವನೆ, ಎಲ್ಲಾ ರೋಗಗಳನ್ನು ಆಹ್ವಾನಿಸಿಕೊಂಡಂತೆ ಹಾಗೂ ಖಿನ್ನತೆಗೆ ಒಳಪಡಿಸುತ್ತದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.