ETV Bharat / state

ಟ್ರ್ಯಾಕರ್​ ರ‍್ಯಾಲಿಗೆ ಕಾಂಗ್ರೆಸ್ ಬಾವುಟ ಬೇಡ; ರಾಷ್ಟ್ರಧ್ವಜ ಹಿಡಿದು ಬನ್ನಿ: ಸಚಿನ್ ಮೀಗಾ - ಭಾರತಿಯ ಕಿಸಾನ್ ಸಭಾ

ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕರ್​ ರ‍್ಯಾಲಿಯಲ್ಲಿ ಭಾಗವಹಿಸುವ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಪಕ್ಷದ ಬಾವುಟ ಬಳಸುವಂತಿಲ್ಲ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.

no-congress-flag-for-tractor-rally: Sachin miga
ಟ್ರ್ಯಾಕರ್​ ರ‍್ಯಾಲಿ
author img

By

Published : Jan 26, 2021, 3:52 AM IST

ಬೆಂಗಳೂರು: ಟ್ರ್ಯಾಕರ್​ ರ‍್ಯಾಲಿಯಲ್ಲಿ ಭಾಗವಹಿಸುವ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಪಕ್ಷದ ಬಾವುಟ ಬಳಸುವಂತಿಲ್ಲ. ಬದಲಾಗಿ ರಾಷ್ಟ್ರಧ್ವಜ ಹಿಡಿದು ಬನ್ನಿ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ತಮ್ಮ ಟ್ರಾಕ್ಟರ್ ಹಾಗು ಇತರ ವಾಹನಗಳಿಗೆ ರಾಷ್ಟ್ರ ಧ್ವಜ ಹಾಕಿಕೊಂಡು ಬರಬೇಕು ಯಾರು ಕಾಂಗ್ರೆಸ್ ಬಾವುಟವಾಗಲಿ ಕಾಂಗ್ರೆಸ್ ಮುಖಂಡರ ಭಾವಚಿತ್ರದ ಪೋಸ್ಟರ್ ತರಬಾರದು ಹಾಗೂ ಪ್ರದರ್ಶನ ಮಾಡಬಾರದು. ಹಸಿರು ಶಾಲು ಧರಿಸಿ ತ್ರಿವರ್ಣ ಬಣ್ಣದ ರಾಷ್ಟ್ರಧ್ವಜ ಹಿಡಿದು ಭಾಗವಹಿಸುವಂತೆ ಕಿಸಾನ್ ಪದಾದಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಅಶೋಕ್ ಹೇಳಿಕೆಗೆ ಖಂಡನೆ:

ದೆಹಲಿಯಲ್ಲಿ ಹಾಗೂ ರಾಜ್ಯದಲ್ಲಿ ರೈತ ಮುಖಂಡರುಗಳು 26ರಂದು ಕರೆ ಕೊಟ್ಟಿರುವ ಚಳುವಳಿಗೆ ಕಾಂಗ್ರೆಸ್ ಪ್ರಾಯೋಜಿತ ಎಂದಿರುವ ಸಚಿವ ಆರ್. ಅಶೋಕ್ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಸಚಿನ್ ಮೀಗಾ ತಿಳಿಸಿದ್ದಾರೆ.

ರೈತ ನಾಯಕರು ಕರೆ ಕೊಟ್ಟಿರುವ ಚಳವಳಿಗೆ ಬಿಜೆಪಿಯ ಅಂಗ ಭಾರತಿಯ ಕಿಸಾನ್ ಸಭಾ ಕೂಡ ಬೆಂಬಲ ಸೂಚಿಸಿದೆ. ಈ ಹಿಂದೆ ಕಾಂಗ್ರೆಸ್ ಅಡಳಿತವಿದ್ದ ಸಂದರ್ಭದಲ್ಲಿ ರಾಷ್ಟ್ರದ ರಾಜ್ಯದ ರೈತ ಮುಖಂಡರುಗಳು ಹಲವಾರು ಬಾರಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಆದರೆ ಎಂದು ಕಾಂಗ್ರೆಸ್ ಮುಖಂಡರು ಇದು ಬಿಜೆಪಿ ಪ್ರಾಯೋಜಿತ ಹೋರಾಟ ಅಂತ ಹೇಳಿಕೆಗಳನ್ನು ಕೊಟ್ಟ ಉದಾರಣೆಗಳಿಲ್ಲಾ. ಹೀಗಿರುವಾಗ ಸಚಿವ ಅಶೋಕ್ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ರಾಜ್ಯದ ರೈತ ಮುಖಂಡರ ಕ್ಷೇಮೆ ಕೇಳಬೇಕು. ತಪ್ಪಿದ್ದಲ್ಲಿ ನಾಳೆ ಗಣರಾಜ್ಯೋತ್ಸವದ ದಿನದಂದು ಅಶೋಕ್ ನಿವಾಸದ ಎದುರು ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಕ್ಷೌರ ಮಾಡುವುದು ತಮ್ಮ ತಮ್ಮ ತಲೆ ಬೋಳಿಸುವ ಮೂಲಕ ಪ್ರತಿಭಟಿಸಿ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.