ಆನೇಕಲ್: ಜಗತ್ತಿನಲ್ಲಿ ಆರೋಗ್ಯದ ಮಹತ್ವ ಈಗೀಗ ಅರ್ಥವಾದಂತಿದೆ. ಆರೋಗ್ಯವೇ ಭಾಗ್ಯ ಎನ್ನುವ ಈ ಕಾಲದಲ್ಲಿ ಸ್ವಚ್ಚತೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದ್ರೆ ಈ ಆಸ್ಪತ್ರೆಯಲ್ಲಿ ಅದ್ಯಾವುದೂ ಇಲ್ಲ.
ಆನೇಕಲ್ ಸುತ್ತಮುತ್ತಲ ಪಾಸಿಟಿವ್ ಕೇಸ್ಗಳ ಹಾಗೂ ಕ್ವಾರಂಟೈನ್ ಮಾಡುವ ಯಡವನಹಳ್ಳಿ ಆಕ್ಸ್ಫರ್ಡ್ ಆಸ್ಪತ್ರೆಯಲ್ಲಿನ ಈ ಕರಾಳ ವಾಸ್ತವಕ್ಕೆ ರೋಗಿಗಳು ದಂಗಾಗಿದ್ದಾರೆ. ಸ್ವಚ್ಛತೆಗೂ ಈ ಆಸ್ಪತ್ರೆಗೂ ಸಂಬಂಧವೇ ಇಲ್ಲದಂತಿದೆ ಇಲ್ಲಿನ ಪರಿಸ್ಥಿತಿ. ಕಸ, ಗಲೀಜು ಕಣ್ಣಿಗೆ ರಾಚುವಂತೆ ರಾಶಿ ಬಿದ್ದಿದೆ.
ಇನ್ನು ಇದೇ ವಿಚಾರವಾಗಿ ಸಾಕಷ್ಟು ದಿನಗಳಿಂದ ಇಂತಹ ಒಂದು ಚರ್ಚೆಗೆ ಗುರಿಯಾಗಿರುವ ಆಸ್ಪತ್ರೆ ಇದಾಗಿದ್ದು, ಸುತ್ತಮುತ್ತಲ ಹೊರ - ಒಳರೋಗಿಗಳಿಗೆ ಆಸ್ಪತ್ರೆಯ ಬಗ್ಗೆ ತಾತ್ಸಾರ ಮೂಡುವಂತಾಗಿದೆ. ತಿಂದಂತಹ ತಿಂಡಿ, ಊಟದ ವೇಸ್ಟ್ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಒಳರೋಗಿಯ ಕೊಠಡಿಯ ಪಕ್ಕದಲ್ಲಿಯೇ ಕಸದ ರಾಶಿ ರಾಶಿ ಗೋಚರಿಸುತ್ತಿದೆ.