ETV Bharat / state

ವಿಕ್ಟೋರಿಯಾದಲ್ಲಿ ಕೊರೊನಾಗಾಗಿಯೇ 750 ಹಾಸಿಗೆಯ ವ್ಯವಸ್ಥೆ.. ಸಚಿವ ಡಾ. ಕೆ ಸುಧಾಕರ್​​​ - Njanjanagudu and Gauribidanur under Red Zone list

ನಂಜನಗೂಡು ಮತ್ತು ಗೌರಿಬಿದನೂರು ರೆಡ್ ಝೋನ್ ಪಟ್ಟಿಗೆ ಸೇರಿಸಲಾಗಿದೆ. ವಿಕ್ಟೋರಿಯಾ ಪಕ್ಕದಲ್ಲೇ ಇರುವ ಟ್ರಾಮಾ ಸೆಂಟರ್​​​ನಲ್ಲಿ 22 ಜನ ಸೋಂಕಿತರನ್ನ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ನಂಜನಗೂಡು ಮತ್ತು ಗೌರಿಬಿದನೂರು ರೆಡ್ ಜೋನ್ ಪಟ್ಟಿಗೆ ಸೇರ್ಪಡೆ

author img

By

Published : Apr 6, 2020, 4:42 PM IST

Updated : Apr 6, 2020, 5:21 PM IST

ಬೆಂಗಳೂರು : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾಗಾಗಿಯೇ ಪ್ರತ್ಯೇಕ ಕಟ್ಟಡದಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭೇಟಿ ನೀಡಿದರು. ಎಲ್ಲವನ್ನು ಪರಿಶೀಲಿಸಿದ ಅವರು ಕೋವಿಡ್-19ಗಾಗಿ 750 ಹಾಸಿಗೆಯನ್ನ ಸೀಮಿತಗೊಳ್ಳಿಸಲಾಗಿದೆ. 40 ಹಾಸಿಗೆಗಳಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಐಸಿಯು ಬೆಡ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.

ವಿಕ್ಟೋರಿಯಾದಲ್ಲಿ ಕೊರೊನಾಗಾಗಿಯೇ 750 ಹಾಸಿಗೆಯ ವ್ಯವಸ್ಥೆ

ನಂಜಗೂಡಿನಲ್ಲಿ ಆ ಪ್ರಮಾಣದ ಸೋಂಕು ತಗುಲಲಿದೆ ಎಂಬುದನ್ನ ಅಂದಾಜಿಸಿರಲಿಲ್ಲ. ಆದರೆ, ಈಗ ದಿನೇದಿನೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ನಂಜನಗೂಡು ಮತ್ತು ಗೌರಿಬಿದನೂರು ರೆಡ್ ಝೋನ್ ಪಟ್ಟಿಗೆ ಸೇರಿಸಲಾಗಿದೆ. ವಿಕ್ಟೋರಿಯಾ ಪಕ್ಕದಲ್ಲೇ ಇರುವ ಟ್ರಾಮಾ ಸೆಂಟರ್​​​ನಲ್ಲಿ 22 ಜನ ಸೋಂಕಿತರನ್ನ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತರಿಗೆ ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರವನ್ನ ನೀಡಲಾಗುತ್ತಿದೆ. ಜೊತೆಗೆ ತಾಜ್ ಹೋಟೆಲ್ ಸೇರಿ ಹಲವು ಹೋಟೆಲ್‌ಗಳಿಂದ ವೈದ್ಯರಿಗೆ, ನರ್ಸ್​ಗಳಿಗೂ ಎನ್‌ಜಿಒಗಳು ಪೌಷ್ಠಿಕ ಆಹಾರದ ವ್ಯವಸ್ಥೆ ಮಾಡುತ್ತಿವೆ ಎಂದರು. ‌ಸೋಮವಾರ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಲ್ಯಾಬ್​​​ಗಳಲ್ಲಿ ಎಷ್ಟು ಟೆಸ್ಟ್ ಮಾಡಲಾಗುತ್ತೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತೆ ಎಂದು ಸಚಿವ ಸುಧಾಕರ್ ತಿಳಿಸಿದರು.

Last Updated : Apr 6, 2020, 5:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.