ETV Bharat / state

ವಿಷ್ಣುವರ್ಧನ್​​ ಅಭಿನಯದ 'ನಿಷ್ಕರ್ಷ' ರೀ-ರಿಲೀಸ್... ಹಿಂದಿ, ಕನ್ನಡದಲ್ಲಿ ತೆರೆ ಮೇಲೆ! - kannada films

ಸೆಪ್ಟಂಬರ್ 20ರಂದು ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಬರೋಬ್ಬರಿ 100 ಚಿತ್ರ ಮಂದಿರಗಳಲ್ಲಿ ನಿಷ್ಕರ್ಷ ಸಿನಿಮಾ ಮತ್ತೆ ಬಿಡುಗಡೆಯಾಗಲಿದೆ ಎಂದು ನಟ, ನಿರ್ಮಾಪಕ ಬಿ.ಸಿ.ಪಾಟೀಲ್ ತಿಳಿಸಿದರು.

ಸೆ.20ರಿಂದ ನಿಷ್ಕರ್ಷ ಸಿನಿಮಾ ತೆರೆ ಕಾಣಲಿದೆ
author img

By

Published : Sep 6, 2019, 2:37 AM IST

ಬೆಂಗಳೂರು: 1993ರಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆ ಕಂಡು ಸೂಪರ್ ಹಿಟ್ ಸಾಲಿನಲ್ಲಿ ಮಿಂಚಿ, ಹಲವು ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿದ 'ನಿಷ್ಕರ್ಷ' ಸಿನಿಮಾ ಸೆಪ್ಟಂಬರ್​ 20 ಮತ್ತೆ ಸೆಟ್​ ಏರಲಿದೆ. ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಆಕ್ಷನ್ ಕಟ್ ಹೇಳಿ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಥ್ರಿಲ್ಲರ್ ಕಥೆ ಆಧರಿತ ಸಿನಿಮಾ ಇದಾಗಿದ್ದು, ವಿಷ್ಣುವರ್ಧನ್ ಜನ್ಮ ದಿನದ ಪ್ರಯುಕ್ತ ನಿರ್ಮಾಪಕ, ನಟ ಬಿ.ಸಿ.ಪಾಟೀಲ್ ರೀ-ರಿಲೀಸ್​​ ಮಾಡುತ್ತಿದ್ದಾರೆ.

ಸೆ.20ರಿಂದ ನಿಷ್ಕರ್ಷ ಸಿನಿಮಾ ತೆರೆ ಕಾಣಲಿದೆ

2 ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ನಿಷ್ಕರ್ಷ, ಬರೋಬ್ಬರಿ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ನಿರ್ಮಾಪಕ ಬಿ.ಸಿ.ಪಾಟೀಲ್ ಅವರು 6 ತಿಂಗಳ ಸತತ ಪರಿಶ್ರಮದಿಂದ ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸೌಂಡ್​ನೊಂದಿಗೆ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬರೋಬ್ಬರಿ 100 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.

ಬಿ.ಸಿ.ಪಾಟೀಲ್, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹಾಗೂ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡುವ ಮೂಲಕ ಗಮನ ಸೆಳೆದ ಸುಮನ್ ನಗರಕರ್ ಮತ್ತು ಈ ಸಿನಿಮಾ ಮೂಲಕ ಖಳ ನಟನಾಗಿ ಎಂಟ್ರಿ ಕೊಟ್ಟ ಸಂಗೀತ ನಿರ್ದೇಶಕ ಗುರುಕಿರಣ್, ಸೃಷ್ಠಿ ಪಾಟೀಲ್ ಹಾಗೂ ಅಳಿಯ ನಿಷ್ಕರ್ಷ ಸಿನಿಮಾದ ಸಕ್ಸಸ್ ಕಹಾನಿಯನ್ನು ಇದೀಗ ಮೆಲುಕು ಹಾಕಿದ್ದರು.1 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಸಿಲ್ವರ್ ಸ್ಕ್ರೀನ್​ ಮೇಲೆ ಅಬ್ಬರಿಸಲು ಮತ್ತೆ ಬರುತ್ತಿದೆ.

Intro: 1993 ರಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಸಿನಿಮಾ ನಿಷ್ಕರ್ಷ. ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಆಕ್ಷನ್ ಕಟ್ ಹೇಳಿದ್ದ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಥ್ರಿಲ್ಲರ್ ಕಥೆ ಆಧರಿಸಿದ ನಿಷ್ಕರ್ಷ ಸಿನಿಮಾ ಡಾಕ್ಟರ್ ವಿಷ್ಣುವರ್ಧನ್ ಹುಟ್ಟು ಹಬ್ಬದ ಪ್ರಯುಕ್ತ ನಿರ್ಮಾಪಕ ಬಿಸಿ ಪಾಟೀಲ್ ರೀ ರಿಲೀಸು ಮಾಡ್ತಾ ಇದ್ದಾರೆ. ಅಂದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ನಿಷ್ಕರ್ಷ ಸಿನಿಮಾ ಅವತ್ತಿನ ಕಾಲದಲ್ಲಿ ಬರೋಬ್ಬರಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿತ್ತು

Body:ಇಂತಹ ಸೂಪರ್ ಸಿನಿಮಾವನ್ನ ನಿರ್ಮಾಪಕ ಬಿಸಿ ಪಾಟೀಲ್ ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸೌಂಡ್ ನೊಂದಿಗೆ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸೆಪ್ಟೆಂಬರ್ 20ರಂದು ಬರೋಬ್ಬರಿ 100 ಚಿತ್ರಮಂದಿರಗಳಲ್ಲಿ ನಿಷ್ಕರ್ಷ ಸಿನಿಮಾ ರಿಲೀಸ್ ಆಗ್ತಾ ಇದೆ ಈ ಬಗ್ಗೆ ಹಂಚಿಕೊಳ್ಳುವುದಕ್ಕೆ ನಿರ್ಮಾಪಕ ಬಿಸಿ ಪಾಟೀಲ್ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹಾಗೂ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡುವ ಮೂಲಕ ಗಮನ ಸೆಳೆದ ಸುಮನ್ ನಗರಿಕರ್ ಮತ್ತು ನಿಷ್ಕರ್ಷ ಸಿನಿಮಾ ಮೂಲಕ ಖಳನಟನಾಗಿ ಎಂಟ್ರಿ ಕೊಟ್ಟ ಸಂಗೀತ ನಿರ್ದೇಶಕ ಗುರುಕಿರಣ್ ಬಿಸಿ ಪಾಟೀಲ್ ಜೊತೆಗೆ ಬಿಸಿ ಪಾಟೀಲ್ 24 ಮಗಳು ಸೃಷ್ಠಿ ಪಾಟೀಲ್ ಹಾಗೂ ಅಳಿಯ ನಿಷ್ಕರ್ಷ ಸಿನಿಮಾದ ಸಕ್ಸಸ್ ಕಹಾನಿ ಬಗ್ಗೆ ಹಂಚಿಕೊಂಡರು ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹೇಳುವ ಪ್ರಕಾರ ನಿಷ್ಕರ್ಷ ಸಿನಿಮಾ ಕಥೆ ಹುಟ್ಟಿದೆ ಹೇಗೆ ಹಾಗೂ ಬಿಸಿ ಪಾಟೀಲ್ ಸಿನಿಮಾ ಮೂಲಕ ಖಳನಟನಾಗಿ ಎಂಟ್ರಿಕೊಟ್ಟ ಬಗ್ಗೆ ಸುಮನ್ ನಗರಿಕರ್ ಈ ಸಿನಿಮಾ ಮೂಲಕ ಎಷ್ಟು ಖ್ಯಾತಿ ಹೊಂದಿದ್ದರು ಎಂಬುದರ ಬಗ್ಗೆ ಇಡೀ ಚಿತ್ರತಂಡ ಹಂಚಿಕೊಂಡಿತ್ತು

Conclusion: ನಿಷ್ಕರ್ಷ ಸಿನಿಮಾವನ್ನು ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸೌಂಡ್ ಮಾಡೋದಕ್ಕೆ ಆರು ತಿಂಗಳು ಶ್ರಮ ಪಡಬೇಕಾಗಿದೆ ಅಂದು 60 ಲಕ್ಷದಲ್ಲಿ ನಿರ್ಮಾಣವಾದ ನಿಷ್ಕರ್ಷ ಸಿನಿಮಾ ಇಂದು ಒಂದು ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಸಿಲ್ವರ್ ಸ್ಕ್ರೀನ್ ಅಲ್ಲಿ ಅಬ್ಬರಿಸಲು ಮತ್ತೆ ಬರ್ತಾ ಇದೆ ಬಿಗ್ ಸ್ಕ್ರೀನ್ ನಲ್ಲಿ ಇವತ್ತಿನ ಯುವಜನತೆ ನಿಷ್ಕರ್ಷ ಸಿನಿಮಾವನ್ನು ಯಾವ ರೀತಿ ಅಪ್ಪಿಕೊಳ್ಳುತ್ತಾರೆ ಅನ್ನೋದು ಇದೇ ತಿಂಗಳು ಗೊತ್ತಾಗಲಿದೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.