ETV Bharat / state

ಒಂಬತ್ತನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ದೆಹಲಿಗೆ ಹೊರಟ ಮುಖಂಡರು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ, ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಇಂದು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ ನಂತರ, ರೈತ ಮತ್ತು ದಲಿತ ನಾಯಕರು ದೆಹಲಿ ವಿಮಾನವನ್ನು ಏರಿ ರಾಷ್ಟ್ರ ರಾಜಧಾನಿಯತ್ತಾ ಪ್ರಯಾಣ ಬೆಳೆಸಿದ್ದಾರೆ.

ರೈತರ ಪ್ರತಿಭಟನೆ
ರೈತರ ಪ್ರತಿಭಟನೆ
author img

By

Published : Dec 24, 2020, 2:54 PM IST

Updated : Dec 24, 2020, 3:22 PM IST

ಬೆಂಗಳೂರು: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ರೈತರ ಹೋರಾಟ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದೆ. ನಗರದ ಮೌರ್ಯ ಸರ್ಕಲ್​ನಲ್ಲಿ ವಿಶೇಷ ಪ್ರತಿಭಟನೆ ನಡೆಸಲಾಗುತ್ತಿದೆ.

ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಬಡಗಲಪುರ ನಾಗೇಂದ್ರ , ಕುರುಬೂರು ಶಾಂತಕುಮಾರ್ ಹಾಗೂ ಇನ್ನಿತರ ರೈತ ಮುಖಂಡರು ಭಾಗವಹಿಸಿದ್ದರು. ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಮುಖ್ಯಮಂತ್ರಿಗಳು ನಿಜವಾದ ರೈತರನ್ನು ಸಂವಾದಕ್ಕೆ ಕರೆಯಲ್ಲ. ರೈತರನ್ನು ಸರ್ಕಾರ ಕರೆಯೋಕೆ ಸಾಧ್ಯವೇ ಇಲ್ಲ. ಅವರಿಗೆ ಬೇಕಾದ ಕೆಲ ಗುಂಪಿನೊಂದಿಗೆ ಸಂವಾದ ಮಾಡುತ್ತಿದ್ದಾರೆ. ಈ ಮೂಲಕ ಜನರನ್ನು ಸರ್ಕಾರ ಯಾಮಾರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೆಹಲಿಗೆ ಹೊರಟ ರೈತ ಮುಖಂಡರು

ಕಳೆದ 29 ದಿನದಿಂದ ದೆಹಲಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಚಳವಳಿಗಾರರನ್ನು ಹತ್ತಿಕಲು ಎಲ್ಲ ತಂತ್ರವನ್ನು ನಡೆಸುತ್ತಿದೆ. ಸುಪ್ರೀಂಕೋರ್ಟ್ ಹೇಳಿದ ಮೇಲೆ ಮಾತುಕತೆಗೆ ಕರೆಯುತ್ತಿದ್ದಾರೆ. ಇದಕ್ಕೂ ಮುಂಚೆ ಇವರಿಗೆ ಕಾನೂನು ಜ್ಞಾನ ಇರಲಿಲ್ಲವ ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರದ ಧೋರಣೆಗಳನ್ನ ವಿರೋಧಿಸಿ ನಾವು ಕರ್ನಾಟಕದಲ್ಲಿ ನಿರಂತರ ಚಳವಳಿ ಮಾಡುತ್ತಿದ್ದೇವೆ. ರೈತ, ದಲಿತ, ಕಾರ್ಮಿಕ ಸಂಘಟನೆಯ 25 ಪ್ರತಿನಿಧಿಗಳು ದೆಹಲಿಗೆ ತೆರಳುತ್ತಿದ್ದೇವೆ. ಅಲ್ಲಿ ಐದು ಕಡೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ ಎಂದು ವಿಶೇಷ ವಿಡಿಯೋದಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ಓದಿ:ಕೃಷಿ ಕಾಯ್ದೆ ವಿರೋಧಿಸಿ ರೈತರ ಧರಣಿ : ಅರೆ ಬೆತ್ತಲೆಯಾಗಿ ಬೀದಿಯಲ್ಲಿ ನಿಂತ ಅನ್ನದಾತರು

25, 26 , 27 ರ ಚಳವಳಿಯಲ್ಲಿ ಭಾಗವಹಿಸುತ್ತೇವೆ. ಕರ್ನಾಟಕದ ರೈತ, ದಲಿತ, ಕಾರ್ಮಿಕರ ಬೆಂಬಲ ಈ ಚಳವಳಿಗೆ ಇದೆ ಎಂದು ತೋರಿಸುತ್ತೇವೆ. ನಾವು 6 ಜನ ಪ್ರತಿನಿಧಿಗಳು ಈಗ ಹೋಗುತ್ತಿದ್ದೇವೆ, ಸಂಜೆ, ನಾಳೆ ಬೆಳಗ್ಗೆ ಇನ್ನಷ್ಟು ಜನ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ದೆಹಲಿ ಕನ್ನಡ ಸಂಘದಲ್ಲಿ ಸಭೆ ಸೇರಿ ಪ್ರತಿಭಟನೆಗೆ ತೆರಳುತ್ತೇವೆ. ದೆಹಲಿಯಲ್ಲಿರುವ ಕರ್ನಾಟಕ ಜನತೆ ನಮಗೆ ಉಳಿದುಕೊಳ್ಳಲು, ಊಟದ ವ್ಯವಸ್ಥೆ ಮಾಡಿದ್ದಾರೆ. ದೆಹಲಿ ಪ್ರತಿಭಟನೆಗೆ ತೆರಳಲು ಸಾರಿಗೆ ವ್ಯವಸ್ಥೆ ಸಹ ಉಚಿತವಾಗಿ ಮಾಡಿದ್ದಾರೆ. ಬಹಳಷ್ಟು ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸುತ್ತಿದ್ದಾರೆ. 25, 26 ಹಾಗೂ 27 ರಂದು ನಾವು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟು ಬರುತ್ತೇವೆ. ಅಲ್ಲಿಂದ ಬಂದು ಕರ್ನಾಟಕದಲ್ಲಿ ಹೋರಾಟವನ್ನು ಇನ್ನೂ ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.

Last Updated : Dec 24, 2020, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.