ETV Bharat / state

ಸಂಜೆ ಬಳಿಕ ಬೆಂಗಳೂರಲ್ಲಿ ಗರ್ಭಿಣಿ ಸೇರಿ 9 ಮಂದಿಯಲ್ಲಿ ಕೊರೊನಾ ಪತ್ತೆ!

author img

By

Published : May 8, 2020, 10:35 PM IST

ಕೊರೊನಾ ವೈರಸ್​ ಬೆನ್ನು ಬಿಡದ ಬೇತಾಳದಂತೆ ಬೆಂಗಳೂರಿನ ಜನರ ಹಿಂದೆ ಬಿದ್ದಿದ್ದು, ಇಂದು ಸಂಜೆ ಮತ್ತೆ ಹೊಸ 9 ಪ್ರಕರಣಗಳು ದಾಖಲಾಗಿವೆ.

corona Positive
ಕೊರೊನಾ

ಬೆಂಗಳೂರು: ನಗರದ ಪಾದರಾಯನಪುರ ಹಾಗೂ ಹೊಂಗಸಂದ್ರದಲ್ಲಿ ಮತ್ತೆ ಕೊರೊನಾ ತನ್ನ ಅಟ್ಟಹಾಸ ಮೆರೆದಿದ್ದು, ಹೊಂಗಸಂದ್ರದ ವಲಸೆ ಕಾರ್ಮಿಕರಲ್ಲಿ ಮತ್ತೆ ಐವರಿಗೆ ಹಾಗೂ ಪಾದರಾಯನಪುರದ ರ್ಯಾಂಡಮ್ ಚೆಕಪ್​​ನ ವರದಿಯಲ್ಲಿ ಗರ್ಭಿಣಿ ಸೇರಿದಂತೆ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈಗಾಗಲೇ ಈ ಒಂಭತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾ ಸೋಂಕಿತರ ಸಂಪರ್ಕದಿಂದ ಕ್ವಾರಂಟೈನ್​ನಲ್ಲಿ ಇದ್ದ ಈ ಒಂಭತ್ತು ಜನರಿಗೆ ಕೊರೊನಾ ತಗುಲಿದೆ ಎಂದು ತಿಳಿದು ಬಂದಿದೆ.

ಹೊಂಗಸಂದ್ರದಲ್ಲಿ ಇಂದು ಡಿಸ್ಚಾರ್ಜ್ ಆದ 419ನೇ ರೋಗಿಯ ಸಂಪರ್ಕದಿಂದ ಇಂದು ಐದು ಜನರಿಗೆ ಕೊರೊನಾ ಸೋಂಕು ಹರಡಿದ್ದು, ಪಾದರಾಯನಪುರದ ರ್ಯಾಂಡಮ್‌ ಚೆಕಪ್​ನಲ್ಲಿ 20, 40 ಹಾಗೂ 55 ವರ್ಷದ ಮಹಿಳೆಯರಿಗೆ ಹಾಗೂ 19 ವರ್ಷದ ಗರ್ಭಿಣಿಯೋರ್ವಳಿಗೆ ತನ್ನ ಪತಿ 706ನೇ ರೋಗಿಯಿಂದ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ.

ಇನ್ನು ಇದೇ ವೇಳೆ ಪಾದರಾಯನಪುರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಇಡೀ ವಾರ್ಡ್​ ಜನರ ಆರೋಗ್ಯ ತಪಾಸಣೆ ನಡೆಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.