ETV Bharat / state

ಕೋವಿಡ್​​​ನಿಂದ ಉದ್ಯೋಗ ನಷ್ಟ : ಆತ್ಮಹತ್ಯೆ ಮಾಡಿಕೊಳ್ಳವರ ಸಂಖ್ಯೆ ಹೆಚ್ಚಾಯಿತಾ!!? - suicide cases increasing due to corona

ನಮ್ಮ ದೇಶದಲ್ಲಿ ಪ್ರತಿ 4 ನಿಮಿಷಗಳಿಗೊಮ್ಮೆ ಕನಿಷ್ಠ ಅಂದರು ಒಂದು ಆತ್ಮಹತ್ಯೆ ಪ್ರಕರಣ ವರದಿ ಆಗುತ್ತಿದೆ. ಅದರಲ್ಲೂ ಕೊರೊನಾದಿಂದ ಆರ್ಥಿಕ ನಷ್ಟ ಸೇರಿದಂತೆ ನಾನಾ ಸಮಸ್ಯೆಗಳಿಗೆ ಒಳಗಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಜಾಗೃತಿ ಮೂಡಿಸಲು ನಿಮ್ಹಾನ್ಸ್ ಮುಂದಾಗಿದೆ..

suicide awareness program
ಕೋವಿಡ್​​​ನಿಂದ ಆತ್ಮಹತ್ಯೆ
author img

By

Published : Sep 4, 2021, 5:14 PM IST

ಬೆಂಗಳೂರು : ಕೊರೊನಾ ಸೋಂಕು ಹರಡಲು ಆರಂಭವಾದಾಗಿನಿಂದ ಉದ್ಯೋಗ ನಷ್ಟ, ಕೌಟುಂಬಿಕ ಕಲಹ, ವಲಸೆ, ಹಿಂಸಾಚಾರ ಹೀಗೆ ನಾನಾ ಕಾರಣಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಸಕಾರಾತ್ಮಕ ಭಾವನೆ ಹೆಚ್ಚಿಸುವ ಕೆಲಸ ಆಗಬೇಕು ಎಂದು ನಿಮ್ಹಾನ್ಸ್ ವೈದ್ಯರು ಅಭಿಮತ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಈ ವರ್ಷ ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗ ನಿಮ್ಹಾನ್ಸ್​​ನಿಂದ ಒಂದು ತಿಂಗಳ ಕಾಲ ಅಭಿಯಾನವನ್ನು ಆಯೋಜಿಸಲು ತೀರ್ಮಾನಿಸಿದೆ. ಕ್ರಿಯೆಯ ಮೂಲಕ ಭರವಸೆಯನ್ನು ಮೂಡಿಸುವುದು ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಕಾರ್ಯಕ್ರಮವನ್ನು ನಡೆಸಲಾಗ್ತಿದೆ.

ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದೆ. ಈ ಮೂಲಕ ಆತ್ಮಹತ್ಯೆ ಆಲೋಚನೆಗಳಿಂದ ಕೂಡಿರುವ ಜನರಿಗೆ ಭರವಸೆ ನೀಡುವ ಕೆಲಸ ಮಾಡಲು ಮುಂದಾಗ್ತಿದೆ. ಆತ್ಮಹತ್ಯೆಯಂತಹ ಸಮಸ್ಯೆಯನ್ನು ಪರಿಹರಿಸಲು ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ಕುರಿತು ವಿವಿಧ ಆಯಾಮದ ಕಾರ್ಯಕ್ರಮ ನಡೆಸಲಾಗ್ತಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

ಓದಿ: ರಾಜ್ಯದಲ್ಲಿ ಬೈಕ್​, ಟಿವಿ, ಫ್ರಿಡ್ಜ್ ಹೊಂದಿದವರ BPL ಕಾರ್ಡ್ ರದ್ದುಪಡಿಸುವುದಿಲ್ಲ : ಆಹಾರ ಇಲಾಖೆ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.