ETV Bharat / state

ಜೆಡಿಎಸ್​ ಕ್ವಾರಂಟೈನ್​​ನಲ್ಲಿಲ್ಲ; ಬೀದಿಗಿಳಿದು ಹೋರಾಟ ನಡೆಸುತ್ತದೆ ಎಂದ ನಿಖಿಲ್​ - ನಿಖಿಲ್​ ಕುಮಾರಸ್ವಾಮಿ

ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕಿತ್ತಾಟ ಆರಂಭವಾಗಿದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗಿದೆ ಎಂದು ವ್ಯಂಗ್ಯವಾಡಿದರು.

Nikhil Kumaraswamy
Nikhil Kumaraswamy
author img

By

Published : Jun 26, 2021, 2:49 PM IST

Updated : Jun 26, 2021, 3:10 PM IST

ಬೆಂಗಳೂರು : ತಂದೆ ಆಗುತ್ತಿರುವುದು ನಿಜ. ಆದರೆ, ವೈಯಕ್ತಿಕ ವಿಚಾರ ಹೊರಹಾಕಲು ಇಷ್ಟ ಪಡುವುದಿಲ್ಲ. ಆದರೂ ಸಾರ್ವಜನಿಕ ಬದುಕಿನಲ್ಲಿ ಇರುವುದರಿಂದ ಹೇಳಬೇಕಾಗುತ್ತದೆ ಎಂದು ರಾಜ್ಯ ಯುವ ಜನತಾದಳ (ಜಾತ್ಯತೀತ)ದ ಅಧ್ಯಕ್ಷರು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್​

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಾರ್ವಜನಿಕರ ಕಡೆಯಿಂದ ಒಂದಿಷ್ಟು ಸುದ್ದಿಗಳು ಬರುತ್ತವೆ‌. ತಂದೆಯಾಗುತ್ತಿರುವ ಸುದ್ದಿ ನಿಜವಾಗಿದೆ. ಅತಿ ಶೀಘ್ರದಲ್ಲೇ ಮಗು ನಿರೀಕ್ಷೆ ಮಾಡುತ್ತಿದ್ದೇನೆ. ನಿರೀಕ್ಷೆ ಅಂದ ಮೇಲೆ ತಂದೆ ಆಗಬೇಕಲ್ಲವೇ? ಎಂದು ಹಾಸ್ಯ ಚಟಾಕಿ ಹಾರಿಸಿದರು. ಅವರು ತಂದೆ ಆಗುತ್ತಿರುವ ವಿಷಯ ಹೊರಹಾಕುತ್ತಿದ್ದಂತೆ ಜೆಡಿಎಸ್ ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರಿಗೆ ಶುಭ ಹಾರೈಸಿದರು.

ಕೂಸು ಹುಟ್ಟುವ ಮೊದಲೇ ಕುಲಾವಿ

ಮುಂದುವರಿದು ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕಿತ್ತಾಟ ಆರಂಭವಾಗಿದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗಿದೆ ಎಂದು ವ್ಯಂಗ್ಯವಾಡಿದರು. ಚರ್ಚೆ ಮಾಡುವ ಸಂದರ್ಭ ಇದಲ್ಲ ಎಂದ ಅವರು, ಬಿಜೆಪಿ ಬಗ್ಗೆ ನಮಗೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ.‌ ರಾಜ್ಯಕ್ಕೆ ಜೆಡಿಎಸ್ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಇದನ್ನ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ನಾವು ಕ್ವಾರಂಟೈನ್​​ನಲ್ಲಿಲ್ಲ. ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದರು.

ಇದನ್ನೂ ಓದಿರಿ: ಪತ್ನಿ ರೇವತಿ ಕಡೆಯಿಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಗುಡ್ ನ್ಯೂಸ್!

ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ, ಐದು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿತ್ತು. ಇದರ ಬೆನ್ನಲ್ಲೇ ಅವರಿಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ.

Last Updated : Jun 26, 2021, 3:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.