ಬೆಂಗಳೂರು: ಇಂದು ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ನಲ್ಲಿ ವಿಶ್ವ ಹಿಂದೂ ಪರಿಷತ್ನ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಅವರಿಂದ ಸುದ್ದಿಗೋಷ್ಠಿ ನಡೆಸಲಾಯಿತು.
ಈ ವೇಳೆ, ರಾಮಜನ್ಮಭೂಮಿ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ಎಲ್ಲೆಡೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಈ ಪುಣ್ಯದ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ದೇಶದ ಎಲ್ಲ ಜನರು ಭಾಗಿಯಾಗಬೇಕು. ಹೀಗಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ನಿಧಿ ಸಮರ್ಪಣ ಅಭಿಯಾನ ನಡೆಸಲಾಗುತ್ತಿದೆ. ದೇಶದ ಎಲ್ಲ ಮನೆಗಳಿಗೆ ತಲಪುವ ಗುರಿಯನ್ನು ಈಗಾಗಲೇ ಜನಸಂಪರ್ಕ ಅಭಿಯಾನ ಹೊಂದಿದೆ.
ರಾಜ್ಯದ 27,500 ಹಳ್ಳಿಗಳು ಹಾಗೂ 90 ಲಕ್ಷ ರಾಮ ಭಕ್ತರನ್ನ ತಲುಪುವ ಹಾಗೂ ರಾಮಮಂದಿರಕ್ಕೆ ಧನಸಂಗ್ರಹ ಯೋಜನೆಯನ್ನು ವಿಶ್ವಹಿಂದೂ ಪರಿಷದ್ ಹಾಕಿಕೊಂಡಿದೆ. 10 ,100 1,000 ರೂಪಾಯಿಗಳ ಸಹಾಯದಿಂದ ಧನ ಸಂಗ್ರಹ ನಡೆಯಲಿದೆ. ಎರಡು ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತ ನೀಡಿದ ಭಕ್ತರಿಗೆ ರಸೀದಿ ನೀಡಲಾಗುವುದು ಮತ್ತು ಈ ಭಕ್ತರಿಗೆ ಭಾರತೀಯ ಆದಾಯ ತೆರಿಗೆ ಕಾಯ್ದೆಯ 80 ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿಯ ಸೌಲಭ್ಯ ಪಡೆಯಬಹುದು.
ಐದು ಕಾರ್ಯಕರ್ತರನ್ನು ಒಳಗೊಂಡ ತಂಡ ನಿಧಿ ಸಮರ್ಪಣಾ ಅಭಿಯಾನದಲ್ಲಿ ಇರಲಿದೆ. ಹಣ ಸಂಗ್ರಹ ಕಾರ್ಯದಲ್ಲಿ 48 ಗಂಟೆಗಳ ಒಳಗೆ ಟ್ರಸ್ಟ್ ಮತ್ತು ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು. ಇನ್ನು ಜನವರಿ 15ರಿಂದ ಆರಂಭವಾಗಿ ಫೆಬ್ರವರಿ 27 ಕ್ಕೆ ಹಣ ಸಂಗ್ರಹಣೆ ಅಂತ್ಯವಾಗಲಿದೆ.
ಸಂಪೂರ್ಣ ಮಂದಿರ ಕಲ್ಲಿನ ಬ್ಲಾಗುಗಳ ಸಹಾಯದಿಂದ ನಿರ್ಮಿತವಾಗಿದೆ ಮಂದಿರದ ವಿಸ್ತೀರಣ 2.77 ಎಕರೆ 54,000 ಜಾಗದಲ್ಲಿ ನಿರ್ಮಾಣಗೊಳ್ಳಲಿದೆ. ಮಂದಿರದಲ್ಲಿ ಅಂತಸ್ತು ಹಾಗೂ 55 ಮಂಟಪಗಳಿರುತ್ತವೆ. ನೆಲಮಾಳಿಗೆಯಲ್ಲಿ 160 ಕಂಬಗಳು, ಮೊದಲನೇ ಮಹಡಿಯಲ್ಲಿ 132 ಕಂಬಗಳು, ಎರಡನೆಯ ಮಹಡಿಯಲ್ಲಿ 74 ಕಂಬಗಳಿರುತ್ತವೆ. 2024 ರವರೆಗೆ ಶ್ರೀರಾಮನನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಹಾಗೂ ಭಕ್ತರಿಗೆ ದರ್ಶನ ವ್ಯವಸ್ಥೆ ಸಾಧ್ಯವಾಗಬಹುದು ಎಂದು ಅಂದಾಜಿಲಾಗಿದೆ.
ಮಂದಿರ ನಿರ್ಮಾಣದ ಜೊತೆಗೆ ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ ಶಾಲೆ, ವೇದ ಪಾಠ ಶಾಲೆಯ ಭವನ, ಪ್ರಸಾದ ವಿನಿಯೋಗ ಸ್ಥಳ, ಅಂಫಿ ಥಿಯೇಟರ್, ಧರ್ಮಶಾಲೆ, ಪ್ರದರ್ಶನಾಲಯ ಸೇರಿದಂತೆ ಹಲವು ಸೌಲಭ್ಯಗಳು ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿದೆ.