ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ (ಐಎಸ್ಇಸಿ) ಕಾರ್ಯ ನಿರ್ವಹಿಸಲು ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ಯೋಜನೆ ನಿರ್ವಹಣೆ ಉದ್ದೇಶಕ್ಕೆ ಈ ಹುದ್ದೆಗಳ ಭರ್ತಿ ನಡೆಸುತ್ತಿದೆ. ಹುದ್ದೆಗಳು ತಾತ್ಕಾಲಿಕ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಹಾಜರಾಗಬಹುದು.
ಹುದ್ದೆಗಳೇನು?: 20 ಲಿಟ್ಟರ್ಸ್, 20 ಮ್ಯಾಪರ್ಸ್. ಪುರುಷ ಅಭ್ಯರ್ಥಿಗಳಿಗೆ ಮಾತ್ರ.
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ. ಕನ್ನಡ ಭಾಷಾ ಜ್ಞಾನ ಕಡ್ಡಾಯ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ, ವಿಶ್ವ ಆರೋಗ್ಯ ಸಂಸ್ಥೆ ಅಥವಾ ಡಿಎಲ್ಎಚ್ಎಸ್ನ ಯೋಜನೆ ಸಮೀಕ್ಷೆಯಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳಿಗೆ ಆದ್ಯತೆ.
ವಯೋಮಿತಿ: ನಿರ್ದಿಷ್ಟ ವಯೋಮಿತಿ ಇಲ್ಲ.
ವೇತನ: ಮಾಸಿಕ 20 ಸಾವಿರ ರೂಪಾಯಿ. ಸಮೀಕ್ಷಾ ಅವಧಿಯಲ್ಲಿ ದಿನಕ್ಕೆ 400 ರೂ.ಯಂತೆ ಡಿಎ ಆಗಿ ನೀಡಲಾಗುತ್ತದೆ.
ಹುದ್ದೆಗಳ ಅವಧಿ: ಮೂರು ತಿಂಗಳು. ಫೀಲ್ಡ್ ವರ್ಕ್ ಪರಿಸ್ಥಿತಿಗೆ ಅನುಗುಣವಾಗಿ 3 ತಿಂಗಳ ಕಾಲ ಅವಧಿ ಹೊಂದಿರಲಿದೆ.
ಆಯ್ಕೆ: ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. ಆಗಸ್ಟ್ 18ರಂದು ಐಎಸ್ಇಸಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ನೇರ ಸಂದರ್ಶನದಲ್ಲಿ ಹಾಜರಾಗುವ ಅಭ್ಯರ್ಥಿಗಳು ತಮ್ಮ ಇತ್ತೀಚಿನ ರೆಸ್ಯೂಮ್, ಮೂಲ ಪದವಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಸೂಚಿಸಿದ ಸಮಯದೊಳಗೆ ಹಾಜರಾಗಬೇಕಿದೆ.
ಹೆಚ್ಚಿನ ಮಾಹಿತಿಗೆ ಯೋಜನೆಯ ಕೋ ಆರ್ಡಿನೇಟರ್ ಆಗಿರುವ ಪ್ರೊ.ಸಿ.ಎಂ.ಲಕ್ಷ್ಮಣ ಅವರನ್ನು ಸಂಪರ್ಕಿಸಬಹುದು. ಇವರ ಇ-ಮೇಲ್ ವಿಳಾಸ: lakshmana@isec.ac.in ಅಥವಾ ಮೊಬೈಲ್ ಸಂಖ್ಯೆ 9449989931/ 8660647257ಗೆ ಸಂಪರ್ಕಿಸಿ.
ಇದನ್ನೂ ಓದಿ: Indian post Recruitment: ಭಾರತೀಯ ಅಂಚೆ ಇಲಾಖೆಯಲ್ಲಿದೆ ಡ್ರೈವರ್ ಹುದ್ದೆ; 10ನೇ ತರಗತಿ ಆದವರಿಗೆ ಅವಕಾಶ