ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿವಾದಿತ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾದ ಸಿ.ಸಿ ಪಾಟೀಲ್, ಕನ್ನಡ ಚಿತ್ರರಂಗದ ಸಮಸ್ಯೆಗಳ ಕುರಿತು ಚರ್ಚೆ ಮಾಡೋದಕ್ಕೆ ಫಿಲ್ಮ್ ಚೇಂಬರ್‌ಗೆ ಬಂದಿದ್ದ ವೇಳೆ ಸಚಿವ ಸುಧಾಕರ್ ಹೇಳಿಕೆ ಕುರಿತ ಪ್ರಶ್ನೆಗೆ, ನಾನು ಏನ್ ಹೇಳಲಿ, ಈ ಹೇಳಿಕೆಯಿಂದ ಸದನವೇ ಹಾಳಾಗಿದೆ. ಸದನದಲ್ಲಿ ಕಾಂಗ್ರೆಸ್‌ನವರು ಚರ್ಚೆ ಮಾಡೋಕೆ ಬಿಡಲಿಲ್ಲ ಎಂದು ಹೇಳುತ್ತಾ ಕೈ ಮುಗಿದರು.
ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದುಂದುವೆಚ್ಚದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಕೊರೊನಾ ಇರುವುದರಿಂದ ನಮ್ಮ ಸರ್ಕಾರ ಯಾವುದೇ ದುಂದು ವೆಚ್ಚ ಮಾಡೋದಿಲ್ಲ ಎಂದರು.
ಇದನ್ನೂ ಓದಿ: ಮಸ್ಕಿ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಚುನಾವಣೆ ವೆಚ್ಚಕ್ಕೆ ಗ್ರಾಮಸ್ಥರಿಂದ ದೇಣಿಗೆ: ಇದು ಗಿಮಿಕ್ ಎಂದ ಬಿಜೆಪಿ