ETV Bharat / state

ನೂತನ ಮುಖ್ಯಮಂತ್ರಿಗೆ ಎದುರಾಗುವ ಸವಾಲುಗಳೇನು? ಬೊಮ್ಮಾಯಿ ಮುಂದಿದೆ ಸಾಲು ಸಾಲು ಪ್ರಶ್ನೆ

author img

By

Published : Jul 30, 2021, 3:09 PM IST

ಮಾಜಿ ಸಿಎಂ ದಿವಂಗತ ಎಸ್.ಆರ್.ಬೊಮ್ಮಾಯಿ ಪುತ್ರನಾಗಿ, ಸಾಕಷ್ಟು ಅಧ್ಯಯನ ಯೋಗ್ಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದಿರುವ ಬಸವರಾಜ ಬೊಮ್ಮಾಯಿ ಹಿಂದಿನ ಮುಖ್ಯಮಂತ್ರಿಗಳಂತೆ ರಾಜ್ಯಕ್ಕೆ ಒಂದು ಹೊಸ ವಿಷನ್ ಮತ್ತು ಪರಿಕಲ್ಪನೆ ನೀಡಬೇಕಿದೆ. ಈ ಮೂಲಕ ಜಾತಿ-ಮತಗಳ ನಡುವೆ ಭಿನ್ನ ಭೇದಕ್ಕೆ ಆಸ್ಪದ ಕೊಡದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಇನ್ನುಳಿದಿರುವ ಎರಡು ವರ್ಷಗಳಲ್ಲಿ ಇದು ಸಾಧ್ಯವೇ? ಎಂಬುದನ್ನು ಕಾದುನೋಡಬೇಕು..

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಮತೂಕದ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡುವ ಮೂಲಕ ದೆಹಲಿ ಬಿಜೆಪಿ ವರಿಷ್ಠರು ಜಾಣ್ಮೆ ಪ್ರದರ್ಶಿಸಿದ್ದಾರೆ. ಆದರೆ, ಮುಂದೆ ಎದುರಾಗುವ ಸವಾಲುಗಳನ್ನು ಅವರು ಮೆಟ್ಟಿ ನಿಲ್ಲುವರೇ? ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಮೂಡಿದೆ.

ಜನತಾಪರಿವಾರದಿಂದ ಬಿಜೆಪಿಗೆ ಬಂದ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಇನ್ನು ಮುಂದೆಯೂ ಸಹ ಅವರು ತಮ್ಮ ಸ್ವಂತಿಕೆಯ ಮೂಲಕ ಆಡಳಿತದಲ್ಲಿ ತಮ್ಮದೇ ವಿಶಿಷ್ಟ ಛಾಪನ್ನು ಮೂಡಿಸುವ ಅಗತ್ಯವಿದೆ. ಬೊಮ್ಮಾಯಿ ಅವರಿಗೆ ಅದು ಸಾಧ್ಯವಾಗುವುದೇ? ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಅಧಿಕಾರದಲ್ಲಿದ್ದಷ್ಟು ಕಾಲ ಅವರಿಗೆ ಅವರ ಕುಟುಂಬಸ್ಥರೇ ಕಂಟಕಪ್ರಾಯರಾಗಿ ಪರಿಣಮಿಸಿದ್ದರು. ಇದರಿಂದಾಗಿಯೇ ಅವರು ಜೈಲಿಗೆ ಹೋಗಿ ಬಂದರು. ಅವಧಿಪೂರ್ಣ ಗೊಳಿಸಲಾಗದೆ ಒಂದಲ್ಲಾ ಎರಡೆರಡು ಬಾರಿ ಅವರು ತಮ್ಮ ಅಧಿಕಾರ ಕಳೆದುಕೊಂಡರು ಎಂಬುದು ಇತಿಹಾಸ.

ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಪುತ್ರ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರ ಆರೋಪಗಳಿಗೀಡಾದರು. ಇದರ ವಿರುದ್ಧ ಹಲವರು ನಾಯಕರು ಬಹಿರಂಗವಾಗಿಯೇ ಸಮರ ಸಾರಿದರು. ತಮ್ಮ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಆದರೆ, ಆಡಳಿತದಲ್ಲಿ ಅವರ ಹಸ್ತಕ್ಷೇಪ ಅಥವಾ ಪ್ರಭಾವ ಇರುವುದಿಲ್ಲ ಎಂದು ಹೇಳಲಾಗದು.

ಬೊಮ್ಮಾಯಿ ಆರ್​ಎಸ್​​ಎಸ್​​ ನಂಟೇನು?

ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗಲೂ ಅವರಿಗೆ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ರೇವಣ್ಣ ಅವರ ಗುಮ್ಮ ಕಾಡುತಿತ್ತು. ಸಿಎಂ ಆಗಿ ಅವರ ತಮ್ಮ ಅಧಿಕಾರವನ್ನು ಸರಿಯಾಗಿ ನಡೆಸಲು ಆಗುತ್ತಿರಲಿಲ್ಲ ಎಂಬ ಮಾತು ಜನಜನಿತ. ಮೊದಲಿನಿಂದಲೂ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಬಗ್ಗೆ ಅಪಾರ ನಿಷ್ಠೆಯಿಂದ ನಡೆದುಕೊಂಡು ಬಂದಿದ್ದಾರೆ. ಪರಿಣಾಮವಾಗಿ ಅನಾಯಾಸವಾಗಿ ಅವರಿಗೆ ಸಿಎಂ ಸ್ಥಾನ ದಕ್ಕಿದೆ.

ಈಗ ಬೊಮ್ಮಾಯಿ ಅವರು ಆಡಳಿತದಲ್ಲಿ ಯಡಿಯೂರಪ್ಪ ಮತ್ತು ಮಕ್ಕಳ ಬಿಗಿಹಿಡಿತದಿಂದ ಪಾರಾಗಿ ಕಳಂಕರಹಿತ ಆಡಳಿತಕ್ಕೆ ಶ್ರಮಿಸಲು ಸಾಧ್ಯವೆ ಎಂಬುದು ಮುಂಬರುವ ದಿನಗಳಲ್ಲಿ ಅವರು ನಡೆಸುವ ಆಡಳಿತ ವೈಖರಿಯಿಂದ ಸಬೀತಾಗಲಿದೆ. ಇನ್ನು, ಬಸವರಾಜ ಬೊಮ್ಮಾಯಿ ಮೂಲತಃ ಆರ್​ಎಸ್​​​ಎಸ್​​ನವರಲ್ಲ. ಆದರೆ, ಈಗ ಅವರ ಆಡಳಿತದ ನೀತಿ-ನಿರೂಪಣೆಗಳಲ್ಲಿ ಆರ್​​ಎಸ್‍ಎಸ್ ಪಾತ್ರ ಮತ್ತು ಪ್ರಭಾವ ಇದ್ದೇ ಇರುತ್ತದೆ.

ಆರ್​​ಎಸ್​ಎಸ್ ಚೌಕಟ್ಟನ್ನು ಮೀರದೇ, ಸಂಘದ ಮನೋಧರ್ಮಕ್ಕೆ ಹೊಂದಿಕೊಂಡು ಆಡಳಿತ ನಡೆಸುವ ಗುಣವನ್ನು ಗೃಹಸಚಿವರಾಗಿ ಅವರು ಈಗಾಗಲೇ ಪ್ರದರ್ಶಿಸಿದ್ದಾರೆ. ಇದೇ ಮನೋಧರ್ಮವನ್ನು ಇನ್ನು ಮುಂದೆಯೂ ಅವರಿಂದ ನಿರೀಕ್ಷಿಸಬಹುದೇ ಹೊರತು ವಿಶಾಲ ಮನೋಭಾವನೆಯ ಜನಮುಖಿ ಆಡಳಿತವನ್ನಲ್ಲ. ಆದಾಗಿಯೂ ರಾಜ್ಯದ ಕಾನೂನು ಸುವ್ಯವಸ್ಥೆ ರಕ್ಷಿಸುವ ವಿಷಯದಲ್ಲಿ ಅವರ ವಿಶಾಲ ದೃಷ್ಟಿಕೋನ ಅನಿವಾರ್ಯ.

ಕಳೆದ ವರ್ಷ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಪೊಲೀಸ್ ಫೈರಿಂಗ್ ಪ್ರಕರಣ ಸಂದರ್ಭದಲ್ಲಿ ಗೃಹ ಸಚಿವರಾಗಿ ಅವರು ನಡೆದುಕೊಂಡ ಹಾಗೂ ಅನುಸರಿಸಿದ ರೀತಿ-ನೀತಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇನ್ನು ಮುಂದೆಯಾದರೂ ಪಕ್ಷಪಾತಕ್ಕೆ ಅವಕಾಶ ನೀಡದೇ ಉತ್ತಮ ಆಡಳಿತಕ್ಕೆ ಶ್ರಮಿಸುವ ಸವಾಲು ಅವರ ಮುಂದಿದೆ.

ಕೊರೊನಾ ಸವಾಲು?

ಕೊರೊನಾ 3ನೇ ಅಲೆಯ ಸವಾಲು ಬಸವರಾಜ ಬೊಮ್ಮಾಯಿ ಅವರ ಮುಂದಿದೆ. ಹಿಂದಿನ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕೋವಿಡ್ ಎರಡನೇ ಅಲೆ ಬಂದಾಗ ರಾಜ್ಯದಲ್ಲಿ ಅತಿ ದೊಡ್ಡ ಪ್ರಮಾಣದಲ್ಲೇ ಸಾವು-ನೋವುಗಳು ಸಂಭವಿಸಿದ್ದವು. ಪೂರ್ವಭಾವಿ ಸಿದ್ಧತೆಗಳಿಲ್ಲದ ಪರಿಣಾಮ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್​ಗಳಿಲ್ಲದೇ ಕೊರೊನಾ ಸೋಂಕಿತರು ಪರದಾಡಿ ಪ್ರಾಣಬಿಡಬೇಕಾಯಿತು.

ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಕಾರಣ ಯಡಿಯೂರಪ್ಪ ಸರ್ಕಾರಕ್ಕೆ ಅತ್ಯಂತ ಕೆಟ್ಟ ಹೆಸರು ತಂದುಕೊಟ್ಟಿತು. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ. ಕೊರೊನಾ ಸೋಂಕು ಸೃಷ್ಟಿಸಬಹುದಾದ ಸವಾಲು ಇದ್ದೇ ಇದೆ. ಇದೀಗ ಮೂರನೇ ಅಲೆ ಬರುತ್ತದೆ ಎಂದು ತಜ್ಞರು ಹೇಳಿದ್ದು, ಈಗಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.

ನೀರಾವರಿ ವಿಚಾರ ಮತ್ತೊಂದು ದೊಡ್ಡ ಸವಾಲು

ದಶಕಗಳಿಂದಲೂ ರಾಜ್ಯಕ್ಕೆ ಕೃಷ್ಣ, ಕಾವೇರಿ, ಕಳಸಾ-ಬಂಡೂರಿ, ಮೇಕೆದಾಟು ಮತ್ತಿತರ ಜಲವಿವಾದಗಳು ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನೆರೆಯ ರಾಜ್ಯಗಳಿಂದ ತಗಾದೆಗಳು ವ್ಯಕ್ತವಾಗುತ್ತಿವೆ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಆಡಳಿತ ಅನುಭವ ಹೊಂದಿರುವ ಬಸವರಾಜ ಬೊಮ್ಮಾಯಿ ಅವರು ನೀರಾವರಿ ವಿಷಯಗಳಲ್ಲಿ ಸಾಕಷ್ಟು ಜ್ಞಾನ, ತಿಳುವಳಿಕೆ ಹೊಂದಿದ್ದಾರೆ. ಇದೀಗ ಮುಖ್ಯಮಂತ್ರಿಯಾಗಿ ಅವರು ನೀರಾವರಿ ವಿಷಯಗಳಲ್ಲಿ ರಾಜ್ಯದ ಹಿತ ಕಾಪಾಡುವಲ್ಲಿ ಯಾವ ರೀತಿ ಹೆಜ್ಜೆ ಇಡಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

ಮುಂಬರುವ ಚುನಾವಣೆಗಳು ಇನ್ನೊಂದು ಸವಾಲು

ಮುಖ್ಯಮಂತ್ರಿಯಾಗಿ ಹಾಗೂ ರಾಜ್ಯದಲ್ಲಿ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಬೇರುಗಳನ್ನು ಗಟ್ಟಿಗೊಳಿಸುವ ಮತ್ತು ಸಂಘಟನಾ ಚತುರತೆ ಪ್ರದರ್ಶಿಸುವ ಸವಾಲನ್ನು ಅವರು ಹೇಗೆ ಎದುರಿಸುವರು ಎಂಬುದನ್ನು ಬರುವ ದಿನಗಳು ನಿರ್ಣಯಿಸಲಿವೆ.

ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ ಸೇರಿದಂತೆ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗಳು ಅವರ ಮುಂದೆ ಸವಾಲಾಗಿವೆ. ಅದರ ಜೊತೆಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿಯೂ ಅವರ ಹೆಗಲ ಮೇಲಿರುತ್ತದೆ. ಈ ವಿಷಯದಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಬಿ ಎಸ್ ಯಡಿಯೂರಪ್ಪ ಹಾಗೂ ಪಕ್ಷದ ವಿಶಾಲ ತಳಹದಿ ಹಾಗೂ ಸಂಘದ ಸಾಥ್ ನೆರವಾಗಬಹುದು.

ಆದರೆ, ರಾಜ್ಯದಲ್ಲಿ ಕುಸಿದಿರುವ ಸರ್ಕಾರದ ಜನಪ್ರಿಯತೆಯನ್ನು ಮತ್ತೆ ಎತ್ತಿ ನಿಲ್ಲಿಸುವಲ್ಲಿ ನೂತನ ಮುಖ್ಯಮಂತ್ರಿಯಾಗಿ ಅವರು ಯಾವ ರೀತಿ ಕಾರ್ಯನಿರ್ವಹಿಸುವರು ಎಂಬುದು ಮತ್ತೊಂದು ಕುತೂಹಲಕಾರಿ ಅಂಶವಾಗಿದೆ. ಇದರ ಮಧ್ಯೆ ಸಂಪುಟ ರಚನೆ ಆಗಬೇಕಿದ್ದು, ಎಲ್ಲರನ್ನೂ ಸಮಾಧಾನಪಡಿಸಿ, ವಿಶ್ವಾಸಗಳಿಸಿಕೊಂಡು ಮುನ್ನಡೆಯಬೇಕಿದೆ. ಇದೆಲ್ಲವನ್ನೂ ಹೊರತುಪಡಿಸಿ ಕಳಂಕ ರಹಿತ ಹಾಗೂ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಬೊಮ್ಮಾಯಿ ಪ್ರಾಮುಖ್ಯತೆ ನೀಡಬೇಕಿದೆ.

ಹೆಚ್​ಡಿಕೆ ಹೇಳಿಕೆಯ ತಿರುಳು

ಈ ನಿಟ್ಟಿನಲ್ಲಿ ಆಡಳಿತದಲ್ಲಿ ತಮ್ಮ ಆದ್ಯತೆ ಹಾಗೂ ಪ್ರಾಮುಖ್ಯತೆ ಏನು ಎಂಬುದನ್ನು ಜನತೆಯ ಮುಂದಿಡಬೇಕಿದೆ. ಸಂಸದೀಯ ಖಾತೆ ಸಚಿವರಾಗಿದ್ದರಿಂದ ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಕಲೆ ಬೊಮ್ಮಾಯಿ ಅವರಿಗೆ ಈಗಾಗಲೇ ಕರಗತವಾಗಿದೆ. ಜೊತೆಗೆ ಸಾಕಷ್ಟು ಆಡಳಿತ ಅನುಭವವೂ ಇದೆ. ಮೂಲತಃ ಜನತಾ ಪರಿವಾರದವರೇ ಆಗಿರುವುದರಿಂದ ಸದನದ ಒಳಗೆ ಮತ್ತು ಹೊರಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪ್ರತಿಕ್ಷದ ನಾಯಕ ಸಿದ್ದರಾಮಯ್ಯ ಅವರಂತಹ ನಾಯಕರನ್ನು ಎದುರಿಸುವುದು ಅವರಿಗೆ ಅಷ್ಟೇನೂ ಕಷ್ಟವಾಗಲಾರದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆ ಕುಮಾರಸ್ವಾಮಿ ಅವರ ಹೇಳಿಕೆ. ಬಸವರಾಜ ಬೊಮ್ಮಾಯಿ ಅವರು ಜನತಾಪರಿವಾರದರು. ಜೆಡಿಎಸ್‌ನವರೇ ಸಿಎಂ ಆಗಿದ್ದಾರೆ ಎಂಬ ಗುಂಗಿನಲ್ಲೇ ಇದ್ದೇನೆ ಎಂಬ ಮಾತುಗಳನ್ನು ಆಡಿರುವ ಹೆಚ್​​ಡಿಕೆ, ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ.

ರಾಜ್ಯಕ್ಕೆ ಬೊಮ್ಮಾಯಿ ನೀಡುವರೇ ಹೊಸ ವಿಷನ್?

ಈ ಹಿಂದೆ ನಿಜಲಿಂಗಪ್ಪ ಅವರು ಕರ್ನಾಟಕ ನಿರ್ಮಾಣಕ್ಕೆ ಬುನಾದಿ ಹಾಕಿದರು, ಡಿ.ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಪರಿಪಾಲನೆ ಮೂಲಕ ಹಿಂದುಳಿದ ವರ್ಗಗಳ ನಾಯಕ ಎಂದು ಹೆಸರು ಮಾಡಿದರು, ಹೆಚ್.ಡಿ.ದೇವೇಗೌಡ ಮಣ್ಣಿನ ಮಗ ಖ್ಯಾತಿಗೆ ಪಾತ್ರರಾದರು, ರಾಮಕೃಷ್ಣ ಹೆಗಡೆ ಆಡಳಿತ ವಿಕೇಂದ್ರೀಕರಣಕ್ಕೆ ಕಾರಣರಾದರು, ಎಸ್.ಎಂ.ಕೃಷ್ಣ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಒತ್ತು ನೀಡಿದರು, ಸಿದ್ದರಾಮಯ್ಯ ಅಹಿಂದ ನಾಯಕರಾದರೆ, ಯಡಿಯೂರಪ್ಪ ಹಿಂದುತ್ವಕ್ಕಿಂತ ಹೆಚ್ಚಾಗಿ ರೈತ ನಾಯಕ ಎನಿಸಿಕೊಂಡರು.

ಮಾಜಿ ಸಿಎಂ ದಿವಂಗತ ಎಸ್.ಆರ್.ಬೊಮ್ಮಾಯಿ ಪುತ್ರನಾಗಿ, ಸಾಕಷ್ಟು ಅಧ್ಯಯನ ಯೋಗ್ಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದಿರುವ ಬಸವರಾಜ ಬೊಮ್ಮಾಯಿ ಹಿಂದಿನ ಮುಖ್ಯಮಂತ್ರಿಗಳಂತೆ ರಾಜ್ಯಕ್ಕೆ ಒಂದು ಹೊಸ ವಿಷನ್ ಮತ್ತು ಪರಿಕಲ್ಪನೆ ನೀಡಬೇಕಿದೆ. ಈ ಮೂಲಕ ಜಾತಿ-ಮತಗಳ ನಡುವೆ ಭಿನ್ನ ಭೇದಕ್ಕೆ ಆಸ್ಪದ ಕೊಡದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಇನ್ನುಳಿದಿರುವ ಎರಡು ವರ್ಷಗಳಲ್ಲಿ ಇದು ಸಾಧ್ಯವೇ? ಎಂಬುದನ್ನು ಕಾದುನೋಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.