ETV Bharat / state

ಖಾಲಿ ಜಮೀನಿನಲ್ಲಿ ನವಜಾತ ಶಿಶು ಪತ್ತೆ:ಪೊಲೀಸರಿಂದ ಶಿಶು ರಕ್ಷಣೆ - ಈಟಿವಿ ಭಾರತ ಕರ್ನಾಟಕ

ಆನೇಕಲ್ ತಾಲೂಕಿನ ಹುಲ್ಲಹಳ್ಳಿಯ ಖಾಲಿ ಜಮೀನಿನಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದ್ದು ಬನ್ನೇರುಘಟ್ಟ ಪೊಲೀಸರು ಶಿಶುವನ್ನು ರಕ್ಷಿಸಿದ್ದಾರೆ.

Etv Bharatnewborn-baby-found-in-vacant-lot
ಖಾಲಿ ಜಮೀನಿನಲ್ಲಿ ನವಜಾತ ಶಿಶು ಪತ್ತೆ:ಪೊಲೀಸರಿಂದ ಶಿಶು ರಕ್ಷಣೆ
author img

By

Published : Apr 5, 2023, 7:49 AM IST

ಬೆಂಗಳೂರು: ಆನೇಕಲ್ ತಾಲೂಕಿನ ಹುಲ್ಲಹಳ್ಳಿಯ ಖಾಲಿ ಜಮೀನಿನಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದ್ದು ಬನ್ನೇರುಘಟ್ಟ ಪೊಲೀಸರು ಶಿಶುವನ್ನು ರಕ್ಷಿಸಿದ್ದಾರೆ. ಮಂಗಳವಾರ ಬೆಳಗ್ಗೆ ಸಿದ್ದಲಾಂಗಾರೆಡ್ಡಿ ಜಮೀನಿನಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ನವಜಾತ ಶಿಶು ಪತ್ತೆಯಾಗಿದೆ. ನಂತರ ಸ್ಥಳೀಯರು ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಶಿಶು ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಕವಿತಾ, ಇನ್ಸ್​​​​ಪೆಕ್ಟರ್ ಉಮಾಮಹೇಶ್ ಶಿಶುವನ್ನು ಜಿಗಣಿ ಆಸ್ಪತ್ರೆಗೆ ಪ್ರಾಥಮಿಕ ಆರೈಕೆಗೆ ರವಾನಿಸಿದ್ದಾರೆ. ನಂತರ ಶಿಶುವನ್ನು ಆನೇಕಲ್ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಹೆಚ್ಚಿನ ಆರೈಕೆಗೆ ಕಳುಹಿಸಿಕೊಡಲಾಗಿದೆ ಎಂದು ಕವಿತಾ ತಿಳಿಸಿದ್ದಾರೆ.

ಈ ಕುರಿತಂತೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಜಾತ ಶಿಶುವನ್ನು, ಶಿಶುಪಾಲನಾ ಕೇಂದ್ರಕ್ಕೆ ರವಾನಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ ವಿಚಿತ್ರ ಮಗು: ಒಂದೇ ದೇಹದಲ್ಲಿ ಎರಡು ಹೃದಯ, ನಾಲ್ಕು ಕೈ ಕಾಲು

ಇದನ್ನು ಓದಿ:ರೈಲಿನಲ್ಲಿ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ: ಮಗು, ಮಹಿಳೆ ಸೇರಿ ಮೂವರ ಶವ ಹಳಿಯಲ್ಲಿ ಪತ್ತೆ

ನವಜಾತ ಶಿಶುವನ್ನು ಕಚ್ಚಿಕೊಂಡು ತಿರುಗಾಡಿದ್ದ ನಾಯಿ: ನಾಯಿಯೊಂದು ಅಪರಿಚಿತ ಹೆಣ್ಣು ನವಜಾತ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ತಿರುಗಾಡಿದ ಘಟನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿತ್ತು. ನಾಯಿ ತನ್ನ ಬಾಯಿಯಲ್ಲಿ ಶಿಶುವನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿ, ಅದನ್ನು ಓಡಿಸಿದ್ದರು. ಆದರೆ, ಅಷ್ಟರಲ್ಲೇ ಶಿಶು ಮೃತಪಟ್ಟಿರುವುದು ಗೊತ್ತಾಗಿತ್ತು.

ಇದನ್ನು ಓದಿ: ಚುನಾವಣಾ ಅಕ್ರಮ: ₹17 ಕೋಟಿ ನಗದು, 3 ಲಕ್ಷ ಲೀಟರ್ ಮದ್ಯ ವಶಕ್ಕೆ

ಇದನ್ನೂ ಓದಿ:ಹೋಮ್ ಥಿಯೇಟರ್ ಸ್ಫೋಟ.. ನವವಿವಾಹಿತ ಸಾವು - ಆರು ಜನರಿಗೆ ಗಾಯ

ಮಾರ್ಚ್ 31ರಂದು‌ ಈ ಘಟನೆ ನಡೆದಿತ್ತು, ನಾಯಿಯು ನವಜಾತ ಶಿಶುವನ್ನು ಹಿಡಿದುಕೊಂಡು ಶರಾವತಿ ಹೆರಿಗೆ ವಾರ್ಡ್ ಬಳಿ ಓಡಾಡಿತ್ತು. ನಾಯಿ ಬಿಟ್ಟು ಹೋದ ನಂತರ ಶಿಶುವನ್ನು ಪರೀಕ್ಷಿಸಿದಾಗ ಮಗು ಸಾವನ್ನಪ್ಪಿರುವುದು ಖಚಿತವಾಗಿತ್ತು. ಆದರೆ, ಮಗು ಯಾರದ್ದು?, ಯಾರು ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿರಲಿಲ್ಲ.

ಆಗಷ್ಟೇ ಜನಿಸಿದ ಶಿಶುವನ್ನು ಆಸ್ಪತ್ರೆಯ ಹೆರಿಗೆ ವಾರ್ಡ್​ನ ಹಿಂಭಾಗದಲ್ಲಿ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೇ, ನಾಯಿ ಕಚ್ಚುವ ಮೊದಲೇ ಶಿಶು ಮೃತಪಟ್ಟಿತ್ತೋ, ನಾಯಿಯೇ ಕಚ್ಚಿದ್ದರಿಂದ ಶಿಶು ಸಾವನ್ನಪ್ಪಿದೆಯಾ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿರಲಿಲ್ಲ. ಈ ಸಂಬಂಧ ಆಸ್ಪತ್ರೆಯವರು ದೊಡ್ಡಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದರು.

ಇದನ್ನು ಓದಿ:ಇಬ್ಬರು ಅಪ್ರಾಪ್ತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

ಇದನ್ನು ಓದಿ:ಬೈಕ್​ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ: ಸ್ಥಳದಲ್ಲೇ ಮೃತಪಟ್ಟ ತಂದೆ - ಮಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.