ETV Bharat / state

ಹೊಸ ವರ್ಷದ ಹಿನ್ನೆಲೆ: ಪಬ್‌ ಅಂಡ್ ರೆಸ್ಟೋರೆಂಟ್, ಪಿ.ಜಿ ಮಾಲೀಕರಿಗೆ ಮಾರ್ಗಸೂಚಿ ಹೊರಡಿಸಿದ ಪೊಲೀಸರು - kannada top news

ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಹಲವು ಅಂಶಗಳ ನಿರ್ದೇಶನ ಪಾಲಿಸುವಂತೆ ಮಾರ್ಗಸೂಚಿ ಬಿಡುಗಡೆ - ನಿಯಮ ಉಲ್ಲಂಘನೆಯಾದಲ್ಲಿ ಕರ್ನಾಟಕ ಸಾರ್ವಜನಿಕ ಸುರಕ್ಷತೆ ಕಾಯ್ದೆ 2018ರ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಪೊಲೀಸರು.

new-year-celebration-police-issued-guidelines-to-pub-and-restaurant-pg-owners
ಹೊಸ ವರ್ಷ ಹಿನ್ನೆಲೆ: ಪಬ್‌ ಅಂಡ್ ರೆಸ್ಟೋರೆಂಟ್, ಪಿ.ಜಿ ಮಾಲೀಕರಿಗೆ ಮಾರ್ಗಸೂಚಿ ಹೊರಡಿಸಿದ ಪೊಲೀಸರು
author img

By

Published : Dec 28, 2022, 6:27 PM IST

ಬೆಂಗಳೂರು: ಹೊಸ ವರ್ಷ ಹಿನ್ನೆಲೆ ಪಬ್, ಕ್ಲಬ್, ರೆಸ್ಟೋರೆಂಟ್ ಹಾಗೂ ಪಿ.ಜಿ ಮಾಲೀಕರು ಕೈಗೊಳ್ಳಬೇಕಾದ‌ ಮುಂಜಾಗ್ರತಾ ಕ್ರಮಗಳ ಬಗ್ಗೆ ಠಾಣಾ ಮಟ್ಟದಲ್ಲಿ ಪೊಲೀಸರು ಸಭೆ ನಡೆಸುತ್ತಿದ್ದು ಹತ್ತು ಹಲವು ಅಂಶಗಳ ನಿರ್ದೇಶನ ಪಾಲಿಸುವಂತೆ ಸೂಚನೆ‌ ನೀಡಿದ್ದಾರೆ.

ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಈ ಕೆಳಕಂಡ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅಳವಡಿಸಿಕೊಳ್ಳುವಂತೆ ಸೂಚಿಸಿ ಕರ್ನಾಟಕ ಸಾರ್ವಜನಿಕ ಸುರಕ್ಷತೆ ಕಾಯ್ದೆ 2018ರ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

  • ಹೊಸ ವರ್ಷದ ಪ್ರಯುಕ್ತ ಪಿ.ಜಿ ಯಿಂದ ಕ್ಯಾಬ್​ನಲ್ಲಿ ಹೊರಗಡೆ ಹೋಗುವವರ ಮತ್ತು ಒಳಗಡೆ ಬರುವವರ ಮಾಹಿತಿ ಹಾಗೂ ಕ್ಯಾಬ್ ಮತ್ತು ವಾಹನಗಳ ಮಹಿಳೆಯರಿಗೆ ಮಾಹಿತಿ ಸಂಗ್ರಹಿಸುವುದು. ಪಿ.ಜಿ ಯಲ್ಲಿ ಇರುವವರ ಆಗಮನ ಮತ್ತು ನಿರ್ಗಮನದ ಬಗ್ಗೆ ನಿಖರವಾದ ಸಮಯವನ್ನ ಲೆಡ್ಜರ್ ನಲ್ಲಿ ನಮೂದಿಸಬೇಕು.
  • ತಮ್ಮ ಪಿ.ಜಿ ಗಳಲ್ಲಿ ಟೇರಸ್‌ ಮೇಲೆ ಪಾರ್ಟಿ ಮಾಡಿ ಕುಡಿಯುವವರ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಹೊಸ ವರ್ಷದ ಪ್ರಯುಕ್ತ ಹೊಸಬರು ಮತ್ತು ಅಪರಿಚಿತರನ್ನು ಪಿ.ಜಿ ಒಳಗೆ ಸೇರಿಸಿಕೊಳ್ಳಬಾರದು. ಪಿ.ಜಿ ಗಳ ಮುಂಭಾಗದ ರಸ್ತೆಗಳಲ್ಲಿ ಹೊಸ ವರ್ಷದ ಪ್ರಯುಕ್ತ ಕೇಕ್​ಗಳನ್ನು ಕಟ್ ಮಾಡಬಾರದು.
  • ಮಹಿಳಾ ಪಿಜಿಗಳಿಗೆ ಶುಭಕೋರಲು ಆ ವೇಳೆಯಲ್ಲಿ ಬರುವ ಪುರುಷರಿಗೆ ಅವಕಾಶ ನೀಡಬಾರದು. ಪಿ.ಜಿ ಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆ ನೀವೇ ನೇರ ಹೊಣೆಗಾರರಾಗಿರುತ್ತೀರಿ ಎಂದು ಎಲ್ಲಾ ಪಿ.ಜಿ. ಮಾಲೀಕರಿಗೆ‌ ನೊಟೀಸ್ ನೀಡಲಾಗಿದೆ.

ಪಬ್ - ರೆಸ್ಟೋರೆಂಟ್‌ ಮಾಲೀಕರಿಗೂ ಕೈಗೊಳ್ಳಬೇಕಾದ ಕ್ರಮಗಳೇನು?

ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ ಮಾಲೀಕರಿಗೂ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಳಕಂಡ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅಳವಡಿಸಿಕೊಳ್ಳುವಂತೆ ಸೂಚನೆ‌ ನೀಡಲಾಗಿದೆ.

  • ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ, ಪಬ್, ಬಾರ್ & ರೆಸ್ಟೋರೆಂಟ್‌ಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು. ಕಾರ್ಯಕ್ರಮ ಆಯೋಜಿಸುವ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಸೂಕ್ತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಮತ್ತು ಸಿಸಿಟಿವಿ ಫೂಟೇಜ್​ ಬ್ಯಾಕಪ್‌ ಇಟ್ಟುಕೊಳ್ಳುವುದು.
  • ಕಾರ್ಯಕ್ರಮಕ್ಕೆ ಬರುವ ಗ್ರಾಹಕರ ಬ್ಯಾಗ್‌, ಲಗೇಜ್​ಗಳನ್ನು ಚೆಕ್ ಮಾಡಿ ಯಾವುದೇ ಆಯುಧ, ಸ್ಫೋಟಕ, ಗಾಂಜಾ ಮತ್ತು ಇತರ ಮಾದಕ ವಸ್ತು ಇಲ್ಲದಿರುವ ಬಗ್ಗೆ ಖಚಿತಪಡಿಕೊಳ್ಳಬೇಕು.
  • ಕಾರ್ಯಕ್ರಮಕ್ಕೆ ಬರುವ ಗ್ರಾಹಕರಿಗೆ ಆಗಮನ ಅಥವಾ ನಿರ್ಗಮನ ಸ್ಥಳಗಳನ್ನು ಪ್ರತ್ಯೇಕವಾಗಿ ರಚಿಸಿ, ನಿರ್ವಹಿಸುವುದು ಮತ್ತು ಒಳ ಬಿಡುವ ಗ್ರಾಹಕರಿಗೆ ಹೆಚ್.ಹೆಚ್.ಎಂ.ಡಿ ಮೂಲಕ ಚೆಕ್‌ ಮಾಡಿ ಪರಿಶೀಲಿಸಬೇಕು.
  • ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರಿಗೆ ಒಳಗಡೆ ಪ್ರವೇಶ ನೀಡಬಾರದು. ಒಂದು ವೇಳೆ ಅಪ್ರಾಪ್ತರಿಗೆ ಒಳಗೆ ಹೋಗಲು ಅವಕಾಶ ನೀಡಿದ್ದು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.
  • ಹೊಸವರ್ಷಾಚರಣೆ ಸಂಬಂಧ ಹೆಚ್ಚಾಗಿ ಮದ್ಯಪಾನ ಮಾಡಿದವರು ಸುಧಾರಿಸಿಕೊಳ್ಳಲು ಐಸ್‌ಲ್ಯಾಂಡ್ ಸ್ಥಳ ಆಯೋಜಿಸುವುದು.
  • ಮಹಿಳಾ ಗ್ರಾಹಕರು ಅತಿಯಾಗಿ ಮದ್ಯಸೇವಿಸಿ ತಮ್ಮ ಸಮತೋಲನ ಕಳೆದುಕೊಳ್ಳುವ ಸಂಭವ ಇರುವುದರಿಂದ ಮಹಿಳಾ ಗ್ರಾಹಕರ ಭದ್ರತೆ ಮತ್ತು ಸುರಕ್ಷತೆ ಸಲುವಾಗಿ ಮಹಿಳಾ ಬೌನ್ಸ್‌‌ರ್​ಗಳನ್ನು ನೇಮಿಸಿಕೊಳ್ಳತಕ್ಕದ್ದು.
  • ಅತಿಯಾಗಿ ಮದ್ಯಸೇವಿಸಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಮಹಿಳೆಯರನ್ನು ಮಹಿಳಾ ಬೌನ್ಸರ್‌ಗಳ ಸಹಾಯದಿಂದ ಅವರ ವಾಸಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡುವುದು. ಅಂತಹ ಮಹಿಳೆಯರನ್ನು ಕಳುಹಿಸುವ ವಾಹನಗಳ ನಂಬರ್ ಹಾಗೂ ಚಾಲಕರ ಫೋಟೋ ತೆಗೆದುಕೊಳ್ಳತಕ್ಕದ್ದು.
  • ಮದ್ಯದಂಗಡಿ ಒಳಗೆ ಹೊರಗೆ ಮತ್ತು ಅಲ್ಲಿನ ಸುತ್ತಮುತ್ತಲಿನ ಪ್ರದೇಶದಂತೆ ಯಾವುದೇ ಅಹಿತಕರ ಘಟನೆ. ಜರುಗದಂತೆ ಎಚ್ಚರ ವಹಿಸುವುದು, ಹಾಗೇನಾದರೂ ಮದ್ಯದಂಗಡಿ ಪರಿಸರದಲ್ಲಿ ಅಪರಾಧ ನಡೆದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.
  • ಕಾರ್ಯಕ್ರಮ ಆಯೋಜಿಸಲು ಪೊಲೀಸ್ ಇಲಾಖೆಯಿಂದ ಮತ್ತು ಸಂಬಂಧಪಟ್ಟ ಪ್ರಾಧಿಕಾರ ಅಥವಾ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳುವುದು. ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳತಕ್ಕದ್ದು ಮತ್ತು ಧ್ವನಿವರ್ಧಕ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸತಕ್ಕದ್ದು.

ಕಾರ್ಯಕ್ರಮಗಳಲ್ಲಿ ಸೇರುವ ಗ್ರಾಹಕರುಗಳೆನುಸಾರವಾಗಿ ಆಯೋಜಕರುಗಳೇ ಜವಾಬ್ದಾರರಾಗಿದ್ದು, ಅವಶ್ಯಕ ರಕ್ಷಣಾ ವ್ಯವಸ್ಥೆ ಮಾಡಿಕೊಂಡು ನಿರ್ವಹಿಸುವುದು ಹಾಗೂ ಕೋವಿಡ್-19 ಸಂಬಂಧಪಟ್ಟಂತೆ ಹೊರಡಿಸಲಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸರು ಖಡಕ್ ಸೂಚನೆ‌ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಹಿನ್ನೋಟ: ದ.ಕನ್ನಡದಲ್ಲಿ ಧರ್ಮ ಸಂಘರ್ಷ, ಹಿಜಾಬ್‌, ನೈತಿಕ ಪೊಲೀಸ್‌ಗಿರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.