ETV Bharat / state

5 ವಿವಿಗಳಿಗೆ ಉಪಕುಲಪತಿಗಳ ನೇಮಕ; ರಾಜ್ಯಪಾಲರಿಂದ ಆದೇಶ

author img

By

Published : Jun 18, 2019, 11:05 PM IST

ರಾಜ್ಯದ ಐದು ವಿಶ್ವವಿದ್ಯಾಲಯಗಳಿಗೆ ನೂತನ ಉಪ ಕುಲಪತಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯಪಾಲ ವಜುಭಾಯ್​ ವಾಲಾ ಇಂದು ಈ ಆದೇಶ ಹೊರಡಿಸಿದ್ದಾರೆ.

ರಾಜ್ಯಪಾಲ

ಬೆಂಗಳೂರು: ಕುವೆಂಪು, ಕರ್ನಾಟಕ, ರಾಣಿ ಚೆನ್ನಮ್ಮ ವಿವಿಗಳು ಸೇರಿದಂತೆ ರಾಜ್ಯದ ಐದು ವಿಶ್ವವಿದ್ಯಾಲಯಗಳಿಗೆ ಹೊಸ ಉಪಕುಲಪತಿಗಳನ್ನ ನೇಮಿಸಿ ರಾಜ್ಯಪಾಲ ವಜುಭಾಯ್​ ವಾಲಾ ಅವರು ಇಂದು ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿರುವ ಕರ್ನಾಟಕ ಸಂಸ್ಕ್ರತ ವಿಶ್ವವಿದ್ಯಾಲಯಕ್ಕೆ ಪ್ರೊ. ವಿ ಗಿರೀಶ್ ಚಂದ್ರ ಅವರು ಉಪಕುಲಪತಿಗಳಾಗಿ ರಾಜ್ಯಪಾಲರಿಂದ ನೇಮಕಗೊಂಡಿದ್ದಾರೆ.

ಪ್ರೊ. ಎಸ್ ಪಿ ಮೆಲ್ಕೇರಿ ಅವರನ್ನ ಕಲ್ಬುರ್ಗಿ ವಿವಿ, ಪ್ರೊ. ಎಸ್.ಎಂ ಹುರಕಡ್ಲಿ ಅವರನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ, ಪ್ರೊ.ಎಸ್.ಎಸ್. ಪಾಟೀಲ್ ಅವರನ್ನು ಶಿವಮೊಗ್ಗದ ಕುವೆಂಪು ವಿವಿ , ಡಾ.ಎ.ಎಸ್. ಶಿರಾಲ್ ಶೆಟ್ಟಿ ಅವರನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಹೊಸ ಉಪಕುಲಪತಿಗಳ ನೇಮಕ ಆದೇಶವು ತಕ್ಷಣದಿಂದಲೇ ಜಾರಿಗೆ ಬರುತ್ತದೆ ರಾಜ್ಯಪಾಲ ವಜುಭಾಯ್​ ವಾಲಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಹಲವಾರು ದಿನಗಳಿಂದ ಉಪಕುಲಪತಿಗಳ ನೇಮಕ ಪ್ರಕ್ರಿಯೆ ನಡೆದಿದ್ದು ಅಂತಿಮವಾಗಿ ಉಪಕುಲಪತಿಗಳ ನೇಮಕಾತಿ ಪ್ಯಾನಲ್ ನೀಡಿದ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ಐದೂ ವಿಶ್ವವಿದ್ಯಾಲಯಗಳಿಗೆ ಏಕಕಾಲಕ್ಕೆ ವಿಸಿಗಳನ್ನ ನೇಮಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ವಿಶ್ವವಿದ್ಯಾಲಯಗಳಿಗೆ ಉತ್ತರ ಕರ್ನಾಟಕ ಭಾಗದ ಪ್ರಾಧ್ಯಾಪಕರನ್ನೇ ಉಪಕುಲಪತಿಗಳನ್ನಾಗಿ ನೇಮಿಸುವಂತೆ ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸಿಎಂ ಮತ್ತು ಡಿಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದರು. ಆದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕರಾವಳಿ ಭಾಗದ ಡಾ.ಎ.ಎಸ್ ಶಿರಾಲ್ ಶೆಟ್ಟಿ ಅವರನ್ನು ನೇಮಿಸಲಾಗಿದೆ.

Intro: ಯೂನಿವರ್ಸಿಟಿಗಳಿಗೆ ಐವರು ಹೊಸ ವಿಸಿಗಳ ನೇಮಕ
ಯಾವ ವಿವಿಗೆ ಯಾರು ಉಪಕುಲಪತಿ...ಗೊತ್ತಾ...?

ಬೆಂಗಳೂರು : ಕುವೆಂಪು, ಕರ್ನಾಟಕ, ರಾಣಿ ಚೆನ್ನಮ್ಮ ವಿವಿಗಳು ಸೇರಿದಂತೆ ರಾಜ್ಯದ ಐದು ವಿಶ್ವವಿದ್ಯಾಲಯಗಳಿಗೆ ಹೊಸ ಉಪ ಕುಲಪತಿಗಳನ್ನ ನೇಮಿಸಿ ರಾಜ್ಯಪಾಲರು ಇಂದು ಆದೇಶ ಹೊರಡಿಸಿದ್ದಾರೆ.

Body: ಬೆಂಗಳೂರಿನಲ್ಲಿರುವ ಕರ್ನಾಟಕ ಸಂಸ್ಕ್ರತ ವಿಶ್ವವಿದ್ಯಾಲಯ ಕ್ಕೆ ಪ್ರೊ . ವಿ ಗಿರೀಶ್ ಚಂದ್ರ ಅವರು ಉಪಕುಲಪತಿಗಳಾಗಿ ರಾಜ್ಯಪಾಲರಿಂದ ನೇಮಕಗೊಂಡಿದ್ದಾರೆ.

ಪ್ರೊ. ಎಸ್ ಪಿ ಮೆಲ್ಕೇರಿ ಅವರನ್ನ ಕಲ್ಬುರ್ಗಿ ವಿವಿ, ಪ್ರೊ. ಎಸ್.ಎಂ ಹುರಕಡ್ಲಿ ಅವರನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ, ಪ್ರೊ.ಎಸ್.ಎಸ್ ಪಾಟೀಲ್ ಅವರನ್ನು ಶಿವಮೊಗ್ಗದ ಕುವೆಂಪು ವಿವಿ , ಡಾ.ಎ ಎಸ್ ಶಿರಾಲ್ ಶೆಟ್ಟಿ ಅವರನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ದ ಉಪಕುಲಪತಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಹೊಸ ಉಪಕುಲಪತಿಗಳ ನೇಮಕ ಆದೇಶವು ತಕ್ಷಣದಿಂದಲೇ ಜಾರಿಗೆ ಬರುತ್ತದೆ ರಾಜ್ಯಪಾಲ ವಾಜುಬಾಯಿ ವಾಲಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Conclusion: ಹಲವಾರು ದಿನಗಳಿಂದ ಉಪಕುಲಪತಿಗಳ ನೇಮಕ ಪ್ರಕ್ರಿಯೆ ನಡೆದಿದ್ದು ಅಂತಿಮವಾಗಿ ಉಪಕುಲಪತಿಗಳ ನೇಮಕಾತಿ ಪ್ಯಾನಲ್ ನೀಡಿದ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ಐದೂ ವಿಶ್ವವಿದ್ಯಾಲಯ ಗಳಿಗೆ ಏಕ ಕಾಲಕ್ಕೆ ವಿಸಿಗಳನ್ನ ನೇಮಿಸಿದ್ದಾರೆ.

ಉತ್ತರ ಕರ್ನಾಟ ಭಾಗದ ವಿಶ್ವವಿದ್ಯಾಲಯ ಗಳಿಗೆ ಉತ್ತರ ಕರ್ನಾಟಕ ಭಾಗದ ಪ್ರಾಧ್ಯಾಪಕ ರನ್ನೇ ಉಪಕುಲಪತಿಗಳನ್ನಾಗಿ ನೇಮಿಸುವಂತೆ ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸಿಎಂ ಮತ್ತು ಡಿಸಿಎಂ ಗೆ ಪತ್ರ ಬರೆದು ಒತ್ತಾಯಿಸಿದ್ದರು. ಆದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕ್ಕೆ ಕರಾವಳಿ ಭಾಗದ ಡಾ. ಎ.ಎಸ್ ಶಿರಾಲ್ ಶೆಟ್ಟಿ ಅವರನ್ನು ನೇಮಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.