ETV Bharat / state

ವಿಧಾನ ಪರಿಷತ್​​​ನಲ್ಲಿ ಹಿರಿಯರ ಕೊರತೆ : ಕಾಂಗ್ರೆಸ್ ರಾಜ್ಯ ನಾಯಕರಿಗೆ ಹೊಸ ಚಿಂತೆ

author img

By

Published : Dec 28, 2021, 3:40 PM IST

ಕಾಲು ಶತಮಾನದ ಅನುಭವ ಹೊಂದಿದ್ದ ಎಸ್ಆರ್ ಪಾಟೀಲ್ ಹಾಗೂ ಪ್ರತಾಪ್ ಚಂದ್ರ ಶೆಟ್ಟಿ ಜೊತೆ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಅನುಭವ ಹೊಂದಿದ್ದ ಬಸವರಾಜ ಪಾಟೀಲ್ ಇಟಗಿ, ವಿಧಾನ ಪರಿಷತ್‌ನಲ್ಲಿ ಹಿರಿಯರೆನಿಸಿಕೊಂಡಿದ್ದ ಧರ್ಮಸೇನ, ಸದಸ್ಯರಾದ ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್, ಶ್ರೀನಿವಾಸ್ ಮಾನೆ, ಆರ್. ಪ್ರಸನ್ನಕುಮಾರ್, ಎಂ.ಎ. ಗೋಪಾಲಸ್ವಾಮಿ, ಎಂ. ನಾರಾಯಣಸ್ವಾಮಿ, ರಘು ಆಚಾರ್, ವಿಜಯ್ ಸಿಂಗ್ ಮತ್ತಿತರರು ವಿಧಾನ ಪರಿಷತ್ತಿನಿಂದ ಹೊರ ನಡೆಯುತ್ತಿದ್ದಾರೆ..

ವಿಧಾನ ಪರಿಷತ್
ವಿಧಾನ ಪರಿಷತ್

ಬೆಂಗಳೂರು : ಮುಂಬರುವ ಅಧಿವೇಶನದಲ್ಲಿ ಹಿರಿಯ ಸದಸ್ಯರ ಅಲಭ್ಯತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೊಸದೊಂದು ತಲೆಬಿಸಿ ಉಂಟುಮಾಡಿದೆ.

ಜನವರಿ ತಿಂಗಳ ಕೊನೆಯಲ್ಲಿ ಇಲ್ಲವೇ ಫೆಬ್ರುವರಿ ಆರಂಭದಲ್ಲಿ ಶುರುವಾಗುವ ವಿಧಾನ ಮಂಡಲ ಸದನಗಳ ಬಜೆಟ್ ಪೂರ್ವಭಾವಿ ಅಧಿವೇಶನ ಹಾಗೂ ನಂತರ ನಡೆಯುವ ಬಜೆಟ್ ಅಧಿವೇಶನ ಸೇರಿದಂತೆ ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿಪಾದಿಸಿಕೊಳ್ಳುವ ಹಿರಿಯ ಸದಸ್ಯರ ಕೊರತೆ ದೊಡ್ಡ ಮಟ್ಟದಲ್ಲಿ ಕಾಡಲಿದೆ.

ಎಸ್ಆರ್ ಪಾಟೀಲ್
ಎಸ್ಆರ್ ಪಾಟೀಲ್

ಕಾಲು ಶತಮಾನ ವಿಧಾನ ಪರಿಷತ್‌ನಲ್ಲಿ ಕಳೆದಿರುವ ಹಿರಿಯ ಸದಸ್ಯರಾದ ಹಾಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಹಾಗೂ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸೇರಿದಂತೆ ಹಲವು ನಾಯಕರು ಇದೇ ಬರುವ ಜನವರಿ 5ಕ್ಕೆ ನಿವೃತ್ತಿಯಾಗಲಿದ್ದಾರೆ.

ಇತ್ತೀಚೆಗೆ ವಿಧಾನ ಪರಿಷತ್ತಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ 13 ಸ್ಥಾನಗಳ ಪೈಕಿ 10 ಸ್ಥಾನವನ್ನು ಮಾತ್ರ ಗೆದ್ದುಕೊಳ್ಳುವಲ್ಲಿ ಸಫಲವಾಗಿದೆ. ಈ ಮೂಲಕ 29 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ಇದೀಗ 26ಕ್ಕೆ ಕುಸಿದಿದೆ.

ನಿವೃತ್ತಿ ಹೊಂದುತ್ತಿರುವ 13 ಸದಸ್ಯರ ಪೈಕಿ ವಿವಿಧ ಕಾರಣಗಳಿಗೆ ಕೇವಲ ಮೂವರು ಮಾತ್ರ ಮರು ಆಯ್ಕೆಗೆ ಕಣಕ್ಕಿಳಿದಿದ್ದರು. ಇವರ ಪೈಕಿ ಎಸ್ ರವಿ ಹೊರತುಪಡಿಸಿದರೆ ಉಳಿದಿಬ್ಬರು ಸದಸ್ಯರು ಸೋಲುಂಡಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಕೆ ಸಿ ಕೊಂಡಯ್ಯ ಇವರಲ್ಲಿ ಒಬ್ಬರು ಎನ್ನುವುದು ಪ್ರಮುಖ.

ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ
ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ

ಕಾಲು ಶತಮಾನದ ಅನುಭವ ಹೊಂದಿದ್ದ ಎಸ್‌ ಆರ್ ಪಾಟೀಲ್ ಹಾಗೂ ಪ್ರತಾಪ್ ಚಂದ್ರ ಶೆಟ್ಟಿ ಜೊತೆ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಅನುಭವ ಹೊಂದಿದ್ದ ಬಸವರಾಜ ಪಾಟೀಲ್ ಇಟಗಿ, ವಿಧಾನ ಪರಿಷತ್‌ನಲ್ಲಿ ಹಿರಿಯರೆನಿಸಿಕೊಂಡಿದ್ದ ಧರ್ಮಸೇನ, ಸದಸ್ಯರಾದ ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್, ಶ್ರೀನಿವಾಸ್ ಮಾನೆ, ಆರ್. ಪ್ರಸನ್ನಕುಮಾರ್, ಎಂ.ಎ. ಗೋಪಾಲಸ್ವಾಮಿ, ಎಂ. ನಾರಾಯಣಸ್ವಾಮಿ, ರಘು ಆಚಾರ್, ವಿಜಯ್ ಸಿಂಗ್ ಮತ್ತಿತರರು ವಿಧಾನ ಪರಿಷತ್ತಿನಿಂದ ಹೊರ ನಡೆಯುತ್ತಿದ್ದಾರೆ.

ಕೆ ಸಿ ಕೊಂಡಯ್ಯ
ಕೆ ಸಿ ಕೊಂಡಯ್ಯ

ಕಾಂಗ್ರೆಸ್ ಪಾಲಿಗೆ ಎಸ್ ಆರ್ ಪಾಟೀಲ್, ಪ್ರತಾಪ್ ಚಂದ್ರ ಶೆಟ್ಟಿ ಕೆಸಿ ಕೊಂಡಯ್ಯ, ಧರ್ಮಸೇನ, ಬಸವರಾಜ ಪಾಟೀಲ್ ಇಟಗಿ ಅವರಂತಹ ಪ್ರಮುಖ ಹಾಗೂ ಉತ್ತಮ ವಾಗ್ಮಿಗಳ ಕೊರತೆ ಪರಿಷತ್​​​ನಲ್ಲಿ ಎದುರಾಗಲಿದೆ. ಇವರಿಗೆ ಪರ್ಯಾಯವಾಗಿ ಕಾಂಗ್ರೆಸ್​​ನಿಂದ ಆಯ್ಕೆಯಾಗಿರುವ 10 ಸದಸ್ಯರಲ್ಲಿ ಅಂತಹ ಅನುಭವಿಗಳು ಇಲ್ಲ. ಪ್ರತಿಯೊಬ್ಬರು ಮೊದಲ ಬಾರಿಗೆ ಆಯ್ಕೆಯಾದವರಾಗಿದ್ದು, ವಿಧಾನಸಭೆ ಸದಸ್ಯರ ಪ್ರಭಾವಿ ಕಾಂಗ್ರೆಸ್ ನಾಯಕರ ಸೋದರರು ಅಥವಾ ಸಂಬಂಧಿಕರು ಆಗಿದ್ದಾರೆ.

ಪ್ರತಿಪಕ್ಷವಾಗಿ ಪ್ರಸ್ತುತ ತನ್ನ ಸಂಖ್ಯಾಬಲವನ್ನು ಸಹ ಕಡಿಮೆ ಮಾಡಿಕೊಂಡಿರುವ ಕಾಂಗ್ರೆಸ್ಸಿಗೆ ಆಡಳಿತ ಪಕ್ಷ ಬಿಜೆಪಿಯನ್ನು ಎದುರಿಸುವ ಸಮರ್ಥ ಸದಸ್ಯರ ಕೊರತೆ ಸಹ ಎದುರಾಗಿದೆ. ಜನವರಿ ತಿಂಗಳಲ್ಲಿ ಆರಂಭವಾಗುವ ವಿಧಾನ ಮಂಡಲದ ಉಭಯ ಸದನಗಳ ಬಜೆಟ್ ಪೂರ್ವಭಾವಿ ಅಧಿವೇಶನದಲ್ಲಿ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಿ ಅನುಮೋದನೆ ಪಡೆಯಲು ಮುಂದಾಗಿದೆ.

ಈ ಸಂದರ್ಭ ಸರ್ಕಾರವನ್ನ ಎದುರಿಸುವುದು ಕಾಂಗ್ರೆಸ್​​ಗೆ ಪ್ರತಿಷ್ಠೆಯಾಗಿದ್ದು, ಪಕ್ಷದ ಪರವಾಗಿ ಸಮರ್ಥವಾಗಿ ವಾದ ಮಂಡಿಸುವ ಸದಸ್ಯರ ಕೊರತೆ ಎದುರಾಗಲಿದೆ. ವಿಧಾನ ಪರಿಷತ್‌ನಲ್ಲಿ ಸರ್ಕಾರವನ್ನು ಹೇಗೆ ಎದುರಿಸುವುದು ಎನ್ನುವುದು ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸದ್ಯ ವಿಧಾನಪರಿಷತ್‌ನಲ್ಲಿ ಹಿರಿಯ ಸದಸ್ಯರಾಗಿರುವ ಸಿಎಂ ಇಬ್ರಾಹಿಂ, ನಜೀರ್ ಅಹಮದ್ ಮತ್ತು ಬಿಕೆ ಹರಿಪ್ರಸಾದ್ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಬಹುತೇಕ ಜನವರಿ ವೇಳೆಗೆ ಸ್ವತಂತ್ರವಾಗಿ ಬಹುಮತ ಸಾಧಿಸುವ ಸಂಖ್ಯಾಬಲವನ್ನು ಬಿಜೆಪಿ ಹೊಂದಲಿದೆ. ಪ್ರಸ್ತುತ ಮೈತ್ರಿ ಪಕ್ಷವಾಗಿರುವ ಜೆಡಿಎಸ್ ಸದಸ್ಯರು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿದರೂ ಪರಿಷತ್​​ನಲ್ಲಿ ಅವರ ಬೆಂಬಲ ಬಿಜೆಪಿಗೆ ಲಭಿಸಲಿದೆ ಎನ್ನಲಾಗ್ತಿದೆ. ಫೆಬ್ರುವರಿ ತಿಂಗಳಲ್ಲಿ ನಡೆಯುವ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ 4 ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸಾಧಿಸುವ ಗೆಲುವು ಬಿಜೆಪಿಗೆ ಇನ್ನಷ್ಟು ಬಲ ತುಂಬಿಕೊಡಲಿದೆ.

ದಿನದಿಂದ ದಿನಕ್ಕೆ ಸದಸ್ಯರ ಬಲ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಅನುಭವಿಗಳ ಕೊರತೆಯನ್ನು ಸಹ ಜೊತೆಜೊತೆಗೆ ಎದುರಿಸಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ 40ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಕಾಂಗ್ರೆಸ್ ಅನಿವಾರ್ಯವಾಗಿ ಪ್ರತಿಪಕ್ಷದ ಸದಸ್ಯರು ಇರುವ ಆಸನಗಳವರೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಆದರೆ, ಇದೀಗ ಹಿರಿಯರ ಕೊರತೆ ಎದುರಾಗಿದೆ. ಹಿರಿಯರ ಕೊರತೆ ಹಾಗೂ ಸದಸ್ಯರ ಬಲ ಕಡಿಮೆ ಇರುವುದನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ಕಾಂಗ್ರೆಸ್ ರಾಜ್ಯ ನಾಯಕರಿಗೆ ದೊಡ್ಡ ತಲೆಬಿಸಿಯಾಗಿ ಪರಿಣಮಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.