ETV Bharat / state

ಆರೋಪಿ ಬಂಧಿಸುವಾಗ ಸ್ನಾನ ಮಾಡಿಸಿ, ಉಗುರು ಕಟ್ ಮಾಡಿ: ಹೊಸ ನಿಯಮ ಕೇಳಿ ಪೊಲೀಸರು ತಬ್ಬಿಬ್ಬು - Bengaluru City Police Commissioner Formed new rule

ಆರೋಪಿ ಬಂಧಿಸಲು ಹೋದ ಪೊಲೀಸ್​ ಸಿಬ್ಬಂದಿಗೆ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ, ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಸಿಬ್ಬಂದಿಗೆ ಹೊಸ ನಿಯಮ ರೂಪಿಸಿದ್ದಾರೆ. ಈ ನಿಯಮ ಕೇಳಿ ಸಿಬ್ಬಂದಿ ಗೊಂದಲಕ್ಕೀಡಾಗಿದ್ದಾರೆ.

New rule for Bengaluru city police personnel
ಹೊಸ ನಿಯಮ ರೂಪಿಸಿದ ಪೊಲೀಸ್​ ಆಯಕ್ತ ಭಾಸ್ಕರ್​ ರಾವ್
author img

By

Published : Jun 30, 2020, 8:14 AM IST

ಬೆಂಗಳೂರು : ಕೊರೊನಾ ಹರಡುವ ಭೀತಿ ಹಿನ್ನೆಲೆ ಪೊಲೀಸ್​ ಸಿಬ್ಬಂದಿ ಸುರಕ್ಷತೆಯ ನಿಟ್ಟಿನಲ್ಲಿ ಆರೋಪಿಗಳನ್ನು ಬಂಧಿಸುವಾಗ ಪಾಲಿಸಬೇಕಾದ ಕ್ರಮಗಳ ಕುರಿತು ನಗರ ಪೊಲೀಸ್​ ಆಯುಕ್ತ ಭಾಸ್ಕರ್​​​ರಾವ್ ನಿಯಮ ರೂಪಿಸಿದ್ದು, ಹೊಸ ರೂಲ್ಸ್​​ ಕೇಳಿ ಕೆಲ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ.

ಹೊಸ ನಿಯಮಗಳೇನು..?: ಹೊಸ ನಿಯಮದ ಪ್ರಕಾರ ಆರೋಪಿಗಳನ್ನು ಬಂಧಿಸಿದ ತಕ್ಷಣ ಪೊಲೀಸರು ಅವರನ್ನು ಎರಡು ಬಾರಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಬೇಕು. ಬಳಿಕ ಅವರ ಕೈ ಕಾಲುಗಳ ಉಗುರು ಕತ್ತರಿಸಬೇಕು. ಇದಾದ ಬಳಿಕ ಮುಂದಿನ ಕಾರ್ಯವನ್ನು ಮಾಡಬೇಕು. ಈ ನಿಯಮಗಳನ್ನು ಪಾಲಿಸುವಂತೆ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಠಾಣೆಗಳೇ‌ ಇಲ್ಲದೆ ನಿಯಮ ಪಾಲಿಸುವುದು ಹೇಗೆ..?

ಸದ್ಯ ಸಿಲಿಕಾನ್ ಸಿಟಿಯ ಸುಮಾರು 31 ಪೊಲೀಸ್​ ಠಾಣೆಗಳು ಸೀಲ್​​​​​ಡೌನ್ ಆಗಿದೆ. ಕೊರೊನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಕೆಲ ಠಾಣೆಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಆಯುಕ್ತರು ಸೂಚಿಸಿದ ಈ ನಿಯಮಗಳನ್ನು ಪಾಲಿಸುವುದು ಅಸಾಧ್ಯ. ಇದರ ಜೊತೆಗೆ ಆರೋಪಿಗಳು ಸ್ಲಂ ಸೇರಿದಂತೆ ಇತರ ಕಡೆ ಸುತ್ತಾಡಿರುವುದರಿಂದ ಅವರ ಮೂಲಕ ಸಿಬ್ಬಂದಿಗೆ ಸೋಂಕು ತಗುಲುವ ಸಾಧ್ಯತೆಯಿದೆ. ಆದ್ದರಿಂದ ಸಿಬ್ಬಂದಿ ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ಡಿಸಿಪಿಗಳು ಕೂಡ ಆಯುಕ್ತರೊಂದಿಗೆ ಈ ಕುರಿತು ಚರ್ಚಿಸುವ ನಿರ್ಧಾರ ಮಾಡಿದ್ದಾರೆ.

ಪೊಲೀಸ್​ ಸಿಬ್ಬಂದಿಗೆ ಕೊರೊನಾ ಭೀತಿ:

ಇನ್ನು, ಈ ಹೊಸ ನಿಯಮ ಪಾಲಿಸುವುದು ಅಸಾಧ್ಯ ಎಂಬುವುದು ಪೊಲೀಸ್​ ಸಿಬ್ಬಂದಿ ಮಾತು. ಕಾರಣ, ಇತ್ತೀಚೆಗೆ ನಗರದಲ್ಲಿ ಹೆಚ್ಚಿನ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಹಲವು ಠಾಣೆಗಳು ಸೀಲ್​​​ಡೌನ್ ಆಗಿದೆ. ಆರೋಪಿಗಳ ಮೂಲಕ ಪೊಲೀಸರಿಗೆ ಸೋಂಕು ತಗುಲಿದ ಪ್ರಕರಣಗಳು ಇವೆ. ಹೀಗಾಗಿ ಆರೋಪಿಗಳನ್ನು ಬಂಧಿಸುವುದೇ ಸಿಬ್ಬಂದಿಗೆ ಸವಾಲಾಗಿದೆ. ಈ ನಡುವೆ ಅವರನ್ನು ಸ್ನಾನ ಮಾಡಿಸಬೇಕೆಂದರೆ ಕಷ್ಟದ ಕೆಲಸ. ಆಯುಕ್ತರು ಒಳ್ಳೆಯದಕ್ಕೆ ಹೇಳಿದ್ದಾರೆ, ಆದರೂ ಇದು ಅಪಾಯಕಾರಿ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.