ಬೆಂಗಳೂರು : ಸಿಬಿಐನಿಂದ ಹೊಸ ನೋಟಿಸ್ ಕೊಟ್ಟಿದ್ದಾರೆ. ಚಾರ್ಜ್‌ಶೀಟ್ ಆದ ಮೇಲೆ ಕೋರ್ಟ್ಗೆ ಹೋಗಬೇಕು. ನಮ್ಮ ನಾಯಕರನ್ನ ಇಡಿ ಇನ್ನೂ ವಿಚಾರಣೆ ನಡೆಸ್ತಿದೆ. ಅವರು ಪ್ರಶ್ನೆ ಮಾಡಲಿ, ತೊಂದರೆಯಿಲ್ಲ. ಐದು ದಿನ ವಿಚಾರಣೆ ಮಾಡುವ ಅವಶ್ಯಕತೆ ಏನಿತ್ತು?. ನನಗೆ 3 ತಿಂಗಳ ಹಿಂದೆಯೇ ಚಾರ್ಜ್‌ಶೀಟ್ ಹಾಕಬೇಕಿತ್ತು. ಆದರೆ, ಈಗ ಚಾರ್ಜ್‌ಶೀಟ್ ಹಾಕಿದ್ದಾರೆ. ಐದು ಜನರಿಗೆ ಸಮನ್ಸ್ ಕೊಟ್ಟಿದ್ದಾರೆ. ಕಾನೂನು ಇದೆ, ಅದನ್ನ ಗೌರವಿಸೋಣ. ಜುಲೈ 1ರಂದು ನ್ಯಾಯಾಲಯಕ್ಕೆ ಹಾಜರಾಗ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ನನಗೆ ಮತ್ತು ನಮ್ಮ ರಾಷ್ಟ್ರೀಯ ನಾಯಕರಿಗೆ ಇನ್ನು ಇಡಿಯವರು ಪ್ರಶ್ನೆ ಮಾಡ್ತಿದ್ದಾರೆ. ಸೋನಿಯಾ ಗಾಂಧಿಯವರು ಟೈಮ್ ಕೇಳಿದ್ದಾರೆ. ಅವರು ಪ್ರಶ್ನೆ ಮಾಡಲಿ. ಐದು ದಿನ ಪ್ರಶ್ನೆ ಮಾಡುವಂತಹದ್ದು ನನಗೆ ಅರ್ಥವಾಗ್ತಿಲ್ಲ. ನಮಗೆ ನ್ಯಾಯ ದೊರಕುತ್ತದೆ ಅನ್ನೋ ವಿಶ್ವಾಸವಿದೆ. ನನಗೆ ಆರು ತಿಂಗಳಲ್ಲಿ ಚಾರ್ಜ್‌ಶೀಟ್ ಹಾಕಬೇಕಿತ್ತು. ನೋಡೋಣ ಯಾವಾಗ ಮಾಡ್ತಾರೋ.. ಅದೇನು ಉತ್ತರ ಕೊಡಬೇಕು ಕೊಡ್ತೀನಿ. ಇದು ಹೊಸ ನೋಟಿಸ್, ಕೊಡಲಿ ನೋಡೋಣ ಎಂದರು.
ಕಾಂಗ್ರೆಸ್‌ನ ಮಾಜಿ ಸಚಿವ ಎಂ ಆರ್ ಸೀತಾರಾಂ ಬಂಡಾಯ ವಿಚಾರವಾಗಿ ಮಾತನಾಡಿದ ಅವರು, ಸಭೆ ಮಾಡ್ತಿದ್ದಾರೆ ಅಂತಾ ಅಷ್ಟೇ ಮಾಹಿತಿ ಇದೆ. ಕಾಂಗ್ರೆಸ್ಗೂ ಅವರ ಸಭೆಗೂ ಸಂಬಂಧವಿಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಪಠ್ಯದಲ್ಲಿದ್ದ ತಪ್ಪುಗಳನ್ನು ಸರಿಪಡಿಸಿದ್ದೇವೆ ಎಂಬ ಸಚಿವ ಆರ್. ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆಗ ತಪ್ಪುಗಳು ಆಗುವಾಗ ಇವ್ರು ಏನು ಮಾಡ್ತಿದ್ದರು?. ಆವತ್ತು ಬಾಯಿ ಹೊಲಿದುಕೊಂಡಿದ್ರಾ?. ಈಗ ತಪ್ಪುಗಳನ್ನು ಸರಿಪಡಿಸಿದ್ದೇವೆ ಅಂತಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಅಗ್ನಿಪಥ್ ವಿರುದ್ಧ ದುರುದ್ದೇಶ, ರಾಜಕೀಯ ಪ್ರೇರಿತ ಹೋರಾಟ: ಬಿ.ವೈ.ರಾಘವೇಂದ್ರ