ETV Bharat / state

ವಿಧಾನಸೌಧದತ್ತ ತಲೆ ಹಾಕುತ್ತಿಲ್ಲ: ಖಾತೆಗಳಿಗಾಗಿ ಜವಾಬ್ದಾರಿ ಮರೆತರಾ ನೂತನ ಸಚಿವರು?

author img

By

Published : Jan 20, 2021, 9:02 PM IST

ಸಚಿವ ಸ್ಥಾನಕ್ಕಾಗಿ ವರ್ಷಗಟ್ಟಲೇ ಕಾದು ಕುಳಿತಿದ್ದ ನೂತನ ಸಚಿವರು ಮಂತ್ರಿಪಟ್ಟ ಏರಿ ವಾರ ಕಳೆದರೂ ಕಚೇರಿ ಪೂಜೆ, ಪ್ರವೇಶದಂತಹ ಚಟುವಟಿಕೆಯಲ್ಲಿ ಯಾವುದೇ ಉತ್ಸಾಹ ತೋರುತ್ತಿಲ್ಲ. ಪ್ರಮಾಣವಚನ ನಡೆದ ದಿನದಂದೇ ಎಲ್ಲಾ ಏಳು ಹೊಸ ಸಚಿವರಿಗೂ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಸಚಿವ ಉಮೇಶ್ ಕತ್ತಿ ಮಾತ್ರ ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಕಚೇರಿ ಪ್ರವೇಶ ಮಾಡಿದ್ದು ಬಿಟ್ಟರೆ, ಉಳಿದ ಆರು ಸಚಿವರು ವಿಧಾನಸೌಧದ ತಮ್ಮ ಕಚೇರಿಗಳತ್ತ ಕಾಲಿಟ್ಟಿಲ್ಲ.

new ministers not ready to enter vidhansoudha
ವಿಧಾನಸೌಧದತ್ತ ಬರದ ಸಚಿವರು

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೆದರೂ ನೂತನ ಸಚಿವರು ಶಕ್ತಿ ಸೌಧದತ್ತ ತಲೆ ಹಾಕಿಲ್ಲ. ಕೊಠಡಿ ಹಂಚಿಕೆಯಾಗಿದ್ದರೂ ಕತ್ತಿ ಹೊರತುಪಡಿಸಿ ಇತರರು ಕಚೇರಿ ಪ್ರವೇಶ ಮಾಡಿಲ್ಲ.

ವರ್ಷದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಏಳು ಶಾಸಕರನ್ನು ಸಿಎಂ ಯಡಿಯೂರಪ್ಪ ತಮ್ಮ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ. ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್.ಅಂಗಾರ, ಎಂಟಿಬಿ ನಾಗರಾಜ್, ಆರ್.ಶಂಕರ್,‌ ಸಿ.ಪಿ.ಯೋಗೇಶ್ವರ್ ಜನವರಿ 13ರಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿ ವಾರ ಕಳೆದರೂ ಕಚೇರಿ ಪೂಜೆ, ಪ್ರವೇಶದಂತಹ ಚಟುವಟಿಕೆಯಲ್ಲಿ ನೂತನ ಸಚಿವರಿಂದ ಯಾವುದೇ ಉತ್ಸಾಹ ಕಂಡುಬಂದಿಲ್ಲ. ಪ್ರಮಾಣ ವಚನ ನಡೆದ ದಿನದಂದೇ ಎಲ್ಲಾ ಏಳು ಹೊಸ ಸಚಿವರಿಗೂ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಠಡಿಗಳನ್ನು ಹಂಚಿಕೆ ಮಾಡಿದ್ದಾರೆ. ಆದರೆ ಉಮೇಶ್ ಕತ್ತಿ ಮಾತ್ರ ಸಂಕ್ರಾಂತಿಯಂದು ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಕಚೇರಿ ಪ್ರವೇಶ ಮಾಡಿದ್ದಾರೆ. ಇನ್ನುಳಿದ ಆರು ಸಚಿವರು ವಿಧಾನಸೌಧದ ತಮ್ಮ ಕಚೇರಿಗಳತ್ತ ಸುಳಿದಿಲ್ಲ.

ಖಾತೆಗಾಗಿ ಕಾಯುತ್ತಿದ್ದಾರೆ ನೂತನ ಸಚಿವರು:

ಸಚಿವ ಸ್ಥಾನಕ್ಕಾಗಿ ವರ್ಷಗಟ್ಟಲೇ ಕಾದು ಕುಳಿತಿದ್ದ ನೂತನ ಸಚಿವರು, ಸಚಿವರಾದರೂ ಕಚೇರಿ ಕಡೆ ಮಾತ್ರ ಸುಳಿಯುತ್ತಿಲ್ಲ. ಪ್ರತಿ ದಿನ ಸಿಎಂ ನಿವಾಸ, ವಿಧಾನಸೌಧಕ್ಕೆ ಅಲೆದಾಡುತ್ತಿದ್ದವರು ಇದೀಗ ಅಪರೂಪವಾಗಿದ್ದಾರೆ. ಪ್ರಮುಖ ಖಾತೆಗಳ ಲಾಬಿಯಲ್ಲಿ ನಿರತರಾಗಿರುವ ನೂತನ ಸಚಿವರು, ಖಾತೆಗಳ ಹಂಚಿಕೆಯ ನಂತರವೇ ವಿಧಾನಸೌಧದ ಕಚೇರಿ ಪೂಜೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕಚೇರಿ ಹಂಚಿಕೆಯಾದರೂ ಕಚೇರಿಯಲ್ಲಿ ಕೆಲಸ ಕಾರ್ಯ ಮಾತ್ರ ಇನ್ನೂ ಆರಂಭಗೊಂಡಿಲ್ಲ.

ಜನರು ತಮ್ಮ ಕಷ್ಟ ಹೇಳಿಕೊಳ್ಳಲು, ಕೆಲಸ ಮಾಡಿಸಿಕೊಳ್ಳಲು ವಿಧಾನಸೌಧಕ್ಕೆ ಸಚಿವರನ್ನು ಹುಡುಕಿಕೊಂಡು ಬರುವುದು ಸಾಮಾನ್ಯ. ಅದೇ ರೀತಿ ನೂತನ ಸಚಿವರನ್ನೂ ಹುಡುಕಿಕೊಂಡು ಕ್ಷೇತ್ರದಿಂದ ಜನರು ಬರುತ್ತಿದ್ದಾರೆ. ಆದರೆ ನೂತನ ಸಚಿವರ ಕಚೇರಿ ಇನ್ನೂ ಆರಂಭಗೊಂಡಿಲ್ಲ, ಕಚೇರಿಯೂ ಇಲ್ಲ, ಸಚಿವರೂ ಇಲ್ಲದಂತಾಗಿದೆ.

ಸಚಿವರಾದವರು ಇಲಾಖೆ ರಹಿತರಾಗಿದ್ದರೂ ಕೂಡ ಕೆಲವೊಂದು ಜವಾಬ್ದಾರಿ ನಿರ್ವಹಿಸಬಹುದಾಗಿದೆ. ಕ್ಷೇತ್ರಗಳ ಕೆಲಸ ಮಾಡಿಕೊಡಬಹುದಾಗಿದೆ. ಆದರೆ ಅದರ ಉಸಾಬರಿಗೆ ಹೋಗದ ನೂತನ ಸಚಿವರು, ಕಚೇರಿ ತೆರೆಯುವ ಉತ್ಸಾಹ ತೋರದೆ ಖಾತೆಗಳ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:ಕೇಂದ್ರ-ರೈತರ ನಡುವಿನ 10ನೇ ಸುತ್ತಿನ ಮಾತುಕತೆಯೂ ವಿಫಲ: ಜ. 22ರಂದು ಮತ್ತೊಮ್ಮೆ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.