ETV Bharat / state

ಎಸ್​ಸಿಪಿ‌ಟಿಎಸ್​ಪಿ ವಿಶೇಷ ಅನುದಾನದಲ್ಲಿ ನೆರೆ ಪೀಡಿತರಿಗೆ ಮನೆ ನಿರ್ಮಾಣ: ಸಿಎಂ - CM Yeddyurappa

ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ‌ನೀಡಲಾಗಿದೆ. ಎಸ್​ಸಿಪಿ‌ಟಿಎಸ್​ಪಿ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ‌ ಖರ್ಚಾಗದೇ ಉಳಿದ ಹಣವನ್ನು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಸಿಎಂ
author img

By

Published : Sep 16, 2019, 4:53 PM IST

ಬೆಂಗಳೂರು: ಎಸ್​ಸಿಪಿ‌ಟಿಎಸ್​ಪಿ ವಿಶೇಷ ಅನುದಾನವನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ‌ ದಲಿತರ ಮನೆ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯ ಪರಿಷತ್ ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ

ಇಂದು ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ‌ನೀಡಿದ್ದಾರೆ. ಎಸ್​ಸಿಪಿ‌ಟಿಎಸ್​ಪಿ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ‌ ಖರ್ಚಾಗದೇ ಉಳಿದ ಹಣವನ್ನು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಯಿತು.

ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿದ ಸಿಎಂ, ಎಸ್​ಸಿಪಿ‌ಟಿಎಸ್​ಪಿ ಯೋಜನೆಗಳಡಿ ಅಂದಾಜು 1,157 ಕೋಟಿ ರೂ. ಅನುದಾನ ಉಳಿದಿದೆ. ಈ ಉಳಿಕೆ ಅನುದಾನವನ್ನು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿರುವ ದಲಿತ ಕಾಲೋನಿಗಳಲ್ಲಿನ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಶೇ.50 ರಷ್ಟು ಅನುದಾನವನ್ನು ನೆರೆ ಪೀಡಿತ ಜಿಲ್ಲೆಗಳಲ್ಲಿ ಎಸ್ಸಿ, ಎಸ್ಟಿ ವರ್ಗದವರಿಗೆ ಮನೆ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ರು.

ನೆರೆ ಪೀಡಿತ ಪ್ರದೇಶಗಳಲ್ಲಿ ಎಸ್​ಸಿಪಿ‌ಟಿಎಸ್​ಪಿ ಅನುದಾನ ಬಳಕೆಗೆ ದಲಿತ ಪರ ಸಂಘಟನೆಗಳಿಂದ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ನಾವು ಇತರೆ ಕಾರ್ಯಕ್ರಮಗಳಿಗೆ ಈ ವಿಶೇಷ ಅನುದಾನ ಬಳಸುತ್ತಿಲ್ಲ. ಬದಲಾಗಿ ನೆರೆಪೀಡಿತ ಜಿಲ್ಲೆಗಳಲ್ಲಿ ಸಂತ್ರಸ್ತರಾಗಿರುವ ಎಸ್ಸಿ, ಎಸ್ಟಿ ಸಮುದಾಯ ಅಭಿವೃದ್ಧಿಗೆ ಬಳಸುತ್ತಿದ್ದೇವೆ. ದಲಿತ ಕಾಲೋನಿಗಳ ಅಭಿವೃದ್ಧಿಗಾಗಿ ಮಾತ್ರ ಬಳಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಸರ್ಕಾರ ಸೇತುವೆ ನಿರ್ಮಾಣಕ್ಕೆ ಬಳಸಿತ್ತು: ಹಿಂದಿನ‌ ಸರ್ಕಾರದಲ್ಲಿ ಎಸ್​ಸಿಪಿ‌ಟಿಎಸ್​ಪಿ ಅನುದಾನವನ್ನು ರಸ್ತೆ, ಮೇಲ್ಸೇತುವೆ ಕಾಮಗಾರಿಗಳ ಉದ್ದೇಶಕ್ಕಾಗಿ ಬಳಸಲಾಗಿತ್ತು ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಇದೇ ವೇಳೆ ಆರೋಪಿಸಿದರು.

ಹಿಂದಿನ ಸರ್ಕಾರದಲ್ಲಿ ಎಸ್​ಸಿಪಿ‌ಟಿಎಸ್​ಪಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಆ ಹಣವನ್ನು ‌ನಾವು ಈಗ ವಾಪಸ್​ ಪಡೆದುಕೊಂಡಿದ್ದೇವೆ. ಅದನ್ನು ಈಗ ನೆರೆ ಸಂತ್ರಸ್ತ ದಲಿತರಿಗೆ ಮನೆ ನಿರ್ಮಿಸಿಕೊಡಲು ಸದ್ಬಳಕೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

Intro:Body:KN_BNG_01_SCPTSPFUND_CMBYTE_SCRIPT_7201951

ಎಸ್ ಸಿಪಿ ಟಿಎಸ್ ಪಿ ಅನುದಾನ ನೆರೆ ಪೀಡಿತ ದಲಿತ ಕಾಲೋನಿ ಅಭಿವೃದ್ಧಿಗೆ ಬಳಕೆ: ಸಿಎಂ

ಬೆಂಗಳೂರು: ಎಸ್ ಸಿಪಿ‌ಟಿಎಸ್ ಪಿ ವಿಶೇಷ ಅನುದಾನವನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ‌ ದಲಿತರ ಮನೆ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ.

ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ‌ನೀಡಲಾಗಿದೆ. ಎಸ್ ಸಿಪಿ ಟಿಎಸ್ ಪಿ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ‌ ಖರ್ಚಾಗದೇ ಉಳಿದ ಹಣವನ್ನು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ, ಎಸ್ ಸಿಪಿ ಟಿಎಸ್ ಪಿ ಯೋಜನೆಗಳಡಿ ಅಂದಾಜು 1,157 ಕೋಟಿ ರೂ. ಅನುದಾನ ಉಳಿಕೆ ಇದೆ. ಈ ಉಳಿಕೆ ಅನುದಾನ ವನ್ನು ಪ್ರವಾಹ ಪೀಡಿತ ಜಿಲ್ಲೆ ಗಳಲ್ಲಿರುವ ದಲಿತ ಕಲೋನಿಗಳಲ್ಲಿನ ಪರಿಹಾರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಶೇ.50 ರಷ್ಟು ಅನುದಾನವನ್ನು ನೆರೆ ಪೀಡಿತ ಜಿಲ್ಲೆಗಳಲ್ಲಿ ಎಸ್ಸಿ/ಎಸ್ಟಿ ವರ್ಗದವರಿಗೆ ಮನೆ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನೆರೆ ಪೀಡಿತ ಪ್ರದೇಶಗಳಲ್ಲಿ ಎಸ್ ಸಿಪಿ‌ ಟಿಎಸ್‌ ಪಿ ಅನುದಾನ ಬಳಕೆಗೆ ದಲಿತ ಪರ ಸಂಘಟನೆಗಳಿಂದ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ನಾವು ಇತರೆ ಕಾರ್ಯಕ್ರಮಗಳಿಗೆ ಈ ವಿಶೇಷ ಅನುದಾನ ಬಳಸುತ್ತಿಲ್ಲ. ಬದಲಾಗಿ ನೆರೆಪೀಡಿತ ಜಿಲ್ಲೆಗಳಲ್ಲಿ ಸಂತ್ರಸ್ತರಾಗಿರುವ ಎಸ್ಸಿ/ಎಸ್ಟಿ ಸಮುದಾಯ ಅಭಿವೃದ್ಧಿಗೆ ಬಳಸುತ್ತಿದ್ದೇವೆ. ದಲಿತ ಕಾಲೋನಿಗಳ ಅಭಿವೃದ್ಧಿಗಾಗಿ ಮಾತ್ರ ಬಳಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಸರ್ಕಾರ ಸೇತುವೆ ನಿರ್ಮಾಣಕ್ಕೆ ಬಳಸಿತ್ತು:

ಹಿಂದಿನ‌ ಸರ್ಕಾರದಲ್ಲಿ ಎಸ್ ಸಿಪಿ ಟಿಎಸ್ ಪಿ ಅನುದಾನವನ್ನು ರಸ್ತೆ, ಮೇಲ್ಸೇತುವೆ ಕಾಮಗಾರಿಗಳ ಉದ್ದೇಶಕ್ಕಾಗಿ ಬಳಸಲಾಗಿತ್ತು ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಇದೇ ವೇಳೆ ಆರೋಪಿಸಿದರು.

ಹಿಂದಿನ ಸರ್ಕಾರದಲ್ಲಿ ಎಸ್ ಸಿಪಿ ಟಿಎಸ್ ಪಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಆ ಹಣವನ್ನು ‌ನಾವು ಈಗ ವಾಪಸು ಪಡೆದುಕೊಂಡಿದ್ದೇವೆ. ಅದನ್ನು ಈಗ ನೆರೆ ಸಂತ್ರಸ್ತ ದಲಿತರಿಗೆ ಮನೆ ನಿರ್ಮಾಣ ಮಾಡಲು ಸದ್ಬಳಕೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಸರ್ಕಾರದ ತಪ್ಪನ್ನು ಸರಿಪಡಿಸುತ್ತಿದ್ದೇವೆ. ಈ ಸಂಬಂಧ ತನಿಖೆ ನಡೆಸುವ ಅಗತ್ಯ ಇಲ್ಲ‌. ನಾವು ಬೇರೆ ಉದ್ದೇಶಕ್ಕೆ ಬಳಸಲಾದ ಹಣವನ್ನು ವಾಪಸು ಪಡೆಯುತ್ತಿದ್ದೇವೆ ಎಂದು ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.