ETV Bharat / state

ರಂಜಾನ್​ ಆಚರಣೆ: ಕೊರೊನಾ ನಿಯಮ ಪಾಲನೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ - ರಮ್ಜಾನ್ ಆಚರಣೆ ಸಂದರ್ಭ ಕೊರೊನಾ ನಿಯಮ

ರಂಜಾನ್​​​ ಹಬ್ಬದ ಸಂದರ್ಭದಲ್ಲಿ ಕೊವಿಡ್ ನಿಮಯಗಳ ಪಾಲನೆಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕಂಟೇನ್ಮೆಂಟ್ ವಲಯದಲ್ಲಿರುವ ಮಸೀದಿಗಳನ್ನು ತೆರೆಯಬಾರದು ಎಂದು ತಿಳಿಸಿದೆ.

new-guidelines-for-ramzan-celebration-during-pandemic

author img

By

Published : Apr 14, 2021, 10:44 PM IST

ಬೆಂಗಳೂರು: ರಮ್ಜಾನ್ ಹಬ್ಬದ ಸಂದರ್ಭದಲ್ಲಿ ಮುಸಲ್ಮಾನ್ ಸಮುದಾಯದವರು ಕೊವಿಡ್ ನಿಮಯಗಳ ಪಾಲನೆಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕಂಟೇನ್ಮೆಂಟ್​ ವಲಯದಲ್ಲಿರುವ ಮಸೀದಿಗಳನ್ನು ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ. ಕಂಟೇನ್ಮೆಂಟ್​ ವಲಯದ ಹೊರಗಿನ ಮಸೀದಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷದ ಒಳಗಿನ ವಯೋಮಾನದ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ನಿಯಮಾವಳಿಯಲ್ಲಿ ತಿಳಿಸಲಾಗಿದೆ.

ಹೀಗಿವೆ ನಿಯಮ

1. ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು, ಶುಭಾಶಯ ವಿನಿಮಯ ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಲಾಗಿದೆ.

2. ಪ್ರತಿಯೊಬ್ಬರ ನಡುವೆ ಕನಿಷ್ಠ 2 ಮೀಟರ್ ಅಂತರವಿರಬೇಕು. ಪ್ರಾರ್ಥನೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿರ್ದಿಷ್ಟ ಗುರುತು ಮಾಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

3. ತರಬೇತಿ ಪಡೆದವರಿಂದ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಬೇಕು. ಕೆಮ್ಮು, ಜ್ವರ, ಕಫ, ಗಂಟಲು ನೋವು ಇರುವ ವ್ಯಕ್ತಿಗಳನ್ನು ಮಸೀದಿ ಒಳಗೆ ಪ್ರವೇಶಿಸಲು ಅವಕಾಶ ನೀಡಬಾರದು.

4. ಹ್ಯಾಂಡ್ ಸ್ಯಾನಿಟೈಸರ್ ಬಳಸುತ್ತಿರಬೇಕು. ಮಸೀದಿಯ ಹೊರಗೆ ಅಥವಾ ಒಳಗೆ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳಬೇಕು.

5 ಉಪವಾಸವನ್ನು ಮನೆಯಲ್ಲಿಯೇ ಮುಕ್ತಾಯಗೊಳಿಸಿ ಮಸೀದಿಗೆ ನಮಾಜ್ ಮಾಡಲು ಮಾತ್ರ ಬರಬೇಕು. ಮಸೀದಿಗೆ ಯಾವುದೇ ಆಹಾರ ತರಬಾರದು.

6. ಆರೋಗ್ಯದ ಸಮಸ್ಯೆ ಎದುರಿಸುವ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯಲು ಸೂಚಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಆಡಳಿತ ಮಂಡಳಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.