ETV Bharat / state

ಕಂಟೇನ್ಮೆಂಟ್ ವಲಯದಲ್ಲಿ ಕೇಟರಿಂಗ್ ಸ್ಥಗಿತ.. ಹೋಟೆಲ್,ರೆಸ್ಟೋರೆಂಟ್​​ಗಳಿಗೆ ಹೊಸ ಮಾರ್ಗಸೂಚಿ.. - ಹೊಸ ಮಾರ್ಗಸೂಚಿ ಪ್ರಕಟ

ಕೋವಿಡ್ 2ನೇ ಅಲೆ ಭೀತಿ ಹಿನ್ನೆಲೆ ಕಂಟೇನ್ಮೆಂಟ್ ವಲಯಗಳಿಂದ ಹೊರಗಿರುವ ಕೇಟರಿಂಗ್ ಸೇವೆಗಳು ಹಾಗೂ ಆಹಾರ ಪದಾರ್ಥಗಳ ನಿರ್ವಹಣೆ ಮಾಡುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ..

New Guidelines for Hotel and Restaurant
ಹೋಟೆಲ್,ರೆಸ್ಟೋರೆಂಟ್​​ಗಳಿಗೆ ಹೊಸ ಮಾರ್ಗಸೂಚಿ ಪ್ರಕಟ
author img

By

Published : Feb 20, 2021, 8:55 PM IST

ಬೆಂಗಳೂರು : ಕರ್ನಾಟಕದಲ್ಲಿ ಪ್ರಸ್ತುತ ಕೋವಿಡ್-19 ಹಾಗೂ 2ನೇ ಅಲೆ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ ಎಲ್ಲಾ ಚಟುವಟಿಕೆಗಳು ಪುನಾರಂಭವಾಗಿವೆ. ಈ ಹಿನ್ನೆಲೆ ಮದುವೆ, ಜನ್ಮದಿನ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಮಾವೇಶಗಳಲ್ಲಿ ಮತ್ತು ಹೋಟೆಲ್, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು, ಡಾಬಾಗಳಲ್ಲಿ ಆಹಾರ ಪದಾರ್ಥಗಳ ತಯಾರಕರು (Catering services) ಹಾಗೂ ಆಹಾರ ಪದಾರ್ಥಗಳ ನಿರ್ವಹಣೆ ಮಾಡುವವರು (food handlers) ಕೋವಿಡ್- 19 ಹರಡದಂತೆ ತಡೆಯಲು ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿ ಹೊರಡಿಸಲಾಗಿದೆ.

ಕಂಟೇನ್ಮೆಂಟ್ ವಲಯಗಳಲ್ಲಿರುವ ಕೇಟರಿಂಗ್ ಸೇವೆಗಳು ಹಾಗೂ ಆಹಾರ ಪದಾರ್ಥಗಳ ನಿರ್ವಹಣೆ ಮಾಡುವವರು ತಮ್ಮ ಸೇವೆಗಳನ್ನು ಸ್ಥಗಿತಗೊಳಿಸುವುದು.

ಕಂಟೇನ್ಮೆಂಟ್ ವಲಯಗಳಿಂದ ಹೊರಗಿರುವ ಕೇಟರಿಂಗ್ ಸೇವೆಗಳು ಹಾಗೂ ಆಹಾರ ಪದಾರ್ಥಗಳ ನಿರ್ವಹಣೆ ಮಾಡುವವರು ತಮ್ಮ ಸೇವೆಗಳನ್ನು ಮುಂದುವರೆಸಬಹುದಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.

ಮಾರ್ಗಸೂಚಿಗಳು:

  • 6 ಅಡಿಗಳ ದೈಹಿಕ ಅಂತರವನ್ನು ಕಾಪಾಡುವುದು.
  • ಮಾಸ್ಕ್​ ಅಥವಾ ಫೇಸ್ ಕವರ್‌ಗಳನ್ನು ಧರಿಸುವುದು ಕಡ್ಡಾಯ.
  • ಕೈಗಳು ಸ್ವಚ್ಛವಾಗಿ ಕಂಡರೂ ಸಹ, ಸೋಪು ಹಾಗೂ ನೀರಿನಿಂದ ಪದೇಪದೆ (ಕನಿಷ್ಠ 40-60 ಸೆಕೆಂಡ್‌ಗಳು) ಸ್ವಚ್ಛಗೊಳಿಸಬೇಕು. ಅಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು.
  • Respiratory etiquettes ಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂದರೆ, ಕೆಮ್ಮುವಾಗ, ಸೀನುವಾಗ ಬಾಯಿ ಹಾಗೂ ಮೂಗನ್ನು ಕಡ್ಡಾಯವಾಗಿ ಕರವಸ್ತ್ರ/ಟಿಶ್ಯೂ ಪೇಪರ್/ಮಡಚಿದ ಮೊಣಕ್ಕೆ (flexed elbow)ಯಿಂದ ಮುಚ್ಚಬೇಕು ಹಾಗೂ ನಂತರ ಟಿಶ್ಯೂವನ್ನ ಸಮರ್ಪಕವಾಗಿ ವಿಲೇವಾರಿ ಮಾಡಬೇಕು.
  • ಆಹಾರ ಪದಾರ್ಥಗಳ ತಯಾರಕರು ತಮ್ಮ ಆರೋಗ್ಯ ಸ್ಥಿತಿಯ ಮೇಲೆ ಸ್ವಯಂ ನಿಗಾವಣೆ ಮಾಡಬೇಕು ಹಾಗೂ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಬೇಕು.
  • ಪದೇಪದೆ ಉಗುಳುವುದು ಹಾಗೂ ಮೂಗನ್ನು ಸ್ವಚ್ಛಗೊಳಿಸುವುದನ್ನು (nose blowing) ಕಡ್ಡಾಯವಾಗಿ ನಿಷೇಧಿಸಬೇಕು.
  • ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವವರು ಹಾಗೂ ನಿರ್ವಹಿಸುವವರು ಒಂದು ಬಾರಿ ಬಳಸಿ ಬಿಸಾಡಬಹುದಾದ ಗ್ಲೌಸ್‌‌ಗಳನ್ನು ಕಡ್ಡಾಯವಾಗಿ ಧರಿಸಬೇಕು.
  • ಅಡುಗೆ ತಯಾರಕರು ಮತ್ತು ವಿತರಕರು ಕಡ್ಡಾಯವಾಗಿ ಗ್ಲೌಸ್ ಧರಿಸಬೇಕು
  • ಪ್ರತೆ 15 ದಿನಕ್ಕೊಮ್ಮೆ ಎಲ್ಲಾ ಹೋಟೆಲ್ ಮತ್ತು ಕೇಟರಿಂಗ್ ಸಿಬ್ಬಂದಿಗೆ ಆರ್​ಟಿಪಿಸಿಆರ್ ಕಡ್ಡಾಯ.
  • ನೆಗೆಟಿವ್ ರಿಪೋರ್ಟ್ ಇದ್ದವರಿಗಷ್ಟೇ ಕೆಲಸಕ್ಕೆ ಹಾಜರಾಗಲು ಅನುಮತಿ.
  • ಹೋಟೆಲ್ ಒಳಗಿರುವ ಎಲ್ಲಾ ಸಿಬ್ಬಂದಿ ಸದಾ ಗ್ಲೌಸ್, ಮಾಸ್ಕ್ ಅಥವಾ ಫೇಸ್ ಶೀಲ್ಡ್ ಧರಿಸಿರಬೇಕು.
  • ಮಾಸ್ಕ್ ಧರಿಸದ ಗ್ರಾಹಕರಿಗೆ ಹೋಟೆಲ್‌ನೊಳಗೆ ಬರಲು ಅನುಮತಿ ಇಲ್ಲ.
  • ದೈಹಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುವಂತೆ ಹೆಚ್ಚಿನ ಸಿಬ್ಬಂದಿ ಬಳಕೆಗೆ ಸೂಚನೆ.
  • ಸಿಬ್ಬಂದಿ ಹಿರಿಯರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು ಇದ್ದರೆ ಅವರು ನೇರವಾಗಿ ಸಾರ್ವಜನಿಕರ ಸಂಪರ್ಕಕ್ಕೆ ಬಾರದಂತೆ ಕೆಲಸ ನಿಯೋಜನೆ.
  • ಸಾಕಷ್ಟು ಅಂತರ ಇರುವಂತೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು.
  • ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇರಿಸಬೇಕು.
  • ಪಾರ್ಕಿಂಗ್ ಸ್ಥಳದಲ್ಲೂ ಸಿಬ್ಬಂದಿ ಮಾಸ್ಕ್ ಧರಿಸಬೇಕು, ಜನರು ಅಗತ್ಯ ದೈಹಿಕ ಅಂತರ ಕಾಯುವಂತೆ ನೋಡಿಕೊಳ್ಳಬೇಕು.
  • ಅಡುಗೆಮನೆ, ಶೌಚಾಲಯ ಮುಂತಾದ ಸ್ಥಳಗಳನ್ನು ಆಗಾಗ ರಾಸಾಯನಿಕ ಬಳಸಿ ಸ್ವಚ್ಛಗೊಳಿಸಬೇಕು.
  • ಹೋಟೆಲಿನೊಳಗೆ ಬರುವ ಎಲ್ಲಾ ಸಾಮಗ್ರಿಗಳ ಸ್ವಚ್ಛತೆಗೆ ಆದ್ಯತೆ ಕೊಡಬೇಕು.
  • ಬಳಸಿದ ಮಾಸ್ಕ್, ಗ್ಲೌಸ್ ಸರಿಯಾಗಿ ವಿಲೇವಾರಿ ಆಗುವಂತೆ ನೋಡಿಕೊಳ್ಳಬೇಕು.

ಓದಿ: ಐದಕ್ಕಿಂತ ಹೆಚ್ಚು ಕೊರೊನಾ ಪತ್ತೆಯಾದರೆ ಕಂಟೈನ್ಮೆಂಟ್ ಜೋನ್: ಆರೋಗ್ಯ ಇಲಾಖೆ ಸುತ್ತೋಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.