ETV Bharat / state

ದೊಡ್ಡ ಜಮೀನಿಗೆ ಬೀಜ ಬಿತ್ತನೆ, ಔಷಧ ಸಿಂಪಡಣೆ ಹಾಗೂ ಬೆಳೆ ಸಮೀಕ್ಷೆಗೆ ಒಂದೇ ಡ್ರೋಣ್​ನಲ್ಲಿ ಪರಿಹಾರ - ದೊಡ್ಡ ಕಾರ್ಪೋರೇಟ್ ಕಂಪನಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆವಿಷ್ಕರಿಸಿದ ಡ್ರೋಣ್ ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿದೆ. ಇದರ ಮೂಲಕ ಬೀಜ ಬಿತ್ತನೆ, ಔಷಧ ಸಿಂಪಡಣೆ ಹಾಗೂ ಬೆಳೆ ಸಮೀಕ್ಷೆ ಸೇರಿದಂತೆ ಹಲವು ಕಾರ್ಯವನ್ನು ಮಾಡಬಹುದು.

ಡ್ರೋಣ್​
ಡ್ರೋಣ್​
author img

By

Published : Nov 4, 2022, 9:03 PM IST

ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಡ್ರೋಣ್ ಬಳಕೆ ಹೆಚ್ಚಾಗುತ್ತಿದೆ. ಕೃಷಿ ನಿರ್ವಹಣೆಯಲ್ಲಿ ಇದರ ಪಾತ್ರ ಪ್ರಮುಖವಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆವಿಷ್ಕರಿಸಿದ ಡ್ರೋಣ್ ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿದೆ.

ಡ್ರೋಣ್ ಮೂಲಕವೇ ಕೃಷಿ ಚಟುವಟಿಕೆ ನಡೆಸುವ ಕಾರ್ಯವನ್ನು ಸಾಧಿಸುವಲ್ಲಿ ಕೃಷಿ ಮಾರುಕಟ್ಟೆ ವಿಭಾಗದಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿ ಹೊರ ಬಂದಿರುವ ಹವ್ಯಾಸ್ ಕುಡುಪಜೆ ಹಾಗೂ ನಿತಿನ್ ಸಿಂಗ್ ಒಟ್ಟಾಗಿ ಬೀಗಲ್ ಅಗ್ರಿಟೆಕ್ ಹೆಸರಿನ ಸಂಸ್ಥೆ ಸ್ಥಾಪಿಸಿದ್ದಾರೆ. ಕೃಷಿಯಲ್ಲಿ ಡ್ರೋಣ್ ಸೇವೆ ನೀಡುತ್ತಿದ್ದಾರೆ. ಒಂದು ಸಾದನ ಬಳಸಿ ಇದುವರೆಗೂ ಔಷಧವನ್ನು ಬೆಳೆಗಳಿಗೆ ಸಿಂಪಡಿಸುವ ಕಾರ್ಯ ಮಾಡಬಹುದಾಗಿತ್ತು. ಆದರೆ, ಇದರ ಮೂಲಕ ನಾಲ್ಕು ವಿಧದ ಕೆಲಸ ಮಾಡಬಹುದು.

ಬೀಗಲ್ ಅಗ್ರಿಟೆಕ್ ಸಹ ಸಂಸ್ಥಾಪಕ ಹಾಗೂ ಸಿಇಒ ಹವ್ಯಾಸ್ ಕುಡುಪಜೆ ಅವರು ಮಾತನಾಡಿದರು

ಈ ಡ್ರೋಣ್ ಮೂಲಕ ಬೀಜ ಬಿತ್ತನೆ, ಔಷಧ ಸಿಂಪಡಣೆ ಹಾಗೂ ಬೆಳೆ ಸಮೀಕ್ಷೆ ಸೇರಿದಂತೆ ಹಲವು ಕಾರ್ಯವನ್ನು ಮಾಡಬಹುದು. ಕೆಲವೊಂದಿಷ್ಟು ನಿರ್ಬಂಧ ಇದರಲ್ಲಿ ಇದ್ದರೂ, ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ದೊಡ್ಡ ಜಮೀನುದಾರರಿಗೆ ಇದು ಅತ್ಯುಪಯುಕ್ತ. ಈ ಡ್ರೋಣ್ ಅನ್ನು 15 ನಿಮಿಷ ಚಾರ್ಜ್ ಮಾಡಿದರೆ 1.5 ಕಿ.ಮೀ ಪ್ರದೇಶದಲ್ಲಿ ಬಿತ್ತನೆಗೆ ಬಳಸಬಹುದಾಗಿದೆ.

ಹೊಲದಲ್ಲಿ ಬೆಳೆದಿರುವ ಬೆಳೆಯ ಸ್ಥಿತಿಯನ್ನು ಚಿತ್ರರೂಪದಲ್ಲಿ ಸಂಗ್ರಹಿಸಿ ಕೊಡುವ ಕಾರ್ಯವನ್ನು ಇದು ಮಾಡುತ್ತದೆ. ಗಿಡಗಳ ಸ್ಕ್ಯಾನಿಂಗ್ ಮಾಡುತ್ತದೆ. ಇದರಲ್ಲಿರುವ ಕ್ಯಾಮರಾ ಚಿತ್ರಗಳನ್ನು ಸಂಗ್ರಹಿಸುತ್ತದೆ. ಎಲ್ಲಿ ಹುಳುಗಳ ಬಾಧೆ ಆಗಿದೆ, ಎಲ್ಲಿ ಬೆಳೆಗೆ ನೀರಿನ ಅಂಶ ಕಡಿಮೆ ಆಗಿದೆ. ಗಿಡದ ಆರೋಗ್ಯ ಹೇಗಿದೆ ಎಂಬುದನ್ನು ತಿಳಿಸುತ್ತದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಗಿಡ: ಡ್ರೋಣ್ ಕ್ಲಿಕ್ಕಿಸಿಕೊಟ್ಟ ಚಿತ್ರ ಆಧರಿಸಿ ಬೀಗಲ್ ಅಗ್ರಿಟೆಕ್ ನಲ್ಲಿ ಸಂಶೋಧನೆ ನಡೆಸಲಾಗುತ್ತದೆ. ತಪಾಸಣೆ ಬಳಿಕ ಎಲ್ಲೆಲ್ಲಿ ಔಷಧಿ ಸಿಂಪಡಣೆಯ ಅಗತ್ಯವಿದೆಯೋ ಅಲ್ಲಿಗೆ ಮಾತ್ರ ಬಳಸುವ ಕಾರ್ಯ ಮಾಡಲಾಗುತ್ತದೆ. ಔಷಧ ಸಿಂಪಡಣೆ ಬೇಡ ಅಂದರೆ ಬೇರೆ ಟ್ಯಾಂಕ್ ಅಳವಡಿಸಿಕೊಳ್ಳಬಹುದು. ಗಿಡಗಳನ್ನು ಡ್ರೋಣ್ ಮೂಲಕ ಗಿಡಗಳನ್ನು ಖಾಲಿ ಭೂಮಿಯ ಮೇಲೆ ಬೀಳಿಸುವ ಕಾರ್ಯ ಮಾಡಬಹುದು. ಇದು ಮಳೆ ಬಂದಾಗ ಬೇರು ಬಿಟ್ಟು ಚಿಗುರಿ ಮರವಾಗುತ್ತದೆ. ಕಾಡು ಪುನರುಜ್ಜೀವನ ಮಾಡಬಹುದು. ಮಾನವ ಸಂಪನ್ಮೂಲ ಬಳಸಿ ಗಿಡ ನೆಡಲು ಸಾಕಷ್ಟು ಕಾಲಾವಕಾಶ ಹಿಡಿಯುತ್ತದೆ. ಇದರಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಗಿಡ ನೆಡಬಹುದು. ಇದನ್ನು ಸೀಡ್ ಬಾಂಬಿಂಗ್ ಎಂದು ಹೇಳಲಾಗುತ್ತದೆ.

ಬೀಗಲ್ ಅಗ್ರಿಟೆಕ್ ಸಹ ಸಂಸ್ಥಾಪಕ ಹಾಗೂ ಸಿಇಒ ಹವ್ಯಾಸ್ ಕುಡುಪಜೆ ಈ ಕುರಿತು ಮಾಹಿತಿ ನೀಡಿದ್ದು, ಡ್ರೋಣ್ ನ್ನು ಸೀಡ್ ಬ್ರಾಡ್ಕ್ಯಾಸ್ಟಿಂಗ್ ಸಹ ಮಾಡಬಹುದಾಗಿದೆ. ಇದನ್ನು ಸದ್ಯ ಖಾಸಗಿಯಾಗಿ ರೈತರಿಗೆ ನೀಡುವ ಕಾರ್ಯ ಮಾಡುತ್ತಿಲ್ಲ. ಏಕೆಂದರೆ ರಾಗಿ ಬೀಜಗಳನ್ನು ಜಮೀನಿನಲ್ಲಿ ಬೀರುವ ಕಾರ್ಯಕ್ಕೆ ಇದು ಬಳಕೆ ಆಗುತ್ತದೆ.

ಕಾರ್ಪೋರೇಟ್ ಕಂಪನಿಗಳಿಗೆ ಸೇವೆ : ತಂತ್ರಜ್ಞಾನ ದುಬಾರಿಯಾಗಿದೆ. 7.5 ಲಕ್ಷ ರೂ. ವೆಚ್ಚವಾಗುತ್ತದೆ. ಇದರಿಂದ ರೈತರ ಬದಲು ನಾವು ಇದನ್ನು ರೈತ ಸಂಘಟನೆಗಳಿಗೆ ನೀಡುತ್ತೇವೆ. ಕನಿಷ್ಠ 50 ಎಕರೆ ಭೂಮಿ ಹೊಂದಿದ್ದವರಿಗೆ ಮಾತ್ರ ನಾವು ಬಾಡಿಗೆ ರೂಪದಲ್ಲಿ ನೀಡುತ್ತೇವೆ. ಒಂದು ಎಕರೆಗೆ 650 ರೂ. ಬಾಡಿಗೆ ಪಡೆಯುತ್ತೇವೆ. ಸದ್ಯ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಜನವರಿ ತಿಂಗಳಲ್ಲಿ ನಮ್ಮ ಸೇವೆ ಆರಂಭಿಸಿದ್ದೇವೆ. ಐಟಿಸಿ ಕಂಪನಿಯ ತಂಬಾಕು ತೋಟಕ್ಕೆ ಸದ್ಯ ಬಳಸಲಾಗಿದೆ. ಇದರ ಯಶಸ್ಸು ಉತ್ತಮವಾಗಿದೆ. ಸದ್ಯ ಇದನ್ನು ಮಾರಾಟ ಮಾಡುತ್ತಿಲ್ಲ. ಬದಲಾಗಿ ಇದರ ಸೇವೆಯನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಓದಿ: ಮನೆಯಲ್ಲೇ ಕುಳಿತು ತೋಟದ ಹನಿ ನೀರಾವರಿ ನಿಯಂತ್ರಿಸುವ ನೂತನ ತಂತ್ರಜ್ಞಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.