ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಲೆ ನಿರಂತರವಾಗಿದ್ದು, ಸಾವಿನ ಸಂಖ್ಯೆ ಮಿತಿಮೀರುತ್ತಿದೆ. ಪರಿಣಾಮ ಚಿತಾಗಾರಗಳಲ್ಲಿ ಶವ ಸುಡಲು ಸಾಲು ಸಾಲಾಗಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ, ನಗರದ ಗಿಡ್ಡೆನಹಳ್ಳಿಯಲ್ಲಿ ಇದೀಗ ಮತ್ತೊಂದು ತಾತ್ಕಾಲಿಕ ಚಿತಾಗಾರ ಸಿದ್ದವಾಗಿದೆ.
ಈ ಮೊದಲು ನಗರದ ಹೊರವಲಯದ ತಾವರೆಕೆರೆ-ಕೆಂಗೇರಿ ಮುಖ್ಯ ರಸ್ತೆಯ ಚೆನ್ನೇನಹಳ್ಳಿ ಗ್ರಾಮದಲ್ಲಿ, ಕುರುಬರಹಳ್ಳಿಯ 4 ಎಕರೆಯ ಸ್ಥಳದಲ್ಲಿ ಚಿತಾಗಾರ ಸಿದ್ಧ ಪಡಿಸಲಾಗಿತ್ತು. ಇದೀಗ ಮತ್ತೊಂದು ಚಿತಾಗಾರ ಸಿದ್ಧಪಡಿಸಿದ್ದು, ಏಕಕಾಲದಲ್ಲಿ ಸುಮಾರು ಇಪ್ಪತ್ತು ಮೃತದೇಹ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗಿದೆ.
ನಗರದ ಚಿತಾಗಾರಗಳಲ್ಲಿ ಗಂಟೆ ಗಟ್ಟಲೆ ಮೃತದೇಹಗಳನ್ನಿಟ್ಟುಕೊಂಡು ಸಾಲು ಸಾಲಾಗಿ ಆ್ಯಂಬುಲೆನ್ಸ್‌ಗಳು ನಿಲ್ಲುತ್ತಿದ್ದವು. ಈ ಸಮಸ್ಯೆ ಬಗೆಹರಿಸಲು ನಗರದ ಹೊರವಲಯದಲ್ಲಿ ಚಿತಾಗಾರಗಳನ್ನ ನಿರ್ಮಿಸಲಾಗಿದೆ. ಈ ಸಂಬಂಧ ಮಾವಳ್ಳಿಪುರಕ್ಕೆ ಭೇಟಿ ನೀಡಿದ ಕಂದಾಯ ಸಚಿವ ಆರ್ ಅಶೋಕ್, ತಾತ್ಕಾಲಿಕವಾಗಿ ನಿರ್ಮಾಣವಾದ ಸ್ಮಶಾನಕ್ಕಾಗಿ ಗುರುತಿಸಿರುವ ಜಾಗದ ಪರಿಶೀಲನೆ ನಡೆಸಿದ್ದಾರೆ.
ಓದಿ: ಕಮಿಷನ್ ಹೊಡೆಯುವುದು ಸಾಕು, ಖಾಸಗಿ ಆಸ್ಪತ್ರೆಗಳ ಬಿಲ್ ಕ್ಲಿಯರ್ ಮಾಡಿ: ಡಿಕೆಶಿ