ETV Bharat / state

ಅಂತರ್‌ರಾಜ್ಯ ವಾಹನ ನೋಂದಣಿ ಕಿರಿಕಿರಿಗೆ ಕಡಿವಾಣ​ ಹಾಕಲಿದೆ 'ಬಿಹೆಚ್ ಸರಣಿ' - ನೂತನ ವಾಹನ ನೋಂದಣಿ ವಿಧಾನ

ಯಾವುದೇ ರೀತಿ ತೊಂದರೆ ಇಲ್ಲದೆ ವಾಹನಗಳ ವರ್ಗಾವಣೆಯನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ಬಿಹೆಚ್ ರಿಜಿಸ್ಟ್ರೇಷನ್ ಎಂಬ ಹೊಸ ನೋಂದಣಿ ಪದ್ಧತಿ ಪರಿಚಯಿಸಿದೆ. ಇದರಡಿ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಹೋದಾಗ ಅಲ್ಲಿ ಮರು ನೋಂದಣಿ ಮಾಡುವ ಅಗತ್ಯವಿರುವುದಿಲ್ಲ.

new BH series registration plates for vehicles
ರಾಜ್ಯ ಸಾರಿಗೆ ಆಯುಕ್ತ ಶಿವಕುಮಾರ್ ಮಾಹಿತಿ
author img

By

Published : Sep 1, 2021, 9:43 PM IST

ಬೆಂಗಳೂರು: ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಹನ ತೆಗೆದುಕೊಂಡು ಹೋದರೆ, ಆ ರಾಜ್ಯದಲ್ಲಿ ಮರು ನೋಂದಣಿ ಮಾಡಬೇಕಿತ್ತು. ಇದು ರಾಜ್ಯದಿಂದ ರಾಜ್ಯಕ್ಕೆ ಓಡಾಡೋರಿಗೆ ದೊಡ್ಡ ತಲೆ ನೋವಾಗಿತ್ತು. ಯಾವುದೇ ಒಂದು ವಾಹನವೂ ಕರ್ನಾಟಕದಲ್ಲಿ ನೋಂದಣಿಯಾಗಿ ಪಕ್ಕದ ರಾಜ್ಯಕ್ಕೆ ತೆಗೆದುಕೊಂಡು ಹೋಗಿ 12 ತಿಂಗಳು ಕಾಲ ಅಲ್ಲೇ ಇಟ್ಟಕೊಂಡರೆ, ಆ ರಾಜ್ಯದಲ್ಲಿ ಮರು ನೋಂದಣಿ ಮಾಡಿಸಬೇಕಿತ್ತು. ಇದನ್ನ ತಪ್ಪಿಸಲು ಇದೀಗ ಕೇಂದ್ರ ಸರ್ಕಾರ ಬಿಹೆಚ್ ಸಿರೀಸ್ ಆರಂಭಿಸಿದೆ.

ಬೇರೆ ದೇಶದಲ್ಲಿ ಇರುವಂತೆ ವಾಹನ ನೋಂದಣಿಗೆ ಒಂದೇ ನಂಬರ್ ನಮ್ಮ ದೇಶದಲ್ಲಿ ಇಲ್ಲ. ಬದಲಾಗಿ, ಆಯಾ ರಾಜ್ಯಗಳು ಕೆಎ ಕರ್ನಾಟಕ, ಎಂಹೆಚ್ ಮಹಾರಾಷ್ಟ್ರ ಹೀಗೆ ಎಪಿ, ಡಿಎಲ್, ಟಿಎನ್ ಅಂತ ಒಂದೊಂದು ರಾಜ್ಯದ ವಾಹನಕ್ಕೆ ಒಂದೊಂದು ನೋಂದಣಿ ಸಂಖ್ಯೆ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೆಪ್ಟೆಂಬರ್ 15 ರಿಂದ ಬಿಹೆಚ್ ರಿಜಿಸ್ಟ್ರೇಷನ್ ನಂಬರ್ ಚಾಲ್ತಿಗೆ ತರ್ತಿದೆ.

ರಾಜ್ಯ ಸಾರಿಗೆ ಆಯುಕ್ತ ಶಿವಕುಮಾರ್ ಮಾಹಿತಿ
ಏನಿದು ಬಿಹೆಚ್ ರಿಜಿಸ್ಟ್ರೇಷನ್?:

ಖಾಸಗಿ ವಾಹನ ಹೊಂದಿದ್ದು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸಿದರೆ ವಾಹನ ಮರು ನೋಂದಣಿ ಬಹಳ ಕಷ್ಟವಾಗ್ತಿತ್ತು. ಹೊರ ರಾಜ್ಯದ ನೋಂದಣಿಯಾಗಿರುವ ವಾಹನ ಬಂದರೆ ಸಾಕು ಪೊಲೀಸರು ಕೈ ಅಡ್ಡಹಾಕಿ ದಾಖಲೆಗಳನ್ನು ಕೇಳುತ್ತಿದ್ದರು. ಪ್ರಸುತ್ತ ಇರುವ ನಿಯಮಗಳು ಪ್ರಕಾರ, ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನ ಮತ್ತೊಂದು ರಾಜ್ಯದಲ್ಲಿ ಬಳಸುವುದಿದ್ದರೆ 12 ತಿಂಗಳೊಳಗೆ ಆ ರಾಜ್ಯದಲ್ಲಿ ತೆರಿಗೆ ಪಾವತಿಸಬೇಕು. ಅಲ್ಲದೇ, ಸ್ಥಳಾಂತರವಾದಾಗ ಹೊಸದಾಗಿ ರಸ್ತೆ ತೆರಿಗೆ, ಮರು ನೋಂದಣಿ ಆಗಬೇಕಿತ್ತು‌. ನೋಂದಣಿಯಾಗಿದ್ದ ರಾಜ್ಯದಿಂದ ಎನ್ಒಸಿ ಪಡೆದಿರಬೇಕಿತ್ತು. ಇದೆಲ್ಲ ವಾಹನ ಮಾಲೀಕರಿಗೆ ತಲೆಬಿಸಿಯಾಗಿತ್ತು. ಇದೆಲ್ಲವನ್ನ ಬಿಹೆಚ್ ರಿಜಿಸ್ಟ್ರೇಷನ್ ತಪ್ಪಿಸಲಿದೆ.‌

ಬಿಹೆಚ್ ಅಂದರೆ ಭಾರತ್ ಸಿರೀಸ್:

ಈ ನೊಂದಣಿ ಸಂಖ್ಯೆ ಹೊಂದಿರುವ ವಾಹನಗಳು ದೇಶದೊಳಗೆ ಯಾವುದೇ ರಾಜ್ಯಕ್ಕೆ ಹೋದರೂ ಮರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.ಇನ್ನು ಬಿಹಚ್ ಸಿರೀಸ್ ಅನ್ನ ಎಲ್ಲರಿಗೂ ಕೊಡಲ್ಲ, ರಾಜ್ಯ- ಕೇಂದ್ರದ ಸರ್ಕಾರಿ ನೌಕರರಿಗೆ, ಸೇನಾಪಡೆ, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಿಬ್ಬಂದಿ, ಹಾಗೂ ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ನೌಕರರಿಗೆ ಮಾತ್ರ ಈ ಸಿರೀಸ್ ನಡಿ ವಾಹನ ನೋಂದಣಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತೆ. ಇದು ಐಚ್ಛಿಕವಾಗಿದ್ದು ಇಷ್ಟವಿದ್ದರಷ್ಟೇ ಈ ಸಿರೀಸ್ ತೆಗೆದುಕೊಳ್ಳಬಹುದು ಅಂತ ರಾಜ್ಯ ಸಾರಿಗೆ ಆಯುಕ್ತ ಶಿವಕುಮಾರ್ ತಿಳಿಸಿದರು.

ಬಿಹೆಚ್​ಗೆ ತೆರಿಗೆ ಹೆಚ್ಚು ಕಟ್ಟಬೇಕೆ:

ಬಿಹೆಚ್ ಸಿರೀಸ್​ಗೆ ತೆರಿಗೆ ಹೆಚ್ಚು ಕಟ್ಟಬೇಕಾ ಅಂತ ಪ್ರಶ್ನೆ ಮೂಡುವುದು ಸಹಜ. ಈ ಕುರಿತು ಆಯುಕ್ತ ಶಿವಕುಮಾರ್ ತಿಳಿಸಿದ್ದು, ಒಂದೊಂದು ರಾಜ್ಯದಲ್ಲಿ ಒಂದೊಂದು ದರ ಇದೆ. ಬಿಹೆಚ್ ಸಿರೀಸ್​ನಲ್ಲಿ ಟ್ಯಾಕ್ಸ್ ಕೂಡ ಸಾಕಷ್ಟು ಕಡಿಮೆ ಇರಲಿದೆ. ಉದಾಹರಣೆಗೆ, ಕರ್ನಾಟಕದಲ್ಲಿ 20 ಲಕ್ಷಕ್ಕೂ ಮೀರಿದ ವಾಹನಕ್ಕೆ ಹೆಚ್ಚು ತೆರಿಗೆ ಪಾವತಿಸಬೇಕಿತ್ತು. ಆದರೆ ಈ ಹೊಸ ನಿಯಮದಿಂದ ಶೇ.12 ರಷ್ಟು ತೆರಿಗೆ ಪಾವತಿಸಬೇಕಾಗುತ್ತೆ.‌ ವಿದ್ಯುತ್ ಚಾಲಿತ ವಾಹನಕ್ಕೆ ಶೇ. 2 ರಷ್ಡು ಕಡಿಮೆ ತೆರಿಗೆ ಹಾಗೂ ಡೀಸೆಲ್ ವಾಹನಕ್ಕೆ ಶೇ. 2 ರಷ್ಟು ಹೆಚ್ಚು ತೆರಿಗೆ ಪಾವತಿಸಬೇಕು. ಇನ್ನು ಈ ಹೊಸ ರೂಲ್ಸ್​ನಿಂದ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬೀಳಲಿದೆ ಅಂತಾರೆ.

ಸಾಧಕ-ಬಾಧಕಗಳೇನು?

ಬಿಹೆಚ್ ಸಿರೀಸ್ ಕುರಿತಾದ ಸಾಧಕ-ಬಾಧಕ ಕುರಿತು ಮಾತನಾಡಿರುವ ಸಾರಿಗೆ ತಜ್ಞ ಶ್ರೀಹರಿ, ಸಾರಿಗೆ ನಿಯಮಗಳಿಂದ ಜನರಿಗೆ ಆಗುವ ಹೊರೆ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಬಿಹಚ್ ಸಿರೀಸ್ ರಿಜಿಸ್ಟ್ರೇಶನ್ ಜಾರಿಗೆ ತರ್ತಿದೆ. ಈ ಹೊಸ ನಿಯಮ ಚಾಲ್ತಿಗೆ ಹಂತ ಹಂತವಾಗಿ ಬರಬೇಕಿದೆ.

ಸಾರಿಗೆ ತಜ್ಞರ ಮಾಹಿತಿ

ಈ ಬಿಹೆಚ್ ಸಿರೀಸ್ ನಿಂದಾಗಿ ಕಳ್ಳಾಟ ಕಡಿಮೆ ಆಗುತ್ತೆ ಅಂತಾರೆ. ಅಂದರೆ ಒಂದೇ ನಂಬರ್‌ನಲ್ಲಿ 3-4 ವಾಹನಗಳು ರಸ್ತೆಗಿಳಿಯೋದನ್ನು ಕಂಡಿದ್ದೇವೆ, ಇದನ್ನು ತಪ್ಪಿಸಬಹುದು. ಯಾಕೆಂದರೆ, ಆಯಾ ರಾಜ್ಯದಲ್ಲಿ ಬೇರೆ ಬೇರೆ ವಾಹನ ನೋಂದಣಿ ಇರುವುದರಿಂದ, ರಾಜ್ಯದ ನೋಂದಣಿ ಸಂಖ್ಯೆಯನ್ನು ಮರೆಮಾಚಿ ಬೇರೆ ನಂಬರ್ ಪ್ಲೇಟ್ ಮೂಲಕ ಅನ್ಯ ರಾಜ್ಯದಲ್ಲಿ ಓಡಾಡ್ತಾರೆ. ಈ ರೀತಿ ನಕಲಿ ನಂಬರ್ ಹಾಕಿಕೊಂಡಾಗ ವಾಹನಗಳನ್ನು ಹಿಡಿಯಲು ಬೇರೆ ರಾಜ್ಯಕ್ಕೆ ಕಷ್ಟವಾಗುತ್ತೆ. ಆಲ್ ಇಂಡಿಯಾ ಸಿಸ್ಟಂ ಬಂದಾಗ ನಂಬರ್ ಹಾಕಿದ ಕೂಡಲೇ ಎಷ್ಟು ವಾಹನಗಳು ಒಂದೇ ನೋಂದಣಿಯಲ್ಲಿ ಓಡಾಡ್ತಿದೆ ಅನ್ನೋದನ್ನು ಸುಲಭವಾಗಿ ತಿಳಿದು ಪ್ರಕರಣ ದಾಖಲು ಮಾಡಿಕೊಳ್ಳಬಹುದಾಗಿದೆ ಅಂತ ತಿಳಿಸಿದರು.

ಸದ್ಯ ಸೆಪ್ಟೆಂಬರ್ 15 ರ ಬಳಿಕ ಸೂಕ್ತ ದಾಖಲೆಗಳನ್ನು ಒದಗಿಸಿ, ಬಿಹೆಚ್ ನಂಬರ್ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.