ದೇವನಹಳ್ಳಿ: ನಿಗದಿತ ಸಮಯಕ್ಕೆ ಪೈಲಟ್ಗಳು ಬಾರದ ಕಾರಣ,ವಿಮಾನ ಸಮಯಕ್ಕೆ ಸರಿಯಾಗಿ ತೆರಳದೇ ವಿಳಂಬವಾಗಿರುವುದಕ್ಕೆ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಪುಣೆ ಮತ್ತು ದೆಹಲಿಗೆ ಹೋಗಬೇಕಾದ ಪ್ರಯಾಣಿಕರು ನಿಗದಿತ ಸಮಯಕ್ಕಿಂತ 81 ನಿಮಿಷ ತಡವಾಗಿ ತಮ್ಮ ಸ್ಥಳಗಳನ್ನ ತಲುಪಿದ್ದಾರೆ. ಈ ಕುರಿತು ನೆಟ್ಟಿಗರ ಮನೆಯಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ತಮ್ಮ ಅಸಮಾಧಾನವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.
-
Started at 630 AM from Outer Ring Road to avoid holiday rush for 1140 flight ✈️ . After boarding there is announcement 📣 in Indigo flight 6E 6104 that the pilot is stuck in traffic, flight delayed by an hour 🤷♀️@peakbengaluru #JustBangaloreThings pic.twitter.com/zlvFpOalJg
— Khushboo (@kpb2602) December 23, 2022 " class="align-text-top noRightClick twitterSection" data="
">Started at 630 AM from Outer Ring Road to avoid holiday rush for 1140 flight ✈️ . After boarding there is announcement 📣 in Indigo flight 6E 6104 that the pilot is stuck in traffic, flight delayed by an hour 🤷♀️@peakbengaluru #JustBangaloreThings pic.twitter.com/zlvFpOalJg
— Khushboo (@kpb2602) December 23, 2022Started at 630 AM from Outer Ring Road to avoid holiday rush for 1140 flight ✈️ . After boarding there is announcement 📣 in Indigo flight 6E 6104 that the pilot is stuck in traffic, flight delayed by an hour 🤷♀️@peakbengaluru #JustBangaloreThings pic.twitter.com/zlvFpOalJg
— Khushboo (@kpb2602) December 23, 2022
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವೊಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹೊರಟು ಮಧ್ಯಾಹ್ನ 2.50ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನ ತಲುಪಬೇಕಿತ್ತು, ಆದರೆ, ವಿಮಾನದ ಪೈಲಟ್ ತಡವಾಗಿ ಬಂದ್ದಿದ್ದರಿಂದ ಮಧ್ಯಾಹ್ನ 1:21 ಕ್ಕೆ ಹೊರಟು ಸಂಜೆ 4:07 ಕ್ಕೆ ದೆಹಲಿ ತಲುಪಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ವಿಮಾನವು ತನ್ನ ಗಮ್ಯಸ್ಥಾನವು 77 ನಿಮಿಷ ತಡವಾಗಿ ತಲುಪಿದೆ ಎಂದು ಹೇಳಲಾಗಿದೆ.
ಪೈಲಟ್ಗಳು ತಡವಾಗಿ ಬಂದ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ 180 ಪ್ರಯಾಣಿಕರು ಕಾದು ಸುಸ್ತಾಗಿದ್ದರು ಎಂಬ ಮಾತುಗಳಿವೆ. ಅಷ್ಟೇ ಅಲ್ಲ ವಿಮಾನ ತಡವಾಗಿ ಹಾರಿದ್ದಕ್ಕೆ ನೆಟ್ಟಿಗರ ಮನೆಯಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆಯಾಗಿದೆ. ಪೈಲಟ್ಗಳು ಟ್ರಾಫಿಕ್ ಸಮಸ್ಯೆಯಿಂದಾಗಿ ಆಗಮಿಸಲು ವಿಳಂಬವಾಗಿದೆ ಎಂದು ವಿಮಾನದಲ್ಲಿ ಹೇಳಲಾಗಿದೆ ಎಂದು ಪ್ರಯಾಣಿಕರು ತಾವು ಮಾಡಿದ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಮಾನ ಸಂಸ್ಥೆ ನಾವು ಸಮಯಕ್ಕೆ ಸರಿಯಾಗಿ ಹಾರಲು ಪ್ರಯತ್ನಿಸಿದವು. ಆದರೆ ಕೆಲವೊಮ್ಮೆ ಅನಿಶ್ಚಿತೆಯ ಕಾರಣಕ್ಕೆ ವಿಮಾನ ಶೆಡ್ಯೂಲ್ಡ್ ಬದಲಾವಣೆ ಅನಿವಾರ್ಯ ಎಂದು ವಿಷಾದ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂಎ ಸಲೀಂ ಅವರು ವಿಮಾನ ಸಂಸ್ಥೆ ಮತ್ತು ಪ್ರಯಾಣಿಕರು ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ.
ಮತ್ತೊಂದೆಡೆ, ಟ್ರಾಫಿಕ್ ಸಮಸ್ಯೆ ಎದುರಾಗಿತ್ತಾ ಎಂಬ ಕುರಿತಂತೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಅಂದು ನಗರದಲ್ಲಿ ಎಲ್ಲಿಯೂ ಯಾವುದೇ ಟ್ರಾಫಿಕ್ ಸಮಸ್ಯೆಗಳು ವರದಿಯಾಗಿಲ್ಲ ಎಂದು ಈಟಿವಿ ಭಾರತ ಕರ್ನಾಟಕಕ್ಕೆ ದೂರವಾಣಿ ಮೂಲಕ ಪೊಲೀಸ್ ಅಧಿಕಾರಿ ಎಂಎ ಸಲೀಂ ಅವರು ಸ್ಪಷ್ಟನೆ ನೀಡಿದ್ದಾರೆ.
ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೋವಿಡ್ ಮಾರ್ಗಸೂಚಿ ಪ್ರಕಟ: ಇಂದಿನಿಂದ ಜಾರಿ