ETV Bharat / state

ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರ: ಮನೆಗಳಿಗೆ ಕನ್ನ ಹಾಕಿದ್ದ ನೇಪಾಳಿ‌ ಕಳ್ಳರ ಬಂಧನ - ಈಟಿವಿ ಭಾರತ ಕನ್ನಡ ನ್ಯೂಸ್​

ಗುರುತು ಪರಿಚಯ ಇಲ್ಲದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರ - ಕೆಲಸಕ್ಕೆಂದು ಬಂದು ಮನೆಗೆ ಕನ್ನ ಹಾಕಿದ ನೇಪಾಳ ಮೂಲದ ಕಳ್ಳರ ಬಂಧನ - ಮೂರು ಪ್ರತ್ಯೇಕ ಪ್ರಕರಣದಲ್ಲಿ 17 ಜನರ ಬಂಧನ - ನಗದು, ಚಿನ್ನಾಭರಣ ವಶ

nepali-thieves-came-to-work-and-robbed-a-house-were-arrested-by-bengaluru-police
ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರ : ಮನೆಗಳಿಗೆ ಕನ್ನ ಹಾಕಿದ್ದ ನೇಪಾಳಿ‌ ಕಳ್ಳರ ಬಂಧನ
author img

By

Published : Mar 11, 2023, 5:45 PM IST

Updated : Mar 11, 2023, 8:34 PM IST

ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರ: ಮನೆಗಳಿಗೆ ಕನ್ನ ಹಾಕಿದ್ದ ನೇಪಾಳಿ‌ ಕಳ್ಳರ ಬಂಧನ

ಬೆಂಗಳೂರು : ಗುರುತು ಪರಿಚಯ ಇಲ್ಲದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರ. ಕೆಲಸದ ನೆಪದಲ್ಲಿ ಬಂದು ಆಶ್ರಯ ನೀಡಿದವರ ಮನೆಗಳಲ್ಲೇ ಕೈಚಳಕ ತೋರಿಸಿದ್ದ ನೇಪಾಳ ಮೂಲದ ಆರೋಪಿಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರ ಹಾಗೂ ಜಯನಗರ ಠಾಣೆಗಳಿಗೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ನೇತ್ರಾ ಶಾಹಿ, ಲಕ್ಷ್ಮಿ ಸೇಜುವಲ್, ಗೋರಕ್ ಬಹದ್ದೂರ್, ಭೀಮ್ ಬಹದ್ದೂರ್, ಅಂಜಲಿ‌, ಅಬೇಶ್ ಶಾಹಿ, ಪ್ರಶಾಂತ್, ಪ್ರಕಾಶ್, ಅರ್ಜುನ್ ಶಾಯಿ, ಪೂರನ್ ಶಾಯಿ, ಹರೀಶ್ ಶಾಯಿ, ರಮಿತ ಠಾಕೂರ್, ಬಿಕಾಸ್, ಹೇಮಂತ್, ಸುಷ್ಮಿತಾ, ರೋಷನ್ ಪದಂ ಹಾಗೂ ಪ್ರೇಮ್ ಎಂದು ಗುರುತಿಸಲಾಗಿದೆ.

nepali-thieves-came-to-work-and-robbed-a-house-were-arrested-by-bengaluru-police
ಮನೆಗಳಿಗೆ ಕನ್ನ ಹಾಕಿದ್ದ ನೇಪಾಳಿ‌ ಕಳ್ಳರ ಬಂಧನ

ಮಾಲೀಕರು ತಿರುಪತಿಗೆ ತೆರಳಿದಾಗ ಕಳ್ಳತನ : ಜೆ.ಪಿ.ನಗರ 2ನೇ ಹಂತದ ಮನೆಯೊಂದರಲ್ಲಿ ಪ್ರೇಮ್ ಹಾಗೂ ಲಕ್ಷ್ಮಿ ಸೆಜುವಲ್ ದಂಪತಿಯನ್ನು ಮೂರು ತಿಂಗಳ ಹಿಂದೆ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಫೆಬ್ರವರಿ 28ರಂದು ಮನೆ ಮಾಲೀಕ ದಂಪತಿ ತಿರುಪತಿಗೆ ತೆರಳಿದ್ದಾಗ ಮನೆಯಲ್ಲಿದ್ದ ಅವರ ಮಗ ಕಿರಣ್​ಗೆ ಗೊತ್ತಾಗದಂತೆ ನಿದ್ರೆ ಮಾತ್ರೆ ಸೇವಿಸುವಂತೆ ಮಾಡಿದ್ದಾರೆ. ಬಳಿಕ ರಾತ್ರಿ ವೇಳೆ ತಮ್ಮ ಸಹಚರರಾದ ನೇತ್ರಾ ಶಾಹಿ, ಗೋರಕ್ ಬಹದ್ದೂರ್, ಭೀಮ್ ಬಹದ್ದೂರ್, ಅಂಜಲಿ‌, ಅಬೇಶ್ ಶಾಹಿ, ಪ್ರಶಾಂತ್, ಪ್ರಕಾಶ್ ನನ್ನು ಮನೆಗೆ ಕರೆಯಿಸಿಕೊಂಡಿದ್ದರು. ನಂತರ ಮನೆಯಲ್ಲಿದ್ದ ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು.

ಮಧ್ಯರಾತ್ರಿ ವೇಳೆ ಎಚ್ಚರಗೊಂಡ ಕಿರಣ್​ಗೆ ತನ್ನ ಮನೆಯಲ್ಲಿ‌ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಜೆ.ಪಿ.ನಗರ ಠಾಣಾ ಪೊಲೀಸರು, ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ನೇಪಾಳದ ಗಡಿ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಕೆ.ಜಿ 173 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ, 77.69 ಲಕ್ಷ ನಗದು, 1 ಪರವಾನಗಿ ಹೊಂದಿರುವ ಪಿಸ್ತೂಲ್, 3 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಮಾಲೀಕರು ಮನೆಯಲ್ಲಿ‌ ಇಲ್ಲದಿದ್ದಾಗ ಕೈಚಳಕ : ಮತ್ತೊಂದು ಪ್ರಕರಣದಲ್ಲಿ‌ ಬ್ರಿಜ್ ಭೂಷಣ್ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದ ವಿಮಲಾ ಎಂಬಾಕೆ, ಕಳೆದ ವರ್ಷ ಡಿಸೆಂಬರ್ 2ರಂದು ಅದೇ ಮನೆಯ ಮಾಲೀಕ‌ ಕೆಲಸಕ್ಕೆ ಎಂದು ಹೊರಗೆ ಹೋದಾಗ ಮನೆಯಲ್ಲಿ ಕಳ್ಳತನ ಮಾಡಿದ್ದಳು. ಈಕೆಯಿಂದ ಕಳ್ಳತನ ಮಾಡಿದ್ದ 320 ಗ್ರಾಂ ಚಿನ್ನಾಭರಣ, 6.12 ಲಕ್ಷ ನಗದು, 197 ಗ್ರಾಂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೇಪಾಳ ಮೂಲದ ಅರ್ಜುನ್ ಶಾಯಿ, ಪೂರನ್ ಶಾಯಿ, ಹರೀಶ್ ಶಾಯಿ ಹಾಗೂ ರಮಿತ ಠಾಕೂರ್ ಎಂಬಾಕೆಯನ್ನು ಬಂಧಿಸಲಾಗಿದೆ.

ಕೆಲಸಕ್ಕಿದ್ದ ಮನೆಯಲ್ಲೇ ಕನ್ನ ಹಾಕಿದ ದಂಪತಿ : ಕೆಲಸಕ್ಕಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ದಂಪತಿ ಸಹಿತ ಐವರನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿಕಾಸ್, ಹೇಮಂತ್, ಸುಷ್ಮಿತಾ, ರೋಷನ್ ಪದಂ ಹಾಗೂ ಪ್ರೇಮ್ ಬಂಧಿತರು. ಒಬೇದುಲ್ಲಾ ಖಾನ್ ಎಂಬಾತನ ಮನೆಯಲ್ಲಿ ಕೆಲಸಕ್ಕಿದ್ದ ಬಿಕಾಸ್ ಹಾಗೂ ಸುಷ್ಮಿತಾ ದಂಪತಿ, ಫೆಬ್ರವರಿ 13ರಂದು ಮನೆಯಲ್ಲಿದ್ದ ನಗದು ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಸದ್ಯ ಬಂಧಿತರಿಂದ 292 ಗ್ರಾಂ ಚಿನ್ನಾಭರಣ, 15 ಸಾವಿರ ನಗದು, 168 ಗ್ರಾಂ ಬೆಳ್ಳಿ ವಸ್ತುಗಳು, ವಿವಿಧ ಬ್ರ್ಯಾಂಡ್‌ನ 18 ವಾಚ್ ಗಳು, ತಲಾ‌ ಒಂದು ಟ್ಯಾಬ್ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಸ್ಕೂಟಿಯಲ್ಲಿ ಇಟ್ಟಿದ್ದ 45 ಸಾವಿರ ನಗದು ಕದ್ದು ಖದೀಮರು ಪರಾರಿ, ಸಿಸಿಟಿವಿಯಲ್ಲಿ ಸೆರೆ

Last Updated : Mar 11, 2023, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.