ETV Bharat / state

ಹಿಂದಿನ ನಿಲುವಿಗೆ ಅಂಟಿಕೊಂಡ ಸ್ಪೀಕರ್​​; ಶಾಸಕರ ರಾಜೀನಾಮೆ ಅಂಗೀಕಾರ ಸದ್ಯಕ್ಕಿಲ್ಲ​ - ಬೆಂಗಳೂರು

ಶಾಸಕರು ಇವತ್ತು ರಾಜೀನಾಮೆ ಸಲ್ಲಿಕೆ ಮಾಡಿದ್ದು, ತಕ್ಷಣವೇ ಅವರ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ರಮೇಶ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಸ್ಪೀಕರ್ ರಮೇಶ್​ ಕುಮಾರ್​
author img

By

Published : Jul 11, 2019, 8:06 PM IST

Updated : Jul 11, 2019, 8:16 PM IST

ಬೆಂಗಳೂರು: ಎಲ್ಲ ಶಾಸಕರು ಇಂದು ತಮ್ಮ ರಾಜೀನಾಮೆ ಸಲ್ಲಿಕೆ ಮಾಡಿದ್ದು, ತಕ್ಷಣವೇ ಅವುಗಳನ್ನು ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಪತ್ರ ಪಡೆದ ಬಳಿಕ ಮಾತನಾಡಿದ ಸ್ಪೀಕರ್​​, ರಾಜ್ಯದ ಸಾರ್ವಜನಿಕರ ಇತಿಹಾಸದಲ್ಲಿ ಇಂದು ವಿಶಿಷ್ಠ ದಿನವಾಗಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡುವುದು ನನ್ನ ಕರ್ತವ್ಯವಾಗಿದೆ. ಕಳೆದ 40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು, ನಾನು ಈ ತೀರ್ಮಾನ ಕೈಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಸ್ಪೀಕರ್ ರಮೇಶ್​ ಕುಮಾರ್​

ಕಳೆದ ಶನಿವಾರ ದಿನಾಂಕ 6ರಂದು ಶಾಸಕರು ನನಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಅವತ್ತು ಸಂಪೂರ್ಣ ದಿನ ನಾನು ಕಚೇರಿಯಲ್ಲಿದ್ದೆ. ಅವರು ಬರುವ ಮೊದಲು ನಾವು ಬರುತ್ತಿದ್ದೇವೆ ಎಂದು ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಫೋನ್​ ಕೂಡ ಮಾಡಿಲ್ಲ. ಸೋಮವಾರ ನನಗೆ ಕಚೇರಿಗೆ ಆಗಮಿಸಲು ಆಗಿರಲಿಲ್ಲ, ಹೀಗಾಗಿ ಮಂಗಳವಾರ ಪರಿಶೀಲನೆ ನಡೆಸಿದ್ದೇನೆ. 13 ರಾಜೀನಾಮೆ ಪತ್ರಗಳಲ್ಲಿ 8 ಪತ್ರಗಳು ಸರಿಯಾಗಿರಲಿಲ್ಲ. ಉಳಿದ 5 ಪತ್ರಗಳು ಸರಿಯಾಗಿದ್ದ ಕಾರಣ ಅವುಗಳ ವಿಚಾರಣೆ ಮಾಡಲು ಕೈಗೆತ್ತಿಕೊಳ್ಳಲಾಗಿತ್ತು. ಜತೆಗೆ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರಾ? ಅಥವಾ ಬೇರೆ ಯಾರಾದರೂ ಅವುಗಳನ್ನು ಕಳುಹಿಸಿದ್ದಾರಾ ಎಂಬೆಲ್ಲಾ ಮಾಹಿತಿ ಪಡೆದುಕೊಳ್ಳಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.

ರಾಜೀನಾಮೆ ಪರಿಶೀಲನೆ ಮಾಡಲು ನಾನು ಯಾವುದೇ ರೀತಿಯ ವಿಳಂಬ ಮಾಡಿಲ್ಲ. ಎಲ್ಲ ಶಾಸಕರಿಗೂ ಈಗಾಗಲೇ ದಿನಾಂಕ ನೀಡಿರುವೆ.ನಿಯಮಾವಳಿಗಳಿಗೆ, ಸಂವಿಧಾನಕ್ಕೆ ಗೌರವ ನೀಡಬೇಕು. ಕೆಲವರು ಹೇಳಿದ ಹಾಗೇ ಕುಣಿಯಲು ಆಗಲ್ಲ, ಜನರ ಹಾಗು ಸಂವಿಧಾನದ ಹಂಗಿನಲ್ಲಿ ನಾನು ಬದುಕುತ್ತಿದ್ದೇನೆ. ಯಾವುದೇ ಶಕ್ತಿಗೆ ಬಗ್ಗುವ ಅವಶ್ಯಕತೆ ನನಗಿಲ್ಲ. ಮುಂಬೈ ಹೋಟೆಲ್​​ನಲ್ಲಿ ಕುಳಿತು ಸುದ್ದಿಗೋಷ್ಠಿ ನಡೆಸುತ್ತಾರೆ. ಭದ್ರತೆಯಲ್ಲಿ ಬಂದು ರಾಜೀನಾಮೆ ಅಂಗೀಕಾರ ಮಾಡುವಂತೆ ಹೇಳುತ್ತಾರೆ. ಶಾಸಕರ ರಾಜೀನಾಮೆಗಳನ್ನ ಒಂದಾದ ಮೇಲೆ ಒಂದರಂತೆ ಪರಿಶೀಲನೆ ನಡೆಸಬೇಕಾಗುತ್ತದೆ.ನಿಗದಿಪಡಿಸಿದ ದಿನಾಂಕದಂದೇ ಅವರ ರಾಜೀನಾಮೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಈ ಹಿಂದಿನಿಂದಲೂ ದೇಶದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿದೆ. ದೇಶದಲ್ಲಿನ ಪಕ್ಷಾಂತರ ಪಿಡುಗು ತಡೆಯಬೇಕಾಗಿದೆ. ಅದಕ್ಕಾಗಿಯೇ ಈ ಹಿಂದೆ ಸಮಿತಿ ರಚನೆ ಮಾಡಲಾಗಿತ್ತು. ಆದರೆ ಯಾರು ಅದನ್ನ ಪಾಲಿಸುತ್ತಿಲ್ಲ. ದೇಶದಲ್ಲಿ ಸಾವಿರಾರು ಪಕ್ಷಾಂತರ ಪ್ರಕರಣಗಳು ನಡೆದಿವೆ. ಮಂತ್ರಿಯಾಗುವ ಉದ್ದೇಶದಿಂದಲೇ ಪಕ್ಷಾಂತರ ಪರ್ವ ನಡೆಯುತ್ತಿವೆ. ಈಗಾಗಲೇ ಪ್ರೊ.ಮಧು ದಂಡಾವತಿ ಹಾಗೂ ವೈಜಯಂತಿ ಮಾಲಾ ಪಕ್ಷಾಂತರ​ ಬಿಲ್​ ಸಹ ಇಲ್ಲಿ ಸ್ಪೀಕರ್​​ ರಮೇಶ್​ ಕುಮಾರ್ ಪ್ರಸ್ತಾಪ ಮಾಡಿದರು.
ನಿಯಮಗಳನ್ನು ಪಾಲಿಸದೇ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ. ಇದರ ಮಧ್ಯೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿರುವುದು ತಪ್ಪು, ಅದರ ಅಗತ್ಯ ಇರಲಿಲ್ಲ. ಚುನಾಯಿತ ಪ್ರತಿನಿಧಿಗಳು ನನನ್ನು ಭೇಟಿ ಮಾಡಬೇಕಾಗಿತ್ತು. ಯಾರನ್ನು ಕೇಳಿದ್ದಾರೆ. ಮುಂಬೈನಲ್ಲಿ ಕುಳಿತು ಸುಪ್ರೀಂಕೋರ್ಟ್​​ಗೆ ಹೋಗುವ ಅವಶ್ಯಕತೆ ಇರಲಿಲ್ಲ. ಇವತ್ತು ಎಲ್ಲರೂ ರಾಜೀನಾಮೆ ನೀಡಿದ್ದಾರೆ. ತಕ್ಷಣ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ಕಲಾಪ ವಿಡಿಯೋಗ್ರಫಿ ಆಗಿದೆ. ಅದನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಕೆ ಮಾಡಲಾಗುವುದು. ಶಾಸಕರಿಗೆ ಕೆಲವೊಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಅವರು ಉತ್ತರಿಸಿದ್ದಾರೆ ಎಂದು ತಿಳಿಸಿದರು.

Intro:Body:

ಹಿಂದಿನ ನಿಲುವಿಗೆ ಅಂಟಿಕೊಂಡ ಸ್ಪೀಕರ್​​... ಶಾಸಕರ ರಾಜೀನಾಮೆ ಅಂಗೀಕಾರ ಸಧ್ಯಕ್ಕಿಲ್ಲ ಎಂದ ಸ್ಪೀಕರ್​! 

ಬೆಂಗಳೂರು: ಎಲ್ಲ ಶಾಸಕರು ಇಂದು ಬಂದು ತಮ್ಮ ರಾಜೀನಾಮೆ ಸಲ್ಲಿಕೆ ಮಾಡಿದ್ದು, ತಕ್ಷಣವೇ ಅವುಗಳನ್ನ ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಸ್ಪಷ್ಟ ಪಡಿಸಿದ್ದಾರೆ. 

ಅತೃಪ್ತ ಶಾಸಕರ ರಾಜೀನಾಮೆ ಪತ್ರ ಪಡೆದ ಬಳಿಕ ಮಾತನಾಡಿದ ಸ್ಪೀಕರ್​​, ರಾಜ್ಯದ ಸಾರ್ವಜನಿಕರ ಇತಿಹಾಸದಲ್ಲಿ ಇಂದು ವಿಶಿಷ್ಠ ದಿನವಾಗಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡುವುದು ನನ್ನ ಕರ್ತವ್ಯವಾಗಿದೆ. ಕಳೆದ  40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ನಾನು ಈ ತೀರ್ಮಾಣ ಕೈಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಕಳೆದ ಶನಿವಾರ ದಿನಾಂಕ 6ರಂದು ಶಾಸಕರು ನನಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಅವದು ಸಂಪೂರ್ಣ ದಿನ ನಾನು ಆಫೀಸ್​​ನಲ್ಲಿದೆ. ಅವರು ಬರುವ ಮೊದಲು ನಾವು ಬರುತ್ತಿದ್ದೇವೆ ಎಂದು ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಫೋನ್​ ಕೂಡ ಮಾಡಿಲ್ಲ. ಸೋಮವಾರ ನನಗೆ ಕಚೇರಿಗೆ ಆಗಮಿಸಿಲು ಆಗಿರಲಿಲ್ಲ, ಹೀಗಾಗಿ ಮಂಗಳವಾರ ಪರಿಶೀಲನೆ ನಡೆಸಿದ್ದೇನೆ. 13 ರಾಜೀನಾಮೆ ಪತ್ರಗಳಲ್ಲಿ 8 ಪತ್ರಗಳು ಸರಿಯಾಗಿರಲಿಲ್ಲ. ಉಳಿದ 5 ಪತ್ರಗಳು ಸರಿಯಾಗಿದ್ದ ಕಾರಣ ಅವುಗಳ ವಿಚಾರಣೆ ಮಾಡಲು ಕೈಗೆತ್ತಿಕೊಳ್ಳಲಾಗಿತ್ತು. ಜತೆಗೆ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರಾ ಅಥವಾ ಬೇರೆ ಯಾರಾದರು ಅವುಗಳನ್ನ ಕಳುಹಿಸಿದ್ದಾರಾ ಎಂದ ಮಾಹಿತಿ ಪಡೆದುಕೊಳ್ಳಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ. 

ರಾಜೀನಾಮೆ ಪರಿಶೀಲನೆ ಮಾಡಲು ನಾನು ಯಾವುದೇ ರೀತಿಯ ವಿಳಂಬ ಮಾಡಿಲ್ಲ. ಎಲ್ಲ ಶಾಸಕರಿಗೂ ಈಗಾಗಲೇ ದಿನಾಂಕ ನೀಡಿರುವೆ.ನಿಯಮಾವಳಿಗಳಿಗೆ, ಸವಿಂಧಾನಕ್ಕೆ ಗೌರವ ನೀಡಬೇಕು. ಕೆಲವರು ಹೇಳಿದ ಹಾಗೇ ಕುಣಿಯಲು ಆಗಲ್ಲ, ಜನರ ಹಂಗಿನಲ್ಲಿ ನಾನು ಬದುಕುತ್ತಿದ್ದೇನೆ. ಯಾವುದೇ ಶಕ್ತಿಗೆ ಬಗ್ಗುವ ಅವಶ್ಯಕತೆ ನನಗಿಲ್ಲ. ಮುಂಬೈ ಹೋಟೆಲ್​​ನಲ್ಲಿ ಕುಳಿತು ಸುದ್ದಿಗೋಷ್ಠಿ ನಡೆಸುತ್ತಾರೆ.ಭದ್ರತೆಯಲ್ಲಿ ಬಂದು ರಾಜೀನಾಮೆ ಅಂಗೀಕಾರ ಮಾಡುವಂತೆ ಹೇಳುತ್ತಾರೆ.ಶಾಸಕರ ರಾಜೀನಾಮೆಗಳನ್ನ ಒಂದಾದ ಮೇಲೆ ಒಂದರಂತೆ ಪರಿಶೀಲನೆ ನಡೆಸಬೇಕಾಗುತ್ತದೆ.ನಿಗದಿಪಡಿಸಿದ ದಿನಾಂಕದಂದೆ ಅವರ ರಾಜೀನಾಮೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು. 

ಈ ಹಿಂದಿನಿಂದಲೂ ದೇಶದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿದೆ. ದೇಶದಲ್ಲಿನ ಪಕ್ಷಾಂತರ ಪಿಡುಗು ತಡೆಯಬೇಕಾಗಿದೆ. ಅದಕ್ಕಾಗಿಯೇ ಈ ಹಿಂದೆ ಸಮಿತಿ ರಚನೆ ಮಾಡಲಾಗಿತ್ತು. ಆದರೆ ಯಾರು ಅದನ್ನ ಪಾಲಿಸುತ್ತಿಲ್ಲ. ದೇಶದಲ್ಲಿ ಸಾವಿರಾರು ಪಕ್ಷಾಂತರ ಪ್ರಕರಣಗಳು ನಡೆದಿವೆ. ಮಂತ್ರಿಯಾಗುವ ಉದ್ದೇಶದಿಂದಲೇ ಪಕ್ಷಾಂತರ ಪರ್ವ ನಡೆಯುತ್ತಿವೆ. ಈಗಾಗಲೇ ಪ್ರೊ.ಮಧು ದಂಡಾವತಿ ಹಾಗೂ ವೈ ಜಯಂತಿ ಮಾಲಾ ಪಕ್ಷಾಂತರ್​ ಬಿಲ್​ ಸಹ ಇಲ್ಲಿ ಸ್ಪೀಕರ್​​ ರಮೇಶ್​ ಕುಮಾರ್ ಪ್ರಸ್ತಾಪ ಮಾಡಿದರು. 

ನಿಯಮಗಳನ್ನು ಪಾಲಿಸದೇ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ. ಇದರ ಮಧ್ಯೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿರುವುದು ತಪ್ಪು, ಅದರ ಅಗತ್ಯ ಇರಲಿಲ್ಲ. ಚುನಾಯಿತ ಪ್ರತಿನಿಧಿಗಳು ನನನ್ನು ಭೇಟಿ ಮಾಡಬೇಕಾಗಿತ್ತು. ಯಾರನ್ನು ಕೇಳಿದ್ದಾರೆ. ಮುಂಬೈನಲ್ಲಿ ಕುಳಿತು ಸುಪ್ರೀಂಕೋರ್ಟ್​​ಗೆ ಹೋಗುವ ಅವಶ್ಯಕತೆ ಇರಲಿಲ್ಲ. ಇವತ್ತು ಎಲ್ಲರೂ ರಾಜೀನಾಮೆ ನೀಡಿದ್ದಾರೆ. ತಕ್ಷಣ ಒಪ್ಪಿಕೊಳ್ಳಲು ಸಾಧ್ಯವಿಲ್ಲ.ಎಲ್ಲ ಕಲಾಪ ವಿಡಿಯೋಗ್ರಾಫಿ ಆಗಿದೆ. ಅದನ್ನ ಸುಪ್ರೀಂಕೋರ್ಟ್​ಗೆ ಸಲ್ಲಿಕೆ ಮಾಡಲಾಗುವುದು.ಶಾಸಕರಿಗೆ ಕೆಲವೊಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಅವರು ಉತ್ತರಿಸಿದ್ದಾರೆ ಎಂದು ತಿಳಿಸಿದರು. 

Conclusion:
Last Updated : Jul 11, 2019, 8:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.