ಬೆಂಗಳೂರು : ಮಾದಕ ವಸ್ತುವೊಂದನ್ನು ತಯಾರಿಸುತ್ತಿದ್ದ ವ್ಯಕ್ತಿಯ ಮನೆ ಹಾಗೂ ಕಾರ್ಖಾನೆ ಮೇಲೆ ಎನ್ಸಿಬಿ ಬೆಂಗಳೂರು ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ 91 ಕೆ.ಜಿ ಡ್ರಗ್ ಹಾಗೂ 62 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ.
ಈ ಡ್ರಗ್ ತಯಾರಿಸುತ್ತಿದ್ದ ಹೈದರಾಬಾದ್ ಮೂಲದ ಎನ್.ವಿ. ರೆಡ್ಡಿ ಎಂಬಾತ ಬೆಂಗಳೂರಿನ ಮನೆ ಮೇಲೆ ಮೊದಲು ದಾಳಿ ನಡೆಸಿದ ಎನ್ಸಿಬಿ ಅಧಿಕಾರಿಗಳು, 62 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
ಬಳಿಕ ಆತ ನೀಡಿದ ಮಾಹಿತಿ ಆಧರಿಸಿ, ಕೋಲಾರ ಕೈಗಾರಿಕಾ ಪ್ರದೇಶ ಹಾಗೂ ಬೀದರ್ನ ಎರಡು ಕಡೆಗಳಲ್ಲಿ ಡ್ರಗ್ ತಯಾರಿಸುತ್ತಿದ್ದ ಅಕ್ರಮ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆರೋಪಿಗಳು ಕೋಲಾರ, ಬೀದರ್ನಲ್ಲಿ ಡ್ರಗ್ ತಯಾರಿಸಿ, ಬೆಂಗಳೂರು, ಅಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗ್ತಿದೆ.
ಓದಿ : ಖೋಟಾನೋಟು ಚಲಾವಣೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಎನ್ಐಎ
ಕೋಲಾರ ಮತ್ತು ಬೀದರ್ನ ಅಡ್ಡೆಗಳು ಮತ್ತು ಎನ್.ವಿ ರೆಡ್ಡಿ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಎನ್.ವಿ. ರೆಡ್ಡಿ, ಎಸ್. ಭಾಸ್ಕರ್, ವೈ.ವಿ ರೆಡ್ಡಿ, ಎಸ್.ಮೆನನ್, ಅಮೃತ್ ಹಾಗೂ ಭಾಸ್ಕರ್ ಎಂಬುವರನ್ನು ಬಂಧಿಸಿದ್ದಾರೆ.