ETV Bharat / state

ರಾಷ್ಟ್ರೀಯ ಮತದಾರರ ದಿನಾಚರಣೆ: ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಲು ರಾಜ್ಯಪಾಲರ ಕರೆ - ರಾಷ್ಟ್ರೀಯ ಮತದಾರರ ದಿನಾಚರಣೆ

ಇಂದು ಚುನಾವಣಾ ಆಯೋಗ ರಾಜ್ಯಪಾಲ ವಜೂಬಾಯಿ ವಾಲಾ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಮಾಡಲಾಯಿತು.

ರಾಷ್ಟ್ರೀಯ ಮತದಾರರ ದಿನಾಚರಣೆ
National Voters Day celebrated in town hall at Bangalore
author img

By

Published : Jan 25, 2020, 5:20 PM IST

ಬೆಂಗಳೂರು : ಇಂದು ನಗರದ ಟೌನ್​ಹಾಲ್​ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯಿತು.

ಚುನಾವಣಾ ಆಯೋಗ ಆಯೋಜಿಸಿದ್ದ ಕಾರ್ಯಕ್ರಮವನ್ನು ರಾಜ್ಯಪಾಲ ವಜೂಬಾಯಿ ವಾಲಾ ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು, ಪ್ರತಿ ನಾಗರಿಕರಿಗೆ ತಮ್ಮ ಜವಾಬ್ದಾರಿ ಅರಿತುಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಾಷ್ಟ್ರದ ಕಾರ್ಯ ಮಾಡುವವನೇ ನಿಜವಾದ ಕಾರ್ಯಕರ್ತ. ಮತ ಚಲಾವಣೆ ಮಾಡುವುದು ನಮ್ಮ ಅಧಿಕಾರ. ರಾಷ್ಟ್ರದ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾದಷ್ಟೂ ರಾಷ್ಟ್ರ ಬಲಿಷ್ಠ ಆಗುತ್ತದೆ ಎಂದರು.

ರಾಷ್ಟ್ರೀಯ ಮತದಾರರ ದಿನಾಚರಣೆ

ಸ್ವಾತಂತ್ರ್ಯ ದೊರಕಿಸಿಕೊಡಲು ಮಹಾತ್ಮ ಗಾಂಧಿ, ವಲ್ಲಭಭಾಯಿ ಪಟೇಲ್ ದುಡಿದಿದ್ದಾರೆ. ವ್ಯಕ್ತಿಗತವಾಗಿ ಅಲ್ಲದೇ ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಿದ ಮಹಾನುಭಾವರು. ಇವರು ನಮ್ಮ ದೇಶಕ್ಕಾಗಿ ದುಡಿದರು. ಇಂದು ಮತದಾರರೂ ಸಹ ಒಂದಾಗಿ ದುಡಿದರೆ ರಾಷ್ಟ್ರದ ಏಳಿಗೆ ಸಾಧ್ಯ. ಆಗ ದೇಶ ಬಲಿಷ್ಠ ಆಗುತ್ತದೆ ಎಂದರು.

ಬಳಿಕ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಲಿಂಗಾನುಪಾತ 989 ಇದೆ. ಶೇ.69 ರಷ್ಟು ಮತದಾನ ಆಗುತ್ತಿರುವುದು ಸಂತಸದ ವಿಚಾರ ಎಂದು ತಿಳಸಿದರು. ಇದೇ ವೇಳೆ ಯುವ ಮತದಾರರಿಗೆ ಪ್ರತಿಜ್ಞಾವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ .ಅನಿಲ್ ಸೇರಿದಂತೆ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು.

Intro:ರಾಷ್ಟ್ರೀಯ ಮತದಾರರ ದಿನಾಚರಣೆ- ಯುವ ಮತದಾರರಿಗೆ ರಾಷ್ಟ್ರದ ಏಳಿಗೆಗೆ ಕರೆನೀಡಿದ ರಾಜ್ಯಪಾಲರು

ಬೆಂಗಳೂರು- ಬೆಂಗಳೂರಿನ ಟೌನ್ ಹಾಲ್ ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯಿತು.
ಭಾರತದ ಚುನಾವಣಾ ಆಯೋಗ ಆಯೋಜಿಸಿರುವ ಕಾರ್ಯಕ್ರಮವನ್ನು ರಾಜ್ಯಪಾಲ ವಜೂಬಾಯಿ ವಾಲಾ ಉದ್ಘಾಟಿಸಿದರು.
ರಾಜ್ಯ ಮುಖ್ಯಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ , ಬಿಬಿಎಂಪಿ ಆಯುಕ್ತರಾದ ಬಿಹೆಚ್ ಅನಿಲ್ ಭಾಗಿಯಾಗಿದ್ದರು.ಹದಿನೆಂಟು ವರ್ಷ ತುಂಬಿ ಮತದಾರರ ಪಟ್ಟಿ ಯಲ್ಲಿ ಸ್ಥಾನ ಪಡೆದುಕೊಂಡ ಹದಿನಾರು ಜನ ಯುವ ಮತದಾರರಿಗೆ ಗುರುತಿನ ಚೀಟಿ ಹಂಚಿಕೆ ಮಾಡಲಾಯಿತು.
ರಾಜ್ಯಪಾಲ ವಜೂಬಾಯಿ ವಾಲಾ ಮಾತನಾಡಿ, ಪ್ರತೀ ನಾಗರಿಕರಿಗೆ ತಮ್ಮ ಜವಾಬ್ದಾರಿ ಅರಿತುಕೊಳ್ಳಲು ಈ ಕಾರ್ಯಕ್ರಮ ಮಾಡಲಾಗಿದೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಕಾರ್ಯ ಮಾಡುವವನೇ ಕಾರ್ಯಕರ್ತ. ರಾಷ್ಟ್ರದ ಕೆಲಸ ಮಾಡುವವನೇ ನಿಜವಾದ ಕಾರ್ಯಕರ್ತ. ಮತ ಚಲಾವಣೆ ಮಾಡುವುದು ನಮ್ಮ ಅಧಿಕಾರ. ರಾಷ್ಟ್ರದ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾದಷ್ಟೂ ರಾಷ್ಟ್ರ ಬಲಿಷ್ಠ ಆಗುತ್ತದೆ. ಸ್ವಾತಂತ್ರ್ಯ ದೊರಕಿಸಿಕೊಡಲು ಮಹಾತ್ಮ ಗಾಂಧಿ, ವಲ್ಲಭಭಾಯಿ ಪಟೇಲ್ ದುಡಿದಿದ್ದಾರೆ. ವ್ಯಕ್ತಿಗತವಾಗಿ ಅಲ್ಲದೇ ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಿದ ಮಹಾನುಭಾವರು . ಗಾಂಧಿ, ನೆಹರು ಪಟೇಲ್, ಮುರಾರ್ಜಿ, ದೇಸಾಯಿ ತಮ್ಮ ಜೀವನಕ್ಕಾಗಿ ಅಲ್ಲದೇ ದೇಶಕ್ಕಾಗಿ ದುಡಿದರು. ಇಂದು ಮತದಾರರೂ ಸಹಾ ಒಂದಾಗಿ ದುಡಿದರೆ ರಾಷ್ಟ್ರದ ಏಳಿಗೆ ಸಾದ್ಯ.ಆಗ ದೇಶ ಬಲಿಷ್ಠ ಆಗುತ್ತದೆ ಎಂದರು.
ಇನ್ನು ಇದೇ ವೇಳೆ ಯುವ ಮತದಾರರಿಗೆ ಸಂಜೀವ್ ಕುಮಾರ್ ಪ್ರತಿಜ್ಞಾವಿಧಿ ಭೋದಿಸಿದರು. ಪ್ರಜಾಪ್ರಭುತ್ವ ದಲ್ಲಿ ವಿಶ್ವಾಸ ಹೊಂದಿದ ಭಾರತೀಯರಾದ ನಾವು ಚುನಾವಣಾ ಘನತೆ ಎತ್ತಿ ಹಿಡಿಯುತ್ತೇವೆ. ನಿರ್ಭಯವಾಗಿ ಮತ ಚಲಾಯಿಸುತ್ತೇವೆ. ಯಾವುದೇ ಪ್ರೇರೇಪಣೆ,ಅಥವಾ ದಾಕ್ಷಿಣ್ಯಕ್ಕೆ ಒಳಗಾಗುವುದಿಲ್ಲ ಎಂಬ ಪ್ರತಿಜ್ಞೆಯನ್ನು ಯುವ ಮತದಾರರು ಸ್ವೀಕರಿಸಿದರು.
ಬಳಿಕ ಮಾತನಾಡಿದ ಸಂಜೀವ್ ಕುಮಾರ್, ರಾಜ್ಯದಲ್ಲಿ ಮಹಿಳೆಯರ ಲಿಂಗಾನುಪಾತ ೯೮೯ ಇದೆ. ಶೇಕಡಾ ೬೮ ರಷ್ಟು ಮತದಾನ ಆಗ್ತಿರೋದು ಸಂತಸದ ವಿಚಾರ ಎಂದು
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
ಮತದಾರರಿಗೆ ಜಾಗೃತಿ ಮೂಡಿಸುವಲ್ಲಿ ಅತ್ಯುತ್ತಮವಾಗಿ ದುಡೊದ ಅಧಿಕಾರಿ, ಶಿಕ್ಷಕರಿಗೆ ಪ್ರಶಸ್ತಿ ವಿತರಿಸಲಾಯಿತು.

.
ಸೌಮ್ಯ

Kn_bng_02_voters_day_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.