ETV Bharat / state

ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ; 20 ಸ್ಥಳಗಳಲ್ಲಿ ಎನ್ಐಎ ಶೋಧ, ಬಳ್ಳಾರಿಯ ಕೆಲವರು ವಶಕ್ಕೆ - ಎನ್ಐಎ ಶೋಧ

ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ ಹಿನ್ನೆಲೆ ರಾಷ್ಟ್ರೀಯ ತನಿಖಾ ದಳ ಸದ್ಯ ಕರ್ನಾಟಕದ ಬೆಂಗಳೂರು ಸೇರಿದಂತೆ ನಾಲ್ಕು ರಾಜ್ಯಗಳ 20 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.

NIA
ಎನ್ಐಎ
author img

By ETV Bharat Karnataka Team

Published : Dec 18, 2023, 1:47 PM IST

Updated : Dec 18, 2023, 2:30 PM IST

ಬೆಂಗಳೂರು: ಉಗ್ರ ಸಂಘಟನೆಗಳೊಂದಿಗೆ ನಂಟು ಶಂಕೆ ಹಿನ್ನೆಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕರ್ನಾಟಕದ ಬೆಂಗಳೂರು ಸೇರಿದಂತೆ ನಾಲ್ಕು ರಾಜ್ಯಗಳ ಸುಮಾರು 20 ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದೆ. ಕರ್ನಾಟಕದ 11 ಸ್ಥಳಗಳು, ಜಾರ್ಖಂಡ್‌ನ 4, ಮಹಾರಾಷ್ಟ್ರದ 3 ಮತ್ತು ದೆಹಲಿಯ 1 ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದೆ. ಬೆಂಗಳೂರಿನ ಪುಲಿಕೇಶಿ ನಗರ, ಶಿವಾಜಿ ನಗರ, ಜೆ ಸಿ ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ಹಲವು ಕಡೆ, ಬಳ್ಳಾರಿಯ ಕೆಲವೆಡೆ ದಾಳಿ ಮುಂದುವರೆದಿದೆ.

ಬಳ್ಳಾರಿ ನಗರಕ್ಕೆ ಎನ್​ಐಎದಿಂದ ಏಕಾಏಕಿ ದಾಳಿ: ಇಂದು ಬೆಳಗ್ಗೆಯಿಂದಲೇ ಬಳ್ಳಾರಿಯಲ್ಲಿ ಎನ್‌ಐಎ ಕಾರ್ಯಾಚರಣೆ ಆರಂಭವಾಗಿದ್ದು, ನಿಷೇಧಿತ ಪಿಎಫ್‌ಐ ಸಂಘಟನೆಯ ಕೆಲ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಬಳ್ಳಾರಿಯ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ ವ್ಯಕ್ತಿಯ ಬಳಿ ಇದ್ದ ವಸ್ತುವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ ಕಾನೂನುಬಾಹಿರ ಚಟುವಟಿಕೆಗೆ ಯತ್ನಿಸುತ್ತಿದ್ದ ಆರೋಪದಡಿ ಪಿಎಫ್‌ಐ ಮಾಜಿ ಪ್ರಧಾನ ಕಾರ್ಯದರ್ಶಿಯೊಬ್ಬರ ಮನೆಯಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಬಳ್ಳಾರಿ ನಗರದ ಕೌಲ್ ಬಜಾರ್, ಬ್ರೂಸ್​ಪೇಟೆ ಮತ್ತು ಗಾಂಧಿನಗರ ಠಾಣೆ ವ್ಯಾಪ್ತಿಯ ಐದಾರು ಕಡೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಹೈದರಾಬಾದ್​ನ​​​ ಎನ್​ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ ಕರೆದೊಯ್ದಿದ್ದರು.

ಇದಕ್ಕೂ ಮುನ್ನ ಎರಡು ದಿನಗಳ ಹಿಂದಷ್ಟೇ, ಕೈದಿಗಳನ್ನು ಸಹಕೈದಿಗಳ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರಚೋದಿಸುತ್ತಿದ್ದ ಉಗ್ರ ಸಂಘಟನೆ ಲಷ್ಕರ್​​ ಎ ತೊಯ್ಬಾದ ವಿರುದ್ಧ ಕಾರ್ಯಾಚರಣೆ ಕೈಯಗೊಂಡಿದ್ದ ಎನ್ಐಎ ಕರ್ನಾಟಕ ಸೇರಿದಂತೆ ವಿವಿಧೆಡೆ ದಾಳಿ ನಡೆಸಿತ್ತು. ತಲೆಮರೆಸಿಕೊಂಡಿರುವ ಓರ್ವ ಆರೋಪಿತನ ಮನೆ ಸಹಿತ ಆರು ಸ್ಥಳಗಳಲ್ಲಿ ಎನ್ಐಎ ತೀವ್ರ ಶೋಧ ನಡೆಸಿತ್ತು. ಈ ಎನ್​ಐಎ ದಾಳಿ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕು.

ಇದನ್ನೂ ಓದಿ: ನಕಲಿ ನೋಟು ಜಾಲದ ವಿರುದ್ಧ ಎನ್ಐಎ ಕಾರ್ಯಾಚರಣೆ: ಕರ್ನಾಟಕ, ಮಹಾರಾಷ್ಟ್ರ, ಯುಪಿ ಸೇರಿ ಹಲವೆಡೆ ಶೋಧ

ನಕಲಿ ನೋಟು ವಿರುದ್ಧವು ಎನ್ಐಎ ಕಾರ್ಯಚರಣೆ: ರಾಷ್ಟ್ರೀಯ ತನಿಖಾ ದಳ ಇಂದು ನಕಲಿ ಭಾರತೀಯ ನೋಟು ಚಲಾವಣೆ ದಂಧೆ ವಿರುದ್ಧ ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವೆಡೆ ದಾಳಿ ನಡೆಸಿದೆ. ಮುಂಬೈ, ಉತ್ತರ ಪ್ರದೇಶ, ಕರ್ನಾಟಕದ ಬಳ್ಳಾರಿ, ಬೆಂಗಳೂರಿನ ಪುಲಿಕೇಶಿ ನಗರ, ಜೆ ಸಿ ನಗರ, ಫ್ರೇಜರ್ ಟೌನ್ ಸೇರಿದಂತೆ ವಿವಿಧೆಡೆ ಎನ್ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ.

Last Updated : Dec 18, 2023, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.