ETV Bharat / state

ನಾಲ್ಕು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ಚಾಲನೆ

author img

By

Published : Feb 6, 2020, 10:00 AM IST

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಹೆಚ್ಆರ್) ಆವರಣದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ - 2020ಕ್ಕೆ ಚಾಲನೆ ನೀಡಿದ್ದು, ನಾಲ್ಕು ದಿನಗಳ ವರೆಗೂ ಮೇಳ ನಡೆಯಲಿದೆ.

National Horticultural Fair
ರಾಷ್ಟ್ರೀಯ ತೋಟಗಾರಿಕಾ ಮೇಳ

ಯಲಹಂಕ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಹೆಚ್ಆರ್) ಆವರಣದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ-2020ಕ್ಕೆ ಚಾಲನೆ ನೀಡಲಾಗಿದೆ. ನಾಲ್ಕು ದಿನಗಳ ವರೆಗೂ ಈ ಮೇಳ ನಡೆಯಲಿದೆ.

ಪ್ರಗತಿಪರ ರೈತರು, ಮತ್ತು ಕೃಷಿ ವಿದ್ಯಾರ್ಥಿಗಳು ಮೇಳಕ್ಕೆ ಭೇಟಿ ನೀಡಿ ತೋಟಗಾರಿಕೆ ಜ್ಞಾನ ಭಂಡಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಐಐಹೆಚ್ಆರ್ ಸಂಸ್ಥೆಯ 54 ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ 300 ಪ್ರಭೇದಗಳು ಮತ್ತು 800 ತಂತ್ರಜ್ಞಾನಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಇದರ ಜೊತೆಗೆ ಖಾಸಗಿ ಕಂಪನಿಗಳ 240 ಮಳಿಗೆಗಳು ತೋಟಗಾರಿಕಾ ಮೇಳದಲ್ಲಿ ರೈತರ ಆಕರ್ಷಣೆಯಾಗಿವೆ.

ರಾಷ್ಟ್ರೀಯ ತೋಟಗಾರಿಕಾ ಮೇಳ 2020

ಇನ್ನು ಪ್ರಧಾನಿ ಮೋದಿ ಹೇಳಿದಂತೆ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕೆನ್ನುವ ಆಶಯ ಸಹ ಮೇಳದಲ್ಲಿತ್ತು. ಹೆಚ್ಚಿನ ಇಳುವರಿ ಪ್ರಭೇದಗಳು, ಕೀಟ ಮತ್ತು ರೋಗ ಸಹಿಷ್ಣು ಪ್ರಭೇದಗಳು, ಕೀಟ ಆಕರ್ಷಣ ಬಲೆಗಳು, ಜೈವಿಕ ಕೀಟನಾಶಕಗಳು ರೈತರನ್ನು ಸಾಕಷ್ಟು ಆಕರ್ಷಿಸಿದವು.

ಇನ್ನು ಸ್ಥಳದಲ್ಲಿಯೇ ಇದ್ದ ಕೃಷಿ ವಿಜ್ಞಾನಿಗಳು ರೈತರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ರೈತರಿಗೆ ತೋಟಗಾರಿಕಾ ಕ್ಷೇತ್ರದಲ್ಲಿನ ಹೊಸ ಹೊಸ ತಂತ್ರಜ್ಞಾನಗಳ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.