ETV Bharat / state

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾರಿ ಜನಸ್ತೋಮ: ಡಿಕೆಶಿ ಪರ ಹೋರಾಟ - ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ನಗರದಲ್ಲಿ ಇಂದು ನಡೆದ ಹೋರಾಟ ಯಶಸ್ಸು ಕಂಡಿದೆ. ನಿರೀಕ್ಷೆಗೂ ಮೀರಿದ ಜನ ಬೆಂಬಲ ದೊರೆತಿದೆ.

ಡಿಕೆಶಿ ಪರ ಹೋರಾಟಕ್ಕೆ ಆರಂಭಿಕ ಯಶಸ್ಸು
author img

By

Published : Sep 11, 2019, 6:09 PM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಖಂಡಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಭಾರಿ ಬೆಂಬಲ ದೊರೆತಿದೆ.

ನ್ಯಾಷನಲ್ ಕಾಲೇಜು ಆವರಣ ಸಂಪೂರ್ಣ ಡಿಕೆಶಿ ಅಭಿಮಾನಿಗಳಿಂದ ತುಂಬಿ ತುಳುಕಿತ್ತು. ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಆಗಮಿಸಲು ಆರಂಭಿಸಿದ ಅಭಿಮಾನಿಗಳು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು.

National college grounds
ಡಿಕೆಶಿ ಪರ ಹೋರಾಟಕ್ಕೆ ಆರಂಭಿಕ ಯಶಸ್ಸು

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ಮೆರವಣಿಗೆಯ ಆರಂಭಿಕ ಭಾಗದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಜನಸ್ತೋಮವನ್ನು ಉದ್ದೇಶಿಸಿ ತಮ್ಮ ಭಾಷಣವನ್ನು ಮಾಡಿದ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಪರ ಹೋರಾಟಕ್ಕೆ ಆರಂಭಿಕ ಯಶಸ್ಸು

ಕಾಲೇಜು ಆವರಣದಲ್ಲಿ ಡಿಕೆಶಿ ಎಂಬ ಹೆಸರಿನ ಟೋಪಿ ಹಾಗೂ ಅವರ ಭಾವಚಿತ್ರದ ಮುಖವಾಡ ಧರಿಸಿದ ಜನರು ಗಮನಸೆಳೆದರು. ಮೆರವಣಿಗೆಯಾದ್ಯಂತ ಡಿ.ಕೆ. ಶಿವಕುಮಾರ್ ಅವರ ಜಯಘೋಷಗಳನ್ನು ಮೊಳಗಿಸಿದ್ರು. ಈ ವೇಳೆ ಬೃಹತ್ ಬಾವುಟವನ್ನು ಪ್ರದರ್ಶಿಸಿ ಅಭಿಮಾನಿಗಳು ಅಭಿಮಾನ ವ್ಯಕ್ತಪಡಿಸಿದರು.

ಕೆಲವರ ಅನುಪಸ್ಥಿತಿ:

ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ಕರವೇ ನಾರಾಯಣ ಗೌಡ ಕೆಲ ಸಮಯ ಪ್ರತಿಭಟನೆ ವೇಳೆ ಕಾಣಿಸಿಕೊಂಡರು.

Intro:newsBody:ಭಾರಿ ಜನಸ್ತೋಮಕ್ಕೆ ಸಾಕ್ಷಿಯಾದ ನ್ಯಾಷನಲ್ ಕಾಲೇಜು ಮೈದಾನ, ಡಿಕೆಶಿ ಪರ ಹೋರಾಟಕ್ಕೆ ಸಿಕ್ಕ ಆರಂಭಿಕ ಯಶಸ್ಸು

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಖಂಡಿಸಿ ನಗರದಲ್ಲಿ ಆರಂಭವಾದ ಪ್ರತಿಭಟನಾ ಮೆರವಣಿಗೆಗೆ ನ್ಯಾಷನಲ್ ಕಾಲೇಜು ಆವರಣದಲ್ಲಿ ಭರ್ಜರಿ ಯಶಸ್ಸು ಲಭಿಸಿತು.
ಒಂದು ಹಂತದಲ್ಲಿ ನ್ಯಾಷನಲ್ ಕಾಲೇಜು ಆವರಣ ಸಂಪೂರ್ಣ ಡಿಕೆಶಿ ಅಭಿಮಾನಿಗಳಿಂದ ತುಂಬಿ ತುಳುಕಿತು. ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಆಗಮಿಸಲು ಆರಂಭಿಸಿದ ಅಭಿಮಾನಿಗಳು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಡಿಕೆ ಶಿವಕುಮಾರ್ ಬಂಧನ ಖಂಡಿಸಿ ನಗರದಲ್ಲಿ ಇಂದು ನಡೆದ ಹೋರಾಟ ಅತ್ಯಂತ ಯಶಸ್ಸು ಕಂಡಿದ್ದು ನಿರೀಕ್ಷೆಗೂ ಮೀರಿದ ಜನಬೆಂಬಲವನ್ನು ಪಡೆದಿದೆ. ನ್ಯಾಷನಲ್ ಕಾಲೇಜು ಆವರಣದಲ್ಲಿ ಆರಂಭದಲ್ಲಿ ಸಿಕ್ಕ ಯಶಸ್ಸು ಕೊನೆಯವರೆಗೂ ಉಳಿದುಕೊಳ್ಳುವ ಮೂಲಕ ಪ್ರತಿಭಟನೆ ಮೆರವಣಿಗೆ ತನ್ನ ಆಯೋಜನೆ ಉದ್ದೇಶವನ್ನು ಈಡೇರಿಸಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ರಾಮಲಿಂಗರೆಡ್ಡಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ಮೆರವಣಿಗೆ ಆರಂಭಿಕ ಭಾಗದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬಾರಿ ಜನಸ್ತೋಮವನ್ನು ಉದ್ದೇಶಿಸಿ ತಮ್ಮ ಭಾಷಣವನ್ನು ಮಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಷನಲ್ ಕಾಲೇಜು ಆವರಣದಲ್ಲಿ ಡಿಕೆಶಿ ಎಂಬ ಹೆಸರನ್ನು ಟೋಪಿ ಹಾಗೂ ಅವರ ಭಾವಚಿತ್ರದ ಮುಖವಾಡ ಹಾಕಿದವರು ಗಮನಸೆಳೆದರು. ಆರಂಭದಿಂದ ಕೊನೆಯವರೆಗೂ ಡಿಕೆ ಶಿವಕುಮಾರ್ ಅವರ ಜಯ ಕೋಶಗಳನ್ನು ಮೊಳಗಿಸುತ್ತಾ ಬೃಹತ್ ಬಾವುಟವನ್ನು ಪ್ರದರ್ಶಿಸಿ ಅಭಿಮಾನಿಗಳು ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಆರಂಭದಲ್ಲಿ ಅಭಿಮಾನಿಗಳ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಗೋಚರಿಸುತ್ತಿದ್ದರು ಮೆರವಣಿಗೆ ಆರಂಭವಾಗುವ ಹೊತ್ತಿಗೆ ಭಾರಿ ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ದರು. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಈಗ ಪ್ರತಿಭಟನಾ ಮೆರವಣಿಗೆ ಮುಕ್ತಾಯಗೊಂಡಿದ್ದು ಆರಂಭಿಕ ಯಶಸ್ಸಿನ ಅಲೆ ಒಟ್ಟಾರೆ ಯಶಸ್ಸಿಗೆ ಪೂರಕವಾಗಿ ಲಭಿಸಿದೆ.
ಕೆಲವರ ಅನುಪಸ್ಥಿತಿ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ಯಾವೊಬ್ಬ ನಾಯಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ಕರವೆ ನಾರಾಯಣ ಗೌಡ ಕೆಲ ಸಮಯ ಇದ್ದರು. ಸ್ವಾಮೀಜಿಗಳು ಯಾರೂ ಆಗಮಿಸಲಿಲ್ಲ.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.