ETV Bharat / state

ಮೋದಿಯ 'ಎಕ್ಸಾಂ ವಾರಿಯರ್ಸ್' ಪುಸ್ತಕ ಶಾಲೆಗಳಿಗೆ ಹಂಚಲು ಸಚಿವ ಸುರೇಶ್ ಕುಮಾರ್ ಚಿಂತನೆ

ಎಸ್​ಎಸ್​ಎಲ್​ಸಿ ಪರೀಕ್ಷೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿದ್ಯಾರ್ಥಿಗಳೊಂದಿಗೆ ನಡೆಸಿದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣ ಸಚಿವ ಸುರೇಶ್​ ಕುಮಾರ್ ನಗರದ ಕೆಎಲ್​ಇ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ವೀಕ್ಷಿಸಿದರು.

Suresh Kumar
ಸುರೇಶ್ ಕುಮಾರ್
author img

By

Published : Jan 20, 2020, 5:58 PM IST

ಬೆಂಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳೊಂದಿಗೆ ಇಂದು ನಡೆಸಿದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ನಗರದ ಕೆಎಲ್​ಇ ಇಂಟರ್​ನ್ಯಾಷನಲ್ ಕಾಲೇಜಿನಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ವೀಕ್ಷಿಸಿದರು.

ಮೋದಿ ಬರೆದ ಎಕ್ಸಾಂ ವಾರಿಯರ್ಸ್​​ ಪುಸ್ತಕವನ್ನು ಶಾಲೆಗಳಿಗೆ ಹಂಚಲು ಶಿಕ್ಷಣ ಸಚಿವರ ಚಿಂತನೆ

ನೇರಪ್ರಸಾರದ ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿ ಬರೆದಿರುವ 'ಎಕ್ಸಾಂ ವಾರಿಯರ್ಸ್' ಪುಸ್ತಕವನ್ನು ಈಗಾಗಲೇ ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಇದನ್ನು ರಾಜ್ಯದ 53,000 ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಹೇಗೆ ತಲುಪಿಸಬೇಕು ಎಂಬುದರ ಕುರಿತು ಚಿಂತನೆ ಮಾಡುತ್ತೇವೆ ಎಂದರು.

ದೆಹಲಿಯ ತಲಕಟೋರಾ ಮೈದಾನದಲ್ಲಿ ಬೆಳಗ್ಗೆ 11 ಗಂಟೆಯಿಂದ ಒಂದು ಗಂಟೆಯವರೆಗೆ ನಡೆದ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ 2 ಸಾವಿರ ವಿದ್ಯಾರ್ಥಿಗಳು ನೇರವಾಗಿ ಭಾಗವಹಿಸಿದ್ದರು. ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹೇಗೆ ಆತ್ಮವಿಶ್ವಾಸದಿಂದ ಎದುರಿಸಬೇಕು, ವಿಫಲತೆಯಲ್ಲೂ ಹೇಗೆ ಪ್ರಯತ್ನ ಮುಂದುವರಿಸಿ ಗೆಲುವು ಸಾಧಿಸಬೇಕು ಎಂಬುದನ್ನು ಪ್ರಧಾನಿ ಸಲಹೆ ನೀಡಿದ್ರು. ಇದನ್ನ ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳು ವಿಡಿಯೋ ಸ್ಟ್ರೀಮಿಂಗ್ ಮೂಲಕ ವೀಕ್ಷಿಸಿದರು.

ಸತತ ಮೂರನೇ ಬಾರಿಗೆ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಈ ಚರ್ಚೆ ನಡೆಸಿದರು. ಇದೇ ಮೈದಾನದಲ್ಲಿ 2018 ರ ಫೆಬ್ರುವರಿ 16 ರಂದು ಮೊದಲ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆದಿತ್ತು. ಪರೀಕ್ಷೆಯ ಸವಾಲುಗಳನ್ನು ಹೇಗೆ ನಿಭಾಯಿಸುವುದು, ಒತ್ತಡ ನಿಯಂತ್ರಣ, ಪೋಷಕರು ಶಿಕ್ಷಕರಿಂದ ಸಹಕಾರ, ಜೀವನದ ಗುರಿ ಉದ್ದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ರು. ಈ ಬಾರಿ ಕರ್ನಾಟಕದಿಂದ 42 ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷ.

ಇನ್ನು, ನೇರಪ್ರಸಾರದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು, ಕನ್ನಡದಲ್ಲಿ ಮೋದಿ ಭಾಷಣದ ಸಾರಾಂಶ ಹೇಳಿದರು. ಪರೀಕ್ಷೆಗೆ 66 ದಿನಗಳಿದ್ದು, ಆತ್ಮವಿಶ್ವಾಸದಿಂದ ತಯಾರಿ ನಡೆಸಿ, ಆತಂಕ ಬೇಡ, ಆರೋಗ್ಯವನ್ನು ಕಾಪಾಡಿಕೊಂಡು ಪರೀಕ್ಷೆ ಬರೆಯಿರಿ. ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ ಎಂದು ಕಿವಿಮಾತು ಹೇಳಿದರು.

Intro:ಪ್ರಧಾನಿ ಮೋದಿಯವರ ಎಕ್ಸಾಂ ವಾರಿಯರ್ಸ್ ಪುಸ್ತಕ ಸರ್ಕಾರಿ ಶಾಲೆಗಳಿಗೆ ಹಂಚಲು ಕ್ರಮ- ಸುರೇಶ್ ಕುಮಾರ್

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನಲೆ, ಪ್ರಧಾನಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳೊಂದಿಗೆ ನಡೆಸಿದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರಾಥಮಿಕ ಫ್ರೌಡ ಶಿಕ್ಷಣ ಸಚಿವ ಸುರೇಶ ಕುಮಾರ್ ನಗರದ ಕೆ ಎಲ್ ಇ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ವೀಕ್ಷಿಸಿದರು. ನೇರಪ್ರಸಾರದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್, ಪ್ರಧಾನಿ ಮೋದಿ ಬರೆದ ಎಕ್ಸಾಂ ವಾರಿಯರ್ಸ್ ಪುಸ್ತಕವನ್ನು ಈಗಾಗಲೇ ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಇದನ್ನು ರಾಜ್ಯದ 53,000 ಸರ್ಕಾರಿ, ಅನುದಾನಿತ, ಹಾಗೂ ಖಾಸಗಿ ಶಾಲೆಗಳಿಗೆ ಹೇಗೆ ತಲುಪಿಸಬೇಕು ಎಂಬುದನ್ನು ಚಿಂತನೆ ಮಾಡುತ್ತೇವೆ ಎಂದರು.
ದೆಹಲಿಯ ತಲ್ಕಾಟೋರ ಮೈದಾನದಲ್ಲಿ ಬೆಳಗ್ಗೆ 11 ಗಂಟೆಯಿಂದ ಒಂದು ಗಂಟೆಯವರೆಗೆ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ 2 ಸಾವಿರ ವಿದ್ಯಾರ್ಥಿಗಳು ನೇರವಾಗಿ ಭಾಗವಹಿಸಿದ್ದರು. ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹೇಗೆ ಆತ್ಮವಿಶ್ವಾಸದಿಂದ ಎದುರಿಸಬೇಕು, ವಿಫಲತೆಯಲ್ಲೂ ಹೇಗೆ ಪ್ರಯತ್ನ ಮುಂದುವರಿಸಿ ಸಫಲ ಸಾಧಿಸಬೇಕು ಎಂಬುದನ್ನು ಪ್ರಧಾನಿ ಸಲಹೆ ನೀಡಿದರು. ಇದನ್ನ ದೇಶಾದ್ಯಂತ ಕೋಟ್ಯಾಂತರ ವಿದ್ಯಾರ್ಥಿಗಳು ವೀಡಿಯೋ ಸ್ಟ್ರೀಮಿಂಗ್ ಮೂಲಕ ವೀಕ್ಷಿಸಿದರು. ಸತತ ಮೂರನೇ ಬಾರಿಗೆ, ಮೂರನೇ ವರ್ಷ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಈ ಚರ್ಚೆ ನಡೆಸಿದರು. . ಇದೇ ಮೈದಾನದಲ್ಲಿ 2018 ರ ಫೆಬ್ರವರಿ 16ರಂದು ಮೊದಲ ಪರೀಕ್ಷಾ ಪೆ ಚರ್ಚಾ ನಡೆದಿತ್ತು. ಪರೀಕ್ಷೆಯ ಸವಾಲುಗಳನ್ನು ಹೇಗೆ ನಿಭಾಯಿಸುವುದು , ಒತ್ತಡ ನಿಯಂತ್ರಣ, ಪೋಷಕರು ಶಿಕ್ಷಕರಿಂದ ಸಹಕಾರ, ಜೀವನದ ಗುರಿ, ಉದ್ದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ರು. ಕರ್ನಾಟಕದಿಂದ ೪೨ ವಿದ್ಯಾರ್ಥಿಗಳು ಭಾಗವಹಿಸಿರೋದು ವಿಶೇಷವಾಗಿದೆ. ಇನ್ನು ನೇರಪ್ರಸಾರದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್ ಕನ್ನಡದಲ್ಲಿ ಮೋದಿ ಭಾಷಣದ ಸಾರಾಂಶ ಹೇಳಿದರು. ಪರೀಕ್ಷೆಗೆ 66 ದಿನಗಳಿದ್ದು, ಆತ್ಮವಿಶ್ವಾಸದಿಂದ ತಯಾರಿ ನಡೆಸಿ. ಆತಂಕ ಬೇಡ, ಆರೋಗ್ಯವನ್ನು ಕಾಪಾಡಿಕೊಂಡು ಪರೀಕ್ಷೆ ಬರೆಯಿರಿ. ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ ಎಂದು ಕಿವಿಮಾತು ಹೇಳಿದರು.

ಬೈಟ್- ಸುನೀಲ್ ಕುಮಾರ್, ವಿದ್ಯಾರ್ಥಿ.
ಬೈಟ್- ಯಾಮಿನಿ, ವಿದ್ಯಾರ್ಥಿನಿ
ಬೈಟ್- ಸುರೇಶ್ ಕುಮಾರ್, ಸಚಿವರು.

ಸೌಮ್ಯಶ್ರೀ
Kn_bng_01_pareekshape_charcha_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.