ETV Bharat / state

ಡ್ರಾಪ್ ಕೊಡುವ ನೆಪದಲ್ಲಿ ದರೋಡೆ: 6 ಮಂದಿ ಆರೋಪಿಗಳ ಬಂಧನ​​​​​​ - 6 ಜನ ಕುಖ್ಯಾತ ದರೋಡೆಕೋರ ಬಂಧನ

ಪ್ರಯಾಣಿಕರಿಗೆ ಡ್ರಾಪ್ ಕೊಡುವ ನೆಪದಲ್ಲಿ ದರೋಡೆ ಮಾಡಿದ್ದ 6 ಜನ ಕುಖ್ಯಾತ ದರೋಡೆಕೋರರನ್ನು ನಂದಿನಿ‌ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

Nandini layout Robbery accused arrest,6 ಜನ ಕುಖ್ಯಾತ ದರೋಡೆಕೋರರು ಅರೆಸ್ಟ್
6 ಜನ ಕುಖ್ಯಾತ ದರೋಡೆಕೋರರು ಅರೆಸ್ಟ್
author img

By

Published : Mar 7, 2020, 11:31 PM IST

ಬೆಂಗಳೂರು: ಪ್ರಯಾಣಿಕರಿಗೆ ಡ್ರಾಪ್ ಕೊಡುವ ನೆಪದಲ್ಲಿ ದರೋಡೆ ಮಾಡಿದ್ದ 6 ಜನ ಕುಖ್ಯಾತ ದರೋಡೆಕೋರರನ್ನು ನಂದಿನಿ‌ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

6 ಜನ ಕುಖ್ಯಾತ ದರೋಡೆಕೋರರು ಅರೆಸ್ಟ್

ಸುನಿಲ್ ಕುಮಾರ್, ಅಭಿಲಾಶ್, ರಂಜನ್, ಸುದೀಪ್, ರೋಹಿತ್, ಹರೀಶ್ ಬಂಧಿತ ಆರೋಪಿಳು. ಸುಮನ​ಹಳ್ಳಿ ಬಸ್ ನಿಲ್ದಾಣ ಬಳಿ ಪ್ರಯಾಣಿಕರನ್ನು ಕಾರಿಗೆ ಹತ್ತಿಸಿಕೊಂಡು ಲಗ್ಗೆರೆ ಬ್ರಿಡ್ಜ್ ಬಳಿ ಬರುವಾಗ ಪ್ರಯಾಣಿಕರನ್ನು ಬೆದರಿಸಿ 19 ಸಾವಿರ ರೂ. ಹಣ ಸುಲಿಗೆ ಮಾಡಿದ ಬಳಿಕ ಕಾರಿನಿಂದ ಆಚೆ ತಳ್ಳಿ ಪರಾರಿಯಾಗಿದ್ದರು.

ಈ ಸಂಬಂಧ ನಂದಿನಿ‌ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಂದು ಕಾರು, 3 ದ್ವಿಚಕ್ರ ವಾಹನ, ಮೊಬೈಲ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ 2 ದರೋಡೆ, 2 ದ್ವಿಚಕ್ರ ವಾಹನ ಕಳವು ಪ್ರಕರಣ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.