ETV Bharat / state

ದೇಶದ ಮೆಟ್ರೋ ಇತಿಹಾಸದಲ್ಲಿ ಹೊಸ ಮೈಲಿಗಲ್ಲು.. ಎಂ. ಜಿ ರಸ್ತೆಯ ನಿಲ್ದಾಣದಲ್ಲಿ 5ಜಿ ನೆಟ್​ವರ್ಕ್​ ಪ್ರಾಯೋಗಿಕ ಪರೀಕ್ಷೆ ಯಶಸ್ವಿ..

ಟ್ರಾಯ್ ಸಂಸ್ಥೆಯು ದೇಶಾದ್ಯಂತ ಸರ್ಕಾರದ ಮೂಲ ಸೌಕರ್ಯ ಇರುವ ಕೆಲವು ವಿಮಾನ ನಿಲ್ದಾಣ, ಬಂದರು, ರೈಲ್ವೆ ನಿಲ್ದಾಣ ಹಾಗೂ ಮೆಟ್ರೋ ಮೊದಲಾದ ಕಡೆಗಳಲ್ಲಿ 5ಜಿ ನೆಟ್​ವರ್ಕ್​ ಕಾರ್ಯನಿರ್ವಹಿಸುವಿಕೆ ಬಗ್ಗೆ ಪೈಲಟ್ ಯೋಜನೆ ಕೈಗೆತ್ತಿಕೊಂಡಿದೆ.

ಮೆಟ್ರೊ ನಿಲ್ದಾಣ
ಮೆಟ್ರೊ ನಿಲ್ದಾಣ
author img

By

Published : Jul 22, 2022, 9:33 PM IST

ಬೆಂಗಳೂರು: ದೇಶದ ಮೆಟ್ರೊ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೆಲಿಕಾಮ್ ನಿಯಂತ್ರಣ ಪ್ರಾಧಿಕಾರದ ಸೂಚನೆ ಮೇರೆಗೆ 5ಜಿ ನೆಟ್​ವರ್ಕ್​ ಅಳವಡಿಕೆಯ ಪೈಲಟ್ ಪ್ರಾಜೆಕ್ಟ್​ ಪರೀಕ್ಷೆ ಯಶಸ್ವಿಯಾಗಿದೆ ಎಂದು ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ.

ಎಂ. ಜಿ ರಸ್ತೆಯ ನಿಲ್ದಾಣದಲ್ಲಿ 5ಜಿ ನೆಟ್​ವರ್ಕ್​ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ಈ ಒಂದು ನಿಲ್ದಾಣದಲ್ಲಿ ಯಶಸ್ವಿಯಾದರೆ ಶೀಘ್ರದಲ್ಲೇ ಮೆಟ್ರೊ ರೈಲ್ವೆ ನಿಲ್ದಾಣದಲ್ಲಿ 5 ಜಿ ಸೇವೆ ಲಭ್ಯವಾಗಲಿದೆ. ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಮೊಬೈಲ್ ನೆಟ್​ವರ್ಕ್​ ವೇಗದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದೇವೆ ಎಂದು ತಿಳಿಸಿದ್ದಾರೆ.

ಎಂ. ಜಿ ರಸ್ತೆಯ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ರಿಲಯನ್ಸ್ ಜಿಯೋ 5 ಜಿ ನೆಟ್​ವರ್ಕ್​ 200 ಮೀಟರ್ ವ್ಯಾಸದಲ್ಲಿ ಲಭ್ಯವಾಗಿರುವಂತೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಈ ನೆಟ್​ವರ್ಕ್​ನಲ್ಲಿ 1.45 ಜಿ.ಬಿ.ಪಿ.ಎಸ್ ಡೌನ್​ಲೋಡ್​ ವೇಗ ಹಾಗೂ 65 ಎಂ.ಬಿ.ಪಿ.ಎಸ್ ಅಪ್ಲೋ​ಡ್ ವೇಗ ದಾಖಲಾಗಿದೆ. 4ಜಿ ನೆಟ್​ವರ್ಕ್​ಗಿಂತ 50 ಪಟ್ಟು ವೇಗವನ್ನು ಹೊಂದಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.

5ಜಿ ನೆಟ್​ವರ್ಕ್
5ಜಿ ನೆಟ್​ವರ್ಕ್

ಟ್ರಾಯ್​ನಿಂದ ಪೈಲೆಟ್ ಯೋಜನೆ: ಟ್ರಾಯ್ ಸಂಸ್ಥೆಯು ದೇಶಾದ್ಯಂತ ಸರ್ಕಾರದ ಮೂಲ ಸೌಕರ್ಯ ಇರುವ ಕೆಲವು ವಿಮಾನ ನಿಲ್ದಾಣ, ಬಂದರು, ರೈಲ್ವೆ ನಿಲ್ದಾಣ ಹಾಗೂ ಮೆಟ್ರೋ ಮೊದಲಾದ ಕಡೆಗಳಲ್ಲಿ 5ಜಿ ನೆಟ್​ವರ್ಕ್​ ಕಾರ್ಯನಿರ್ವಹಿಸುವಿಕೆ ಬಗ್ಗೆ ಪೈಲಟ್ ಯೋಜನೆ ಕೈಗೆತ್ತಿಕೊಂಡಿದೆ. ಈ ಪೈಕಿ ನಮ್ಮ ಮೆಟ್ರೋ ಎಂ.ಜಿ.ರಸ್ತೆ ನಿಲ್ದಾಣದಲ್ಲೂ 5ಜಿ ನೆಟ್​ವರ್ಕ್​ ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು ಎಂದಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಕೆಲಸ: ಕಳೆದ ಎರಡು ತಿಂಗಳಿನಿಂದ ಈ ಮೆಟ್ರೋ ಸ್ಟೇಷನ್​ನಲ್ಲಿ 5ಜಿ ನೆಟ್​ವರ್ಕ್ ಅಳವಡಿಸುವ ತಾಂತ್ರಿಕ ಕೆಲಸಗಳು ನಡೆಯುತ್ತಿತ್ತು. ಈಗ ಅದು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿರುವುದು ಕಂಡು ಬಂದಿದೆ ಎಂದು ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಓದಿ: ಪಕ್ಷದಲ್ಲಿ ಸಿಎಂ ಹುದ್ದೆಗೆ ಪೈಪೋಟಿ ನಡೆಯುತ್ತಿರುವುದು ಅಪ್ರಸ್ತುತ: ಸತೀಶ್​ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.