ETV Bharat / state

ನಲಪಾಡ್ ಸ್ನೇಹಿತರಿಂದ ಪೊಲೀಸ್​​ ಠಾಣೆ ಎದುರು ಹೈಡ್ರಾಮಾ! - ಕಾರು ಆಕ್ಸಿಡೆಂಟ್​​

ಶಾಂತಿನಗರ ಶಾಸಕ ಹ್ಯಾರಿಸ್​​ ಪುತ್ರ ನಲಪಾಡ್​ ಕಾರು ಅಪಘಾತ ಪ್ರಕರಣ ಸಂಬಂಧ ಗಾಯಾಳು ಪ್ರಫುಲ್ ಇಂದು ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ.

nalpad car accident case
ಪೊಲೀಸ್​​ ಠಾಣೆ ಎದುರು ಹೈಡ್ರಾಮಾ
author img

By

Published : Feb 12, 2020, 3:26 PM IST

ಬೆಂಗಳೂರು: ಶಾಸಕ ಹ್ಯಾರಿಸ್​​ ಪುತ್ರ ನಲಪಾಡ್​ ಕಾರು ಅಪಘಾತ ಪ್ರಕರಣ ಸಂಬಂಧ ಗಾಯಾಳು ಪ್ರಫುಲ್ ಇಂದು ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ.

ಮೇಖ್ರಿ ಸರ್ಕಲ್ ಬಳಿ ಶಾಸಕ ಹ್ಯಾರಿಸ್​​ ಪುತ್ರ ನಲಪಾಡ್ ‌ಮಾಡಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಗೆ ಅಪಘಾತಕ್ಕೆ ಒಳಗಾದ ಗಾಯಾಳು ಪ್ರಫುಲ್ ಆಗಮಿಸಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆ್ಯಕ್ಸಿಡೆಂಟ್ ಆದ ದಿನ ಕಾಲಿನ ಮೂಳೆ ಮುರಿತದಿಂದ ರಾಮಯ್ಯ ಆಸ್ಪತ್ರೆಗೆ ಪ್ರಫುಲ್​​ ಅವರನ್ನ ದಾಖಲಿಸಲಾಗಿತ್ತು. ಆದರೆ, ನಿನ್ನೆ ನಲಪಾಡ್​​​ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ ಕಾರಣ ಇಂದು ಪ್ರಫುಲ್​​​​ ಪೊಲೀಸರಿಗೆ ಸ್ಟೇಟ್​ಮೆಂಟ್​​​ ನೀಡಲು ಆಗಮಿಸಿದ್ದರು.

ಪೊಲೀಸ್​​ ಠಾಣೆ ಎದುರು ಹೈಡ್ರಾಮಾ

ಆದರೆ, ಆಶ್ಚರ್ಯ ಎಂದರೆ ಸ್ಮೇಟ್ಮೆಂಟ್​ ನೀಡಲು ಬಂದವರ ಜೊತೆ ನಲಪಾಡ್ ಸ್ನೇಹಿತರು ಕೂಡ ಆಗಮಿಸಿ ಹೇಳಿಕೆ ಕೊಟ್ಟು ವಾಪಸ್​ ಆಗುವವರೆಗೆ ಬೆಂಗಾವಲಾಗಿ ನಿಂತು ಮಾಧ್ಯಮ ಜೊತೆ ಮಾತಾನಾಡದ ಹಾಗೆ ತಡೆದು ಪ್ರಫುಲ್​ ಅವರನ್ನ ಕಳುಹಿಸಿ ಕೊಟ್ಟರು. ಹಾಗೆ ನಲಪಾಡ್​​ ಸ್ನೇಹಿತರು ಠಾಣೆ ಎದುರು ಹೈಡ್ರಾಮಾ ಕೂಡ ಮಾಡಿದ್ರು. ಮೊದಲು ಪ್ರತಿಕ್ರಿಯೆ ನೀಡ್ತಿನಿ ಅಂದಿದ್ದ ಗಾಯಾಳು ಪ್ರಫುಲ್​​, ನಲಪಾಡ್ ಟೀಮ್​​ ಜೊತೆ ಠಾಣೆಯಿಂದ ಹೊರ ಬರ್ತಿದ್ದಂತೆ ಏಕಾಏಕಿ ಹೊರಟು‌ಹೋಗಿದ್ದು ನಲ್ಪಾಡ್ ಸ್ನೇಹಿತರಿಂದ ‌ನಡೀತಾ ಕಾಂಪ್ರಮೈಸ್..? ಅನ್ನೊ ಪ್ರಶ್ನೆ ಮೂಡಿಸಿದೆ.

ಅಷ್ಟು ಮಾತ್ರವಲ್ಲದೇ ನಲಪಾಡ್ ಸ್ನೇಹಿತ ಹುಸೇನ್ ಮಾತನಾಡಿ, ಪ್ರಫುಲ್​​ನ ಎಲ್ಲ ವೈದ್ಯಕೀಯ ಖರ್ಚು- ವೆಚ್ಚ ನೋಡ್ಕೋತ್ತೀವಿ ಅಂದ್ರು. ಕಾರು ಅಪಘಾತವಾದಾಗ 30 ಕಿಲೊಮೀಟರ್ ಸ್ಪೀಡ್​​ನಲ್ಲಿ ಹೋಗಿಲ್ಲ ಎಂದು ಸ್ಟಷ್ಟನೆ ಕೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.