ETV Bharat / state

ಅನರ್ಹರಿಗೆ ಅನ್ಯಾಯವಾಗಲ್ಲ: ಟಿಕೆಟ್​ ಪಕ್ಕಾ ಅನ್ನೋ ಸುಳಿವು ನೀಡಿದ್ರಾ ಕಟೀಲ್​​? - CM B S Yadiyurappa

ಪಕ್ಷದಲ್ಲಿ ಒಬ್ಬರಿಗೆ ಒಂದು ಸ್ಥಾನ ಎನ್ನುವ ನಿಯಮದಂತೆ ಯಡಿಯೂರಪ್ಪನವರು ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟರು. ಹಾಗಾಗಿ ನಾನು ಪಕ್ಷದ ರಾಜ್ಯಾಧ್ಯಕ್ಷನಾದೆ. ಕೆಲವರ ಬದಲಾವಣೆ ಬಳಿಕ ಅವರ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಖಾಲಿ ಸ್ಥಾನಕ್ಕೆ ಸುರಾನಾ ಮತ್ತು ಭಾನುಪ್ರಕಾಶ್ ಅವರನ್ನು ನೇಮಕ ಮಾಡಲಾಯಿತು ಎಂದು ನಳಿನ್​ ಕುಮಾರ್​ ಕಟೀಲ್​ ಹೇಳಿದ್ದಾರೆ. ಇದೇ ವೇಳೆ ಅನರ್ಹ ಶಾಸಕರಿಗೆ ಅನ್ಯಾವಾಗದಂತೆ ನೋಡಿಕೊಳ್ಳುತ್ತೇವೆ ಎನ್ನುವ ಮೂಲಕ ಟಿಕೆಟ್​ ಪಕ್ಕಾ ಅನ್ನೋ ಸುಳಿವನ್ನು ಕಟೀಲ್​ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
author img

By

Published : Oct 3, 2019, 3:24 PM IST

ಬೆಂಗಳೂರು: ಅನರ್ಹ ಶಾಸಕರಿಗೆ ಅನ್ಯಾಯವಾಗದ ರೀತಿಯಲ್ಲಿ ಬಿಜೆಪಿ ನೋಡಿಕೊಳ್ಳಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳುವ ಮೂಲಕ ಅನರ್ಹ ಶಾಸಕರಿಗೆ ಅಥವಾ ಅವರು ಹೇಳಿದವರಿಗೆ ಟಿಕೆಟ್ ಕೊಡುವ ಸುಳಿವನ್ನು ನೀಡಿದ್ದಾರೆ.

ಇಂದು ಸಿಎಂ ಬಿ. ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ಬಿಜೆಪಿ ಅವರು, ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಕೊರತೆ ಇದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ಈ ವೇಳೆ ಪಕ್ಷ ಸಂಘಟನೆ ವಿಚಾರವಾಗಿ, ಮಂಡಲ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಆಯ್ಕೆ ಪ್ರಕ್ರಿಯೆ ಜೊತೆಗೆ 15 ಕ್ಷೇತ್ರಗಳ ಉಪ ಚುನಾವಣೆಗೆ ತಯಾರಿ ಕಾರ್ಯಗಳಿಗೆ ವೇಗ ನೀಡುವ ಕುರಿತು ಮಾತುಕತೆ ನಡೆಸಿದ್ದೇವೆ ಎಂದರು.

ಸಿಎಂ ಬಿ. ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಿಎಸ್​ವೈ ಮಾರ್ಗದರ್ಶನದಲ್ಲಿ ಪಕ್ಷ ನಡೆಯುತ್ತಿದೆ:

ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿಯೇ ಎಲ್ಲವೂ ನಡೆಯುತ್ತಿದೆ. ಅವರ ಅನುಭವ ಮತ್ತು ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮತ್ತು ಉಪಚುನಾವಣೆಗೆ ತಯಾರಿ ನಡೆಯುತ್ತಿದೆ. ಪಕ್ಷದಲ್ಲಿ ಒಬ್ಬರಿಗೆ ಒಂದು ಸ್ಥಾನ ಎನ್ನುವ ನಿಯಮದಂತೆ ಯಡಿಯೂರಪ್ಪನವರು ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟರು. ಹಾಗಾಗಿ ನಾನು ರಾಜ್ಯಾಧ್ಯಕ್ಷನಾದೆ. ಅದೇ ರೀತಿ ಸಿ. ಟಿ. ರವಿ ಸೇರಿದಂತೆ ಇತರರು ತಾವು ಮೊದಲಿಗೆ ವಹಿಸಿಕೊಂಡಿದ್ದ ಜವಾಬ್ದಾರಿಗಳನ್ನು ಬಿಟ್ಟುಕೊಟ್ಟರು. ಆ ಸ್ಥಾನಗಳಿಗೆ ಪಕ್ಷದ ಇತರೆ ಮುಖಂಡರಿಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಖಾಲಿ ಸ್ಥಾನಕ್ಕೆ ಸುರಾನಾ ಮತ್ತು ಭಾನುಪ್ರಕಾಶ್ ನೇಮಕ ಮಾಡಲಾಯಿತು. ಮುಖ್ಯಮಂತ್ರಿ ಅವರ ಕೋರಿಕೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಟೀಲ್​ ಸ್ಪಷ್ಟಪಡಿಸಿದರು.

17 ರಾಜ್ಯಗಳಲ್ಲಿ ನೆರೆಹಾನಿ ಆಗಿದೆ. ಎಲ್ಲವನ್ನೂ ನೋಡಿ ಕರ್ನಾಟಕಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ. ಆದರೂ ತಕ್ಷಣಕ್ಕೆ ರಾಜ್ಯಕ್ಕೆ ಬೇಕಿರುವ ಪರಿಹಾರ ಕಾರ್ಯವನ್ನು ನಮ್ಮ ಸರ್ಕಾರ ಕೊಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ರು.

ಅನರ್ಹರಿಗೆ ಟಿಕೆಟ್ ಪಕ್ಕಾ!

ಅನರ್ಹ ಶಾಸಕರ ವಿಷಯ, ಮುಂದಿನ ಚುನಾವಣೆ ತಯಾರಿ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಚರ್ಚಿಸುತ್ತೇನೆ. ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷರು, ಮುಖ್ಯಮಂತ್ರಿ ಮೂಲಕ ಈ ಬಗ್ಗೆ ತೀರ್ಮಾನದ ಸಂದೇಶ ರವಾನಿಸಲಿದ್ದಾರೆ. ಆದರೆ ಅನರ್ಹರಿಗೆ ಅನ್ಯಾಯ ಆಗದ ರೀತಿ ನಾವು ನೋಡಿಕೊಳ್ಳಲಿದ್ದೇವೆ ಎಂದು ಕಟೀಲ್​ ಅಭಯ ನೀಡಿದ್ದಾರೆ.

ಸಿಎಂ ಒಪ್ಪಿಗೆ ಪಡೆದೇ ಮೇಯರ್ ಅಭ್ಯರ್ಥಿ ಆಯ್ಕೆ

ಬಿಬಿಎಂಪಿ ಮೇಯರ್​​​ ಆಯ್ಕೆ ಮುಖ್ಯಮಂತ್ರಿಗಳ ಒಪ್ಪಿಗೆಯಂತೆ ಆಗಿದೆ. ನಾನು ಮೂರು ಬಾರಿ ಸಭೆ ನಡೆಸಿದ್ದೆ. ನಂತರ ಬಿಎಸ್​ವೈ ಪ್ರತ್ಯೇಕ ಸಭೆ ಕರೆದು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಕೆಲವರಿಗೆ ಜವಾಬ್ದಾರಿ ನೀಡಿದ್ದರು. ನಂತರ ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ಚುನಾವಣೆ ಆಯಿತು ಮತ್ತು ಅಭ್ಯರ್ಥಿ ಆಯ್ಕೆಯಲ್ಲಿ ಅವರ ಸೂಚನೆಯಂತೆ ಸಭೆ ನಡೆಸಿ ಒಮ್ಮತದ ತೀರ್ಮಾನದಿಂದ ಅಭ್ಯರ್ಥಿ ಆಯ್ಕೆ ಮಾಡಲಾಗಿತ್ತು ಎಂದು ನಳಿನ್ ಕುಮಾರ್​ ಹೇಳಿದ್ರು.

ಬಿಎಸ್​​ವೈ ಮುಖ್ಯಮಂತ್ರಿಯಾದ ಕಾಲದಲ್ಲಿ ಬಹುಮತ ಇರಲಿಲ್ಲ. ಕೆಲವರ ಸಹಾಯ ಪಡೆದು ಸರ್ಕಾರ ರಚಿಸಬೇಕಾಯ್ತು. ನಂತರ ರಾಜ್ಯದಲ್ಲಿ ನೆರೆ ಬಂದಿತು, ಸರ್ಕಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವ ಅರ್ಥದಲ್ಲಿ ಸಿಎಂ‌ ತಂತಿ ಮೇಲಿನ ನಡಿಗೆ ಹೇಳಿಕೆ ನೀಡಿದ್ದಾರೆ ಅಷ್ಟೇ. ಎಲ್ಲವನ್ನು ಎದುರಿಸುವ ಶಕ್ತಿ ಅವರಿಗಿದೆ ಎಂದು ತಂತಿ ಮೇಲಿನ ನಡಿಗೆ ಎಂಬ ಸಿಎಂ ಮಾತಿಗೆ ಬಿಜೆಪಿ ರಾಜ್ಯಾಧ್ಯಕ್ಷರು ತೇಪೆ ಹಚ್ಚಿದರು.

Intro:newsBody:ಅನರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ:
ಅನರ್ಹರಿಗೆ ಅಥವಾ ಕುಟುಂಬದವರಿಗೆ ಟಿಕೆಟ್ ಪಕ್ಕಾ ಅಂದ್ರಾ ಕಟೀಲ್?

ಬೆಂಗಳೂರು: ಅನರ್ಹ ಶಾಸಕರಿಗೆ ಅನ್ಯಾಯವಾಗದ ರೀತಿಯಲ್ಲಿ ಬಿಜೆಪಿ ನೋಡಿಕೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳುವ ಮೂಲಕ ಅನರ್ಹರಿಗೆ ಅಥವಾ ಅವರು ಹೇಳಿದವರಿಗೆ ಟಿಕೆಟ್ ಪಕ್ಕಾ ಎನ್ನುವ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು.ಪಕ್ಷ ಹಾಗು ಸರ್ಕಾರದ ನಡುವೆ ಸಮನ್ವಯತೆ ಕೊರತೆ ಇದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಕಟೀಲ್,ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು
ಸೌಜನ್ಯಯುತ ಭೇಟಿ ಮಾಡಿದ್ದೇನೆ ಈ ವೇಳೆ ಪಕ್ಷ ಸಂಘಟನೆ ವಿಚಾರವಾಗಿ, ಮಂಡಲ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಆಯ್ಕೆ ಪ್ರಕ್ರಿಯೆ ಬಗ್ಗೆ ಜೊತೆಗೆ ಮುಂದಿನ 15 ಕ್ಷೇತ್ರಗಳ ಉಪ ಚುನಾವಣೆಗೆ ತಯಾರಿ ಮಾಡುವ ಕಾರ್ಯಗಳಿಗೆ ವೇಗ ನೀಡುವ ಕುರಿತು ಮಾತುಕತೆ ನಡೆಸಿದ್ದೇವೆ ಎಂದರು.

ನೆರೆಯಿಂದ ಸೂರು ಕಳೆದುಕೊಂಡವರಿಗೆ ರಾಜ್ಯದ ಇತಿಹಾಸದಲ್ಲಿ ಈ ರೀತಿ ಪೂರ್ತಿಯಾಗಿ ಪರಿಹಾರ ಕೊಡುವ ಕೆಲಸವನ್ನು ಯಾವ ಮುಖ್ಯಮಂತ್ರಿಗಳು ಮಾಡಿರಲಿಲ್ಲ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಎಸ್ವೈ ಮಾಡಿದ್ದಾರೆ. ಪ್ರಧಾನಮಂತ್ರಿಗಳ ಜೊತೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದ್ದಾರೆ 17 ರಾಜ್ಯಗಳಲ್ಲಿ ನೆರೆಹಾನಿ ಆಗಿದೆ ಎಲ್ಲವನ್ನೂ ನೋಡಿ ಕರ್ನಾಟಕಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು ಪ್ರಧಾನಿಗಳು ನೀಡಿದ್ದಾರೆ ಆದರೂ ತಕ್ಷಣಕ್ಕೆ ರಾಜ್ಯಕ್ಕೆ ಬೇಕಿರುವ ಪರಿಹಾರ ಕಾರ್ಯವನ್ನು ನಮ್ಮ ಸರ್ಕಾರ ಕೊಡುತ್ತಿದೆ ಎಂದರು.

ಮುಂದಿನ ಸಂಘಟನೆ,ಚುನಾವಣೆ ಮತ್ತು ರಾಜ್ಯದಲ್ಲಿ ಆಗಬೇಕಿರುವ ಕಾರ್ಯ ಪಕ್ಷ ಮತ್ತು ಸರ್ಕಾರ ಯಾವೆಲ್ಲ ಕಾರ್ಯಗಳನ್ನು ಮಾಡಬೇಕು ಎನ್ನುವ ಕುರಿತು ಇಬ್ಬರೂ ಮಾತುಕತೆ ನಡೆಸಿದ್ದೇವೆ ನನಗೆ ನಿರಂತರವಾಗಿ ಯಡಿಯೂರಪ್ಪನವರು ಮಾರ್ಗದರ್ಶಕರು ಪಕ್ಷದಲ್ಲಿ ಪದಾಧಿಕಾರಿಗಳ ಬದಲಾವಣೆ ಮಾಡಿಲ್ಲ ಮಾಧ್ಯಮಗಳಲ್ಲಿ ಮಾತ್ರ ಬದಲಾವಣೆ ಎಂದು ಬರುತ್ತಿದೆ ಎರಡು ಸ್ಥಾನಗಳಿಗೆ ನೇಮಕ ಮಾಡಲಾಗಿದೆ ಪಕ್ಷದಲ್ಲಿ ಒಬ್ಬರಿಗೆ ಒಂದು ಸ್ಥಾನ ಎನ್ನುವ ನಿಯಮದಂತೆ ಯಡಿಯೂರಪ್ಪನವರು ಸ್ಥಾನವನ್ನು ಬಿಟ್ಟುಕೊಟ್ಟರು ನಾನು ರಾಜ್ಯಾಧ್ಯಕ್ಷ ಆದೆ ಅದೇ ರೀತಿ ಸಿ.ಟಿ ರವಿ ಬಿಟ್ಟುಕೊಟ್ಟರು ಅಲ್ಲಿಗೆ ಮಹೇಶ್ ತೆಂಗಿನಕಾಯಿ ಅವರನ್ನು ನೇಮಕ ಮಾಡಲಾಯಿತು ಅದೇ ರೀತಿ ಖಾಲಿ ಸ್ಥಾನಕ್ಕೆ ಸುರಾನಾ ಮತ್ತು ಭಾನುಪ್ರಕಾಶ್ ನೇಮಕ ಮಾಡಲಾಯಿತು ಮುಖ್ಯಮಂತ್ರಿಗಳ ಕೋರಿಕೆಯ ಮೇರೆಗೆ ಈ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳ ಅನುಭವದ ಆಧಾರದಲ್ಲಿ ಪಕ್ಷದ ಕೆಲಸವನ್ನು ಮಾಡುವ ಕೆಲಸ ಮಾಡುತ್ತಿದ್ದೇನೆ ಇವತ್ತು ಕೂಡ ಅವರ ಮಾರ್ಗದರ್ಶನ ಪಡೆದು ಬಂದಿದ್ದೇನೆ ಹಲವು ವರ್ಷಗಳಿಂದ ಹೋರಾಟ ಮಾಡಿರುವ ಅನುಭವ, ಮಾಹಿತಿಯನ್ನು ನಾನು ಪಡೆದಿದ್ದೇನೆ,ಪಕ್ಷದ ಮುಂದಿನ ಸಂಘಟನಾ ಕಾರ್ಯಕ್ಕೆ ಮತ್ತು ಚುನಾವಣೆ ಅವರ ಭೇಟಿ ಬಹಳ ಒಳ್ಳೆಯದಾಯಿತು ಎಂದರು.

ಅನರ್ಹರಿಗೆ ಟಿಕೆಟ್ ಪಕ್ಕಾ!

ಅನರ್ಹ ಶಾಸಕರ ವಿಷಯ, ಮುಂದಿನ ಚುನಾವಣೆ ತಯಾರಿ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಅಮಿತ್ ಶಾ ಜೊತೆ ಚರ್ಚಿಸುತ್ತೇನೆ ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷರು ಮುಖ್ಯಮಂತ್ರಿಗಳ ಮೂಲಕ ಈ ಬಗ್ಗೆ ತೀರ್ಮಾನದ ಸಂದೇಶ ರವಾನಿಸಲಿದ್ದಾರೆ ಆದರೆ ಅನರ್ಹರಿಗೆ ಅನ್ಯಾಯ ಆಗದ ರೀತಿ ನಾವು ನೋಡಿಕೊಳ್ಳಲಿದ್ದೇವೆ ಎಂದರು ಆ ಮೂಲಕ ಕೋರ್ಟ್ ಅನುಮಾತಿ ಸಿಕ್ಕರೆ ಅನರ್ಹರು ಇಲ್ಲದಿದ್ದಲ್ಲಿ ಅನರ್ಹರು ಹೇಳಿದವರಿಗೆ ಟಿಕೆಟ್ ಎನ್ನುವುದನ್ನು ಖಾತ್ರಿಪಡಿಸಿದರು.

ಸಿಎಂ ಒಪ್ಪಿಗೆ ಪಡೆದೇ ಮೇಯರ್ ಅಭ್ಯರ್ಥಿ ಆಯ್ಕೆ:

ಬಿಬಿಎಂಪಿ ಮೇಯರ್ ಆಯ್ಕೆಗೆ ಮುಖ್ಯಮಂತ್ರಿಗಳು ಯಾವುದೇ ಸಮಿತಿ ರಚನೆ ಮಾಡಿಲ್ಲ,ನಾನು ಮೂರು ಬಾರಿ ಸಭೆ ನಡೆಸಿದ್ದೆ,ನಂತರ ಯಡಿಯೂರಪ್ಪ ಪ್ರತ್ಯೇಕ ಸಭೆ ಕರೆದು ಶಾಸಕರು ಪ್ರಮುಖರಿಗೆ ಅಭಿಪ್ರಾಯ ಸಂಗ್ರಹಿಸಿ ಕೆಲವರಿಗೆ ಜವಾಬ್ದಾರಿ ನೀಡಲಾಯಿತು ನಂತರ ನನ್ನ ಮುಂದಾಳತ್ವದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿದರು ಅದರಂತೆ ನಾವು ಸಭೆ ಕರೆದು ಚುನಾವಣೆ ಮುಂದಿರುವ ಪ್ರಯತ್ನ ನಡೆಸಿದೆವು ಅಷ್ಟರಲ್ಲಿ ಚುನಾವಣೆ ಮುಂದೂಡುವ ಪ್ರಯತ್ನ ಆಯತು ಆದರೆ ಅದು ಆಗಲಿಲ್ಲ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಚುನಾವಣೆ ಆಯಿತು ಮತ್ತು ಅಭ್ಯರ್ಥಿ ಆಯ್ಕೆ ಕೂಡ ಅವರ ಸೂಚನೆಯಂತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಸಿಎಂ ಅಭಿಪ್ರಾಯ ಮತ್ತು ಇಲ್ಲಿರುವವರ ಅಭಿಪ್ರಾಯ ಸಂಗ್ರಹಿಸಿ
ಒಮ್ಮತದ ತೀರ್ಮಾನದಿಂದ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ ಬೆಳಗಿನ ಜಾವದವರೆಗೂ ನಾವು ಚರ್ಚೆ ಮಾಡಿ ನಿರ್ಧಾರ ಕೈಗೊಂಡಿದ್ದೇವೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಹೋರಾಟದಿಂದ ಬಂದವರು ಇಂದು ಬಿಜೆಪಿ ಇಷ್ಟು ಎತ್ತರಕ್ಕೆ ಬರಲು ಕಾರಣ ಅವರೇ.ಬಿಎಸ್ವೈ ಮುಖ್ಯಮಂತ್ರಿಯಾದ ಕಾಲದಲ್ಲಿ ಬಹುಮತ ಇರಲಿಲ್ಲ ಕೆಲವರ ಸಹಾಯ ಪಡೆದು ಸರ್ಕಾರ ರಚಿಸಬೇಕಾಯ್ತು ನಂತರ ರಾಜ್ಯದಲ್ಲಿ ನೆರೆ ಬಂದಿತು, ಸರ್ಕಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವ ಅರ್ಥದಲ್ಲಿ ಸಿಎಂ‌ ತಂತಿ ಮೇಲಿನ ನಡಿಗೆ ಹೇಳಿಕೆ ನೀಡಿದ್ದಾರೆ ಅಷ್ಟೇ. ಎಲ್ಲವನ್ನು ಎದುರಿಸುವ ಶಕ್ತಿ ಅವರಿಗಿದೆ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.