ಮೈಸೂರು: ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 1ರ ಶುಕ್ರವಾರ ಬೆಳಗ್ಗೆ 11ಕ್ಕೆ 10 ಮತ್ತು 12ನೇ ತರಗತಿ ಮಕ್ಕಳನ್ನು ಉದ್ದೇಶಿಸಿ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಜೊತೆ ಚರ್ಚೆ ನಡೆಸುವರು. ಈ ಚರ್ಚೆಯಲ್ಲಿ ದೇಶದೆಲ್ಲೆಡೆಯಿಂದ ಆಯ್ದ 40 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಮೈಸೂರಿನ ವಿದ್ಯಾರ್ಥಿಯೂ ಪಾಲ್ಗೊಳ್ಳಲಿದ್ದಾನೆ. ಜವಾಹರ ನವೋದಯ ವಿದ್ಯಾಲಯದ ಎಂ.ಬಿ.ತರುಣ್ ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾನೆ ಎಂದು ಪ್ರಾಚಾರ್ಯ ಜೆ.ಮಧುಸೂಧನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್ಚೆಚ್ಚು ಸಾಲ, ಹೆಚ್ಚೆಚ್ಚು ತುಪ್ಪ!?; ಧನವಿನಿಯೋಗ, ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ..