ETV Bharat / state

ಪಠ್ಯದಲ್ಲಿ ಭಗವದ್ಗೀತೆ ಜಾರಿಗೆ ಯಾರ ಅಪ್ಪಣೆಯೂ ಬೇಕಿಲ್ಲ.. ಪ್ರಮೋದ್‌ ಮುತಾಲಿಕ್ - ಅಡ್ವೋಕೇಟ್ ಜನರಲ್ ಭೇಟಿ ಮಾಡಿ ಮಾತುಕತೆ ನಡೆಸಿದ ಮುತಾಲಿಕ್​

ಹಿಜಾಬ್ ಬಗ್ಗೆ​ ಹೈಕೋರ್ಟ್​ ನೀಡಿರುವ ತೀರ್ಪನ್ನು ವಿರೋಧಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಪ್ರಮೋದ್​ ಮುತಾಲಿಕ್​ ಸೋಮವಾರ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ನ್ಯಾಯಾಂಗ ವ್ಯವಸ್ಥೆ ವಿರೋಧಿಸಿರುವ ಬಗ್ಗೆ ಅಡ್ವೋಕೇಟ್ ಜನರಲ್ ಅವರನ್ನ ಭೇಟಿ ಮಾಡಿ, ನ್ಯಾಯಾಂಗ ನಿಂದನೆ‌ ದೂರು ದಾಖಲಿಸುವ ಕುರಿತು ಮಾತುಕತೆ ನಡೆಸಿದ್ದಾರೆ.

Muthalik
ಶ್ರೀರಾಮ ಸೇನೆ ಸಂಘಟನೆ ಅಧ್ಯಕ್ಷ ಪ್ರಮೋದ್ ಮುತಾಲಿತ್
author img

By

Published : Mar 21, 2022, 4:56 PM IST

ಬೆಂಗಳೂರು : ಹಿಜಾಬ್ ತೀರ್ಪು ವಿರೋಧಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಸಂಘಟನೆ ಅಧ್ಯಕ್ಷ ಪ್ರಮೋದ್ ಮುತಾಲಿತ್ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ.

ತಮಿಳುನಾಡಿನ ಮುಸ್ಲಿಂ ಸಂಘಟನೆ ಕಾರ್ಯಕರ್ತ ಜಡ್ಜ್ ವಿರುದ್ಧ ಹೇಳಿಕೆ ನೀಡಿದ್ದಾನೆ. ಸಿಜೆ ಅವರ ಪ್ರವಾಸದ ಬಗ್ಗೆಯೂ ಉಲ್ಲೇಖಿಸಿ ಮಾತನಾಡಿದ್ದಾನೆ.

ಈಗಾಗಲೇ ದೂರು ದಾಖಲಾಗಿದ್ದು, ಅದೇ ಕೇಸ್​​ನಲ್ಲೇ ಸೇರಿಸಿ ಪೊಲೀಸರು ಕ್ರಮ ತೆಗೆದುಕೊಳ್ಳುವವರಿದ್ದಾರೆ. ನ್ಯಾಯಾಂಗ ವ್ಯವಸ್ಥೆ ವಿರುದ್ಧ ಮಾತನಾಡುವವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಡ್ಜ್‌ ವಿರುದ್ಧ ಮಾತನಾಡಿದ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಶ್ರೀರಾಮ ಸೇನೆ ಸಂಘಟನೆ ಅಧ್ಯಕ್ಷ ಪ್ರಮೋದ್ ಮುತಾಲಿತ್ ಆಗ್ರಹಿಸಿರುವುದು..

ನ್ಯಾಯಾಂಗ ವ್ಯವಸ್ಥೆ ವಿರೋಧಿಸಿರುವ ಬಗ್ಗೆ ಅಡ್ವೋಕೇಟ್ ಜನರಲ್ ಅವರನ್ನ ಭೇಟಿ ಮಾಡಿ, ನ್ಯಾಯಾಂಗ ನಿಂದನೆ‌ ದೂರು ದಾಖಲಿಸುವ ಕುರಿತು ಮಾತುಕತೆ ನಡೆಸಿದ್ದೇವೆ. ಹಿಜಾಬ್ ಧರಿಸಲು ಅನುಮತಿ ಕೋರುವಂತೆ ಧಾವೆ ಹೂಡಿದ್ದ ಉಡುಪಿಯ 6 ಯುವತಿಯರು ಕೂಡ ತೀರ್ಪಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಅವರ ವಿರುದ್ಧವೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದೇವೆ.

ಇದನ್ನೂ ಓದಿ: ಶೀಘ್ರದಲ್ಲೇ ಹೊಸದಾಗಿ 3000 ಭೂಮಾಪಕರ ನೇಮಕ : ಸಚಿವ ಆರ್. ಅಶೋಕ್

ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮುತಾಲಿಕ್, ಜೀವನದಲ್ಲಿ ಯಾವ ರೀತಿ ಬದುಕಬೇಕು ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿದೆ. ಭಗವದ್ಗೀತೆ ಜಾರಿಗೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.