ETV Bharat / state

ಮಸ್ಕಿಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಅದಲು-ಬದಲು; ಸಕ್ಸೆಸ್​ ಆಗಲಿದೆಯಾ ಆಪರೇಷನ್ ಹಸ್ತ ..?

ಆಪರೇಷನ್ ಕಮಲಕ್ಕೆ ಪ್ರತಿಯಸ್ತ್ರವಾಗಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಯನ್ನೇ ಬಲೆಗೆ ಬೀಳಿಸಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಸನಗೌಡ ತುರುವೀಹಾಳ್ ಜೊತೆ ಒಂದು ಸುತ್ತು ಮಾತುಕತೆ ನಡೆಸಿದ್ದರು. ಇಂದು ರಾಯಚೂರು ಜಿಲ್ಲೆಯ ಕಾಂಗ್ರೆಸ್ ನಾಯಕರು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಜೊತೆ ಚರ್ಚಿಸಿ ತುರುವೀಹಾಳ್ ಸೇರ್ಪಡೆಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಕೇವಲ 213 ಮತಗಳಿಂದ ಸೋತಿದ್ದ ಬಸನಗೌಡ ಇದೀಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಪ್ರತಾಪ್ ಗೌಡ ಪಾಟೀಲ್​ ಗೆ ಸವಾಲು ಹಾಕಲಿದ್ದಾರೆ. ಅಂದಹಾಗೆ, ಇದೇ ವಾರದಲ್ಲಿ ತುರುವೀಹಾಳ್ ಕಾಂಗ್ರೆಸ್ ತೆಕ್ಕೆಗೆ ಸೇರಲಿದ್ದಾರೆ ಎಂಬ ಮಾಹಿತಿ ಇದೆ.

Musky Assembly constituency by election: National Party Candidates exchange
ಮಸ್ಕಿಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಅದಲು-ಬದಲು: ಪ್ರಯತ್ನಕ್ಕೆ ಜೀವ ತುಂಬಿದ ಕಾಂಗ್ರೆಸ್!
author img

By

Published : Nov 7, 2020, 9:21 PM IST

ಬೆಂಗಳೂರು: ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಗೆ ಮುನ್ನವೇ ಕಾಂಗ್ರೆಸ್ ಪಕ್ಷ ಗೆಲುವಿನ ರಣತಂತ್ರ ಹೆಣೆಯಲು ಮುಂದಾಗಿದೆ. ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಬಿಜೆಪಿಗೆ ಶಾಕ್ ನೀಡಲು ಅಂತಿಮ ಹಂತದ ಸಿದ್ಧತೆ ಕೂಡ ನಡೆದಿದೆ.

Musky Assembly constituency by election: National Party Candidates exchange
ಮಸ್ಕಿಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಅದಲು-ಬದಲು: ಪ್ರಯತ್ನಕ್ಕೆ ಜೀವ ತುಂಬಿದ ಕಾಂಗ್ರೆಸ್!

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಜಯಗಳಿಸಿದ್ದ ಪ್ರತಾಪ್​ ಗೌಡ ಪಾಟೀಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಬಸನಗೌಡ ತುರುವೀಹಾಳ್ ಕೇವಲ 213 ಮತಗಳ ಅಂತರದ ಸೋಲು ಕಂಡಿದ್ದರು. ಫಲಿತಾಂಶ ಘೋಷಣೆ ಬೆನ್ನಲ್ಲೇ ತುರುವೀಹಾಳ್​​ ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇತ್ತೀಚೆಗೆ ಪಕ್ಷದ ಮುಖಂಡರ ಮನವಿ ಮೇರೆಗೆ ಕೇಸನ್ನು ವಾಪಸ್ ಪಡೆದಿದ್ದ ಅವರು ಕಾಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಎಲ್ಲವೂ ಕನಕಪುರ ಬಂಡೆ ಯೋಜನೆಗೆ ತಲೆಕೆಳಗಾಗಿದೆ.

ಹೌದು.. ಆಪರೇಷನ್ ಕಮಲಕ್ಕೆ ಪ್ರತಿಯಸ್ತ್ರವಾಗಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಯನ್ನೇ ಬಲೆಗೆ ಬೀಳಿಸಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಸನಗೌಡ ತುರುವೀಹಾಳ್ ಜೊತೆ ಒಂದು ಸುತ್ತು ಮಾತುಕತೆ ನಡೆಸಿದ್ದರು. ಇಂದು ರಾಯಚೂರು ಜಿಲ್ಲೆಯ ಕಾಂಗ್ರೆಸ್ ನಾಯಕರು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಜೊತೆ ಚರ್ಚಿಸಿ ತುರುವೀಹಾಳ್ ಸೇರ್ಪಡೆಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಕೇವಲ 213 ಮತಗಳಿಂದ ಸೋತಿದ್ದ ಬಸವನಗೌಡ ಇದೀಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಪ್ರತಾಪ್ ಗೌಡ ಪಾಟೀಲ್​ ಗೆ ಸವಾಲು ಹಾಕಲಿದ್ದಾರೆ. ಅಂದಹಾಗೆ, ಇದೇ ವಾರದಲ್ಲಿ ತುರುವೀಹಾಳ್ ಕಾಂಗ್ರೆಸ್ ತೆಕ್ಕೆಗೆ ಸೇರಲಿದ್ದಾರೆ ಎಂಬ ಮಾಹಿತಿ ಇದೆ.

ನಿಯೋಗ ಭೇಟಿ:

ಮಾಜಿ ಸಂಸದ ಬಿ.ವಿ. ನಾಯಕ್, ಶಾಸಕ ಬಸನಗೌಡ ದದ್ದಲ್, ಅಮರೇಗೌಡ ಬಯ್ಯಾಪೂರ, ಮಾಜಿ ಎಂಎಲ್​ಸಿ ಬೋಸರಾಜು, ಶಾಸಕ ಡಿ.ಎಸ್. ಹೂಲಗೇರಿ, ರಾಯಚೂರು ಜಿಲ್ಲಾ ಮುಖಂಡರು ಇಂದು ಸಿದ್ದರಾಮಯ್ಯ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಕೂಡ ಇದಕ್ಕೆ ಒಪ್ಪಿದ್ದಾರೆ ಎನ್ನಲಾಗುತ್ತಿದೆ.

ಪ್ರತಾಪ್​ ಗೌಡ ಪಾಟೀಲ್ ಸದ್ಯ ಈ ಭಾಗದ ಪ್ರಭಾವಿ ನಾಯಕ. ರಾಜಕೀಯ ಬದುಕಲ್ಲಿ ಮೂರು ಪಕ್ಷ ಬದಲಿಸಿದರೂ ಜನ ಇವರ ಕೈ ಹಿಡಿದಿದ್ದಾರೆ. ಇದೀಗ ಅವರು ತವರಿಗೆ ಮರಳಿದ್ದಾರೆ ಹಾಗೂ ಆಡಳಿತ ಪಕ್ಷದ ಸದಸ್ಯರಾಗಿ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಆದರೆ ರಾಜಕೀಯ ನೆಲೆ ಕಳೆದುಕೊಳ್ಳುವ ಆತಂಕದಲ್ಲಿರುವ ಬಸನಗೌಡ ತುರುವೀಹಾಳ್ ಕಾಂಗ್ರೆಸ್ ಸೇರಿ ಅಸ್ತಿತ್ವ ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ.

2008 ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಆಗ ಬಿಎಸ್​ವೈ ಜೊತೆ ಕೆಜೆಪಿಗೆ ತೆರಳಿದ್ದರು. ಆದರೆ, 2013 ರಲ್ಲಿ ಕೆಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಶಾಸಕರಾಗಿದ್ದರು. 2018 ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಇವರು ಬಿಎಸ್​ವೈ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಕಾರಣಕ್ಕೆ 17 ಮಂದಿ ರಾಜೀನಾಮೆ ನೀಡಿದ ಶಾಸಕರಲ್ಲಿ ಒಬ್ಬರಾಗಿ ಬಿಜೆಪಿಗೆ ಜಿಗಿದಿದ್ದರು.

ರಾಜಕೀಯ ಇತಿಹಾಸ:

2008ರಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದ ಪ್ರತಾಪ್ ಗೌಡ ಪಾಟೀಲ್ 2008ರಲ್ಲಿ ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ತಿಮ್ಮಪ್ಪ ವಿರುದ್ಧ 7,643 ಮತಗಳ ಅಂತರದ ಗೆಲುವು ಸಾಧಿಸಿದ್ದರು. 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆಜೆಪಿಯ ಮಹದೇವಪ್ಪಗೌಡ ವಿರುದ್ಧ 19,147 ಮತಗಳ ಅಂತರದ ಗೆಲುವು ಹಾಗೂ 2018 ರಲ್ಲಿ ಬಿಜೆಪಿಯ ಬಸವನಗೌಡ ತುರುವೀಹಾಳ್ ವಿರುದ್ಧ 213 ಮತಗಳ ಅಲ್ಪ ಅಂತರದಿಂದ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದರು.

ಕ್ಷೇತ್ರದ ಇತಿಹಾಸ ಗಮನಿಸಿದರೆ ಇದುವರೆಗೂ ನಡೆದ 12 ವಿಧಾನಸಭೆ ಚುನಾವಣೆಗಳ ಪೈಕಿ ಕಾಂಗ್ರೆಸ್ ಅತಿ ಹೆಚ್ಚು ಸಾರಿ ಅಂದರೆ 6 ಸಾರಿ ಗೆಲುವು ಸಾಧಿಸಿದೆ. ಜೆಎನ್​ಪಿ ಎರಡು, ಜನತಾದಳ, ಪಕ್ಷೇತರ, ಜೆಡಿಎಸ್ ಹಾಗೂ ಬಿಜೆಪಿ ತಲಾ ಒಂದು ಸಾರಿ ಗೆದ್ದಿವೆ. ಆದರೆ, ಸದ್ಯ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪ್ರತಾಪ್ ಗೌಡ ಮಸ್ಕಿ ಪ್ರಬಲರಾಗಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಮೂಲ ಮತದಾರರನ್ನು ಉಳಿಸಿಕೊಳ್ಳಲು ಸಫಲವಾದರೆ ಬಸವನಗೌಡ ತುರುವೀಹಾಳ್ ಕರೆತಂದದ್ದು ಸಾರ್ಥಕವಾಗಲಿದೆ. ಆದರೆ, ಸದ್ಯ ಕಾಂಗ್ರೆಸ್ ಗೆ ಇಲ್ಲಿ ಸೂಕ್ತ ಅಭ್ಯರ್ಥಿ ಇಲ್ಲ. ಹಾಗಾಗಿ ಆಪರೇಷನ್ ಅನಿವಾರ್ಯ.

ಇನ್ನು ಈ ಮಧ್ಯೆ ಬಿಜೆಪಿ ಕೂಡ ತುರುವೀಹಾಳ್ ಮನವೊಲಿಕೆಗೆ ಯತ್ನ ನಡೆಸಿದೆ. ಎಷ್ಟು ಸಫಲವಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಕೇಂದ್ರಿತವಾಗಿರುವ ಕ್ಷೇತ್ರದಲ್ಲಿ ಯಡಿಯೂರಪ್ಪನವರ ಹಿಡಿತ ಉತ್ತಮವಾಗಿದ್ದು, ಸದ್ಯ ಬಿಜೆಪಿಗೆ ನಿರೀಕ್ಷೆ ಇದೆ. ಆದರೆ, ಬಸನಗೌಡ ತುರುವೀಹಾಳ್ ಸೇರ್ಪಡೆಯಾದರೆ ಕಾಂಗ್ರೆಸ್ ಗೆ ಆನೆ ಬಲ ಬರಲಿದೆ. ಉಪಚುನಾವಣೆ ಕಣ ಇನ್ನಷ್ಟು ರಂಗೇರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.