ಬೆಂಗಳೂರು : ಸಚಿವ ಸ್ಥಾನ ಖಾತ್ರಿಯಾದ ಬಳಿಕ ಮಾಧ್ಯಮಗಳ ಜೊತೆ ಮುರುಗೇಶ್ ನಿರಾಣಿ ಮಾತನಾಡಿ, ಸಂಜೆ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಎಷ್ಟು ಜನ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ ಅನ್ನೋದು ಸಿಎಂ ಸಾಹೇಬ್ರಿಗೆ ಗೊತ್ತು, ಯತ್ನಾಳರು ನಮಗಿಂತ ಹಿರಿಯರು, ನಮಗಿಂತ ಮುಂಚೆ ರಾಜಕೀಯಕ್ಕೆ ಬಂದವರು. ಇದು ಸಿಎಂ ಹಾಗೂ ವರಿಷ್ಠರ ನಿರ್ಧಾರ ಎಂದು ಯತ್ನಾಳ್ಗೆ ಸಚಿವ ಸ್ಥಾನ ನೀಡದಿರುವ ಪ್ರಶ್ನೆ ಕುರಿತಂತೆ ಉತ್ತರಿಸಿದರು.
ಇನ್ನು ರೇಣುಕಾಚಾರ್ಯ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೇರೆಯವರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ, ಇಲಾಖೆ ಸಣ್ಣದು ದೊಡ್ಡದು ಅಂತ ಇರಲ್ಲ, ಯಾವುದೇ ಇಲಾಖೆ ಸಿಕ್ರೂ ಜೀವ ತುಂಬಿ ಕೆಲಸ ಮಾಡಬೇಕು ಎಂದರು.
ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಎಂದು ಮತ್ತೆ ಒತ್ತಿ ಹೇಳಿದ ನಿರಾಣಿ, ಕಳೆದ ಮೂವತ್ತು ವರ್ಷದಿಂದ ನಾನು ಬಿಜೆಪಿಯಲ್ಲಿ ಇದ್ದೇನೆ. ನಾಳೆ ದಿನ ಶಾಸಕ ಸ್ಥಾನ ಕೊಟ್ಟಿಲ್ಲ ಅಂದ್ರೆ ಕೂಡ ಪಕ್ಷದ ವಿರುದ್ಧ ಹೋಗಲ್ಲ ಎಂದು ತಿಳಿಸಿದ್ರು.
ನಾನು ಮತ್ತು ಉಮೇಶ್ ಕತ್ತಿ ಜತೆಗೆ ಇದ್ದೇವೆ. ಇಬ್ಬರಿಗೆ ಕೊಡ್ತಾರೆ ಅನ್ನೋದು ನಂಗೆ ಗೊತ್ತಿದೆ. ಕಳೆದ ಬಾರಿ ಕೊಟ್ಟ ಬೃಹತ್ ಕೈಗಾರಿಕಾ ಖಾತೆಯನ್ನು ನಾನು ಬಹಳ ಶೃದ್ಧೆಯಿಂದ ನಿಭಾಯಿಸಿದ್ದೆ, ಆ ಆಧಾರದ ಮೇಲೆ ನಂಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಅಂದುಕೊಂಡಿದ್ದೇನೆ ಎಂದು ನಿರಾಣಿ ಹೇಳಿದ್ರು.
ಇದನ್ನೂ ಓದಿ:ರಾಕಿಂಗ್ ಸ್ಟಾರ್ಗೆ ಬಿಗ್ ಶಾಕ್; ಯಶ್ಗೆ ಆರೋಗ್ಯ ಇಲಾಖೆ ನೋಟಿಸ್