ETV Bharat / state

ಖಾರದ ಪುಡಿ ಎರಚಿ ಬೆಂಗಳೂರಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ರೌಡಿಶೀಟರ್​​ಗೆ ಖಾರದ ಪುಡಿ ಎರಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯ ಶಂಕೆ
author img

By

Published : Sep 23, 2019, 3:07 PM IST

ಬೆಂಗಳೂರು: ಖಾರದ ಪುಡಿ ಎರಚಿ ತಡರಾತ್ರಿ ರೌಡಿಶೀಟರ್​ವೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ, ಯಲಹಂಕ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

ಯಲಹಂಕದ ದಿಲೀಪ್ ಕೊಲೆಯಾಗೀಡಾಗಿರುವ ರೌಡಶೀಟರ್​. ಈತನ ಮೇಲೆ ಸರಗಳ್ಳತನಗಳ ಹಿನ್ನೆಲೆಯಲ್ಲಿ ಯಲಹಂಕ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು. ಯಲಹಂಕದ ಸುತ್ತಮುತ್ತಲಿನಲ್ಲಿ ಅಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಸರಗಳ್ಳತನ ಪ್ರಕರಣದಲ್ಲಿ ರೌಡಿಪಟ್ಟಿಯಲ್ಲಿ ಗುರ್ತಿಸಿಕೊಂಡಿದ್ದ ದಿಲೀಪ್, ಇತ್ತೀಚೆಗೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೇ ಆಟೋ ಓಡಿಸಿಕೊಂಡು ಇದ್ದ. ನಿನ್ನೆ ರಾತ್ರಿ ಮನೆಗೆ ಹೋಗದೆ ರಸ್ತೆ ಬದಿಯಲ್ಲೇ ಮಲಗಿದ್ದ ಈತನ ಮೇಲೆ ಐದಾರು ಜನ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಮುಖಕ್ಕೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಮುಖ ಗುರುತು ಸಿಗದ ರೀತಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ.

ಹಳೇ ವೈಷಮ್ಯದ ಹಾಗೂ ವಿವಾಹೇತರ ಸಂಬಂಧ ಹಿನ್ನಲೆ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Intro:KN_BNG_01_23_murder_Ambarish_7203301
Slug: ಕಾರದ ಪುಡಿ ಎರಚಿ ರೌಡಿಶೀಟರ್ ಹತ್ಯೆ.: ಹಳೆ ವೈಷಮ್ಯದಿಂದ ಕೊಲೆಯ ಶಂಕೆ.

ಬೆಂಗಳೂರು: ಕಾರದ ಪುಡಿ ಎರಚಿ ತಡರಾತ್ರಿ ರೌಡಿಶೀಟರ್ ಹತ್ಯೆ ಮಾಡಿರುವ ಘಟನೆ ನೆನ್ನೆ ತಡರಾತ್ರಿ ಯಲಹಂಕ ರೈಲ್ವೆ ಸ್ಟೇಷನ್ ಬಳಿ ನಡೆದಿದೆ..

ಯಲಹಂಕ ರೌಡಿಶೀಟರ್ ದಿಲೀಪ್ ಕೊಲೆಯಾದ ಅಟೋ ಚಾಲಕ.. ಇತನ ಮೇಲೆ ಸರಗಳ್ಳತನಗಳ ಹಿನ್ನೆಲೆಯಲ್ಲಿ ಯಲಹಂಕ ಪೊಲೀಸ್ ಠಾಣೆ ಯಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು. ಈತ ಯಲಹಂಕದ ಸುತ್ತಮುತ್ತಲಿನಲ್ಲಿ ಅಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ.. ಸರಗಳ್ಳತನ ಪ್ರಕರಣದಲ್ಲಿ ರೌಡಿಪಟ್ಟಿಯಲ್ಲಿ ಗುರ್ತಿಸಿಕೊಂಡಿದ್ದ ದಿಲೀಪ್ ಇತ್ತೀಚಿಗೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೇ ಆಟೋ ಓಡಿಸಿಕೊಂಡು ಇದ್ದ... ನಿನ್ನೆ ರಾತ್ರಿ ಮನೆಗೆ ಹೋಗದೆ ರಸ್ತೆ ಬದಿಯಲ್ಲೇ ಮಲಗಿದ್ದ ಈತನ ಮೇಲೆ ಐದಾರು ಜನ ದುಷ್ಕರಮಿಗಳು ದಾಳಿ ಮಾಡಿದ್ದಾರೆ.. ದಾಳಿ ವೇಳೆ ಮುಖಕ್ಕೆ ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಮುಖ ಗುರುತು ಸಿಗದ ರೀತಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ..

ಹಳೇ ವೈಷಮ್ಯ ದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಗಿದ್ದಲ್ಲದೇ ಅನೈತಿಕ ಸಂಬಂಧದಿಂದಲೂ ಕೊಲೆಯಾಗಿರಬಹುದು ಅನ್ನೋ ಅನಿಮಾನ ವ್ಯಕ್ತವಾಗುತ್ತಿದೆ.. ಇನ್ನು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.